HomeLatest Newsಕುಂಭಮೇಳ ಸುಂದರಿ ‘ಮೊನಾಲಿಸಾ’ ಮದುವೆಯಲ್ಲಿ ಬಿಗ್ ಟ್ವಿಸ್ಟ್ : ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ...

ಕುಂಭಮೇಳ ಸುಂದರಿ ‘ಮೊನಾಲಿಸಾ’ ಮದುವೆಯಲ್ಲಿ ಬಿಗ್ ಟ್ವಿಸ್ಟ್ : ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್ ದಾಖಲು !

ಹೈದರಾಬಾದ್ : ಕಳೆದ ವರ್ಷ ಕುಂಭಮೇಳದಲ್ಲಿ ಮಣಿಗಳನ್ನು (Beads) ಮಾರಾಟ ಮಾಡುತ್ತಾ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಿದ್ದ ಮೊನಾಲಿಸಾ ಹೆಸರು ಈಗ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ತನ್ನ ಪ್ರಿಯತಮ ಫರ್ಮಾನ್ ಖಾನ್‌ನನ್ನು ಪ್ರೀತಿಸಿ ಮದುವೆಯಾಗುವ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದ ಈಕೆಯ ಜೀವನದಲ್ಲಿ ಈಗ ಊಹಿಸಲಾಗದ ಟ್ವಿಸ್ಟ್ ಸಿಕ್ಕಿದೆ.

ಹೌದು.   ಕುಂಭಮೇಳದಲ್ಲಿ ಮಣಿ ಮಾರುತ್ತಾ ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದ ಮೊನಾಲಿಸಾ ಮದುವೆ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು, ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಾಗಿದೆ. ಮದುವೆಯ ಸಮಯದಲ್ಲಿ ಮೊನಾಲಿಸಾ ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯಲ್ಲಿ ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

·ಕೇರಳದ ದೇವಸ್ಥಾನವೊಂದರಲ್ಲಿ ನಡೆದ ಇವರ ಮದುವೆಯು ಮೊದಲಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.ಈ ಮೊದಲು ಈ ಮದುವೆಯನ್ನು ವಿರೋಧಿಸಿದ್ದ ನಿರ್ದೇಶಕರೊಬ್ಬರ ಮೇಲೆ ಮೊನಾಲಿಸಾ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಈಗ ಅಧಿಕೃತ ತನಿಖೆಯಿಂದ ಆಕೆ ‘ಮೈನರ್’ ಎಂಬುದು ಸಾಬೀತಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿವಾದಗಳ ಸರಮಾಲೆ

ಕೇರಳದ ಪೂವಾರ್‌ನಲ್ಲಿರುವ ದೇವಸ್ಥಾನವೊಂದರಲ್ಲಿ ಈ ಜೋಡಿ ವಿವಾಹವಾದಾಗಿನಿಂದಲೂ ಒಂದಿಲ್ಲೊಂದು ವಿವಾದಗಳು ಬೆನ್ನುಬಿದ್ದಿವೆ. ಇವರ ಮದುವೆಯನ್ನು ನಿರ್ದೇಶಕ ಸನೋಜ್ ಮಿಶ್ರಾ ‘ಲವ್ ಜಿಹಾದ್’ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮೊನಾಲಿಸಾ ಅವರು ನಿರ್ದೇಶಕರ ಮೇಲೆಯೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು.

ಪೋಕ್ಸೋ ಕೇಸ್ ದಾಖಲಾಗಿದ್ದು ಏಕೆ?

ವಿವಾದಗಳು ತಣ್ಣಗಾದವು ಎನ್ನುವಷ್ಟರಲ್ಲಿ ಮೊನಾಲಿಸಾ ಅಪ್ರಾಪ್ತ ಎಂಬ ವಿಷಯ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ವಿಚಾರಣೆಯಲ್ಲಿ, ಮದುವೆಯ ಸಮಯದಲ್ಲಿ ಮೊನಾಲಿಸಾ ಇನ್ನೂ ಮೈನರ್ (ಅಪ್ರಾಪ್ತ ವಯಸ್ಕಳು) ಎಂಬುದು ಸಾಬೀತಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ನೆಟ್ಟಿಗರಲ್ಲಿ ಚರ್ಚೆ:

ಮಣಿ ಮಾರುವ ಹುಡುಗಿ ಸ್ಟಾರ್ ಆಗಿದ್ದು, ನಂತರ ಧರ್ಮ ಬದಲಿಸಿ ಮದುವೆಯಾದದ್ದು, ಈಗ ಆಕೆ ಅಪ್ರಾಪ್ತ ಎಂಬ ಕಾರಣಕ್ಕೆ ಪತಿ ಜೈಲು ಪಾಲಾಗುವ ಪರಿಸ್ಥಿತಿ ಬಂದಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ನಿಜವಾಗಿಯೂ ಬಾಲ್ಯ ವಿವಾಹವೇ ಅಥವಾ ಯಾವುದಾದರೂ ಸಂಚಿನ ಭಾಗವೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಕುಂಭಮೇಳದ ಸುಂದರಿಯ ಜೀವನವೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular