HomeIPL 2026ಕೆಕೆಆರ್ vs ಪಂಜಾಬ್ ಪಂದ್ಯ ಮಳೆಗೆ ರದ್ದಾದ ಬೆನ್ನಲ್ಲೇ ಇಂದು ನಡೆಯಬೇಕಿರುವ ಮುಂಬೈ vs ರಾಜಸ್ಥಾನ್...

ಕೆಕೆಆರ್ vs ಪಂಜಾಬ್ ಪಂದ್ಯ ಮಳೆಗೆ ರದ್ದಾದ ಬೆನ್ನಲ್ಲೇ ಇಂದು ನಡೆಯಬೇಕಿರುವ ಮುಂಬೈ vs ರಾಜಸ್ಥಾನ್ ಪಂದ್ಯಕ್ಕೂ ಮುನ್ನ ಭಾರೀ ಮಳೆ!

ಇಂದು ( ಏಪ್ರಿಲ್ 7 ) ಗುವಾಹಟಿಯಲ್ಲಿ ಐಪಿಎಲ್ 2026ರ ಲೀಗ್ ಹಂತದ 13ನೇ ಪಂದ್ಯ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದು, ಪಂದ್ಯ ಆರಂಭಕ್ಕೂ ಮುನ್ನ ವರುಣನ ಆಗಮನವಾಗಿದೆ.

ಹೌದು, ನಿನ್ನೆಯ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಮೊದಲ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ ಆರಂಭವಾಗುತ್ತಿದ್ದಂತೆ ಮಳೆಯ ಆಗಮನವಾದ ಕಾರಣ ಪಂದ್ಯ ರದ್ದಾಯಿತು. ರಾತ್ರಿ ಹತ್ತು ಗಂಟೆಯಾದರೂ ಸಹ ತುಂತುರು ಮಳೆ ನಿಲ್ಲದ ಕಾರಣ ಪಂದ್ಯ ಪುನರಾಂಭವಾಗದೇ ನಿಂತುಹೋಯಿತು.

ಇನ್ನು ಇಂದಿನ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಬೇಕಿದ್ದು, ಈಗಾಗಲೇ ಮಳೆ ಸುರಿಯುತ್ತಿದೆ. 6.15ರ ಸಮಯದಲ್ಲೂ ಸಹ ಮಳೆ ಸುರಿಯುತ್ತಿದ್ದು, ಸಂಜೆ 7.13ರವರೆಗೂ ಆಲಿಕಲ್ಲು ಮಳೆಯಾಗಲಿದೆ ಎಂದು ಅಕ್ಯೂವೆದರ್ ಆರೆಂಜ್ ಅಲರ್ಟ್ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಈ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಸಿಗಲಿದೆ. ರಾಜಸ್ಥಾನ್ ರಾಯಲ್ಸ್ ಇಲ್ಲಿಯವರೆಗೆ ಆಡಿರುವ ಎರಡು ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್ ಆರನೇ ಸ್ಥಾನದಲ್ಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular