HomeLatest NewsSHOCKING : ಖ್ಯಾತ ನಟಿಯನ್ನು ತಬ್ಬಿಕೊಂಡು ಮುತ್ತಿಟ್ಟ ಅಭಿಮಾನಿ : ಶಾಕಿಂಗ್ ವೀಡಿಯೋ ವೈರಲ್ |WATCH...

SHOCKING : ಖ್ಯಾತ ನಟಿಯನ್ನು ತಬ್ಬಿಕೊಂಡು ಮುತ್ತಿಟ್ಟ ಅಭಿಮಾನಿ : ಶಾಕಿಂಗ್ ವೀಡಿಯೋ ವೈರಲ್ |WATCH VIDEO

ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಅವರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಜುಗುರ ಉಂಟುಮಾಡುವ ಘಟನೆಯೊಂದು ಎದುರಾಗಿದೆ. ಪಾಲಕ್ಕಾಡ್‌ನಲ್ಲಿ ನಡೆದ ಜ್ಯುವೆಲ್ಲರಿ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾರ್ಚ್ 15ರಂದು ಪಾಲಕ್ಕಾಡ್‌ನಲ್ಲಿ ಜ್ಯುವೆಲ್ಲರಿ ಮಳಿಗೆಯ ಉದ್ಘಾಟನಾ ಸಮಾರಂಭಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ.ನಟಿ ಮಂಜು ವಾರಿಯರ್ ವೇದಿಕೆಯ ಮೇಲೆ ನಿಂತು ಜನರೊಂದಿಗೆ ಮಾತನಾಡುತ್ತಿದ್ದಾಗ, ಅಭಿಮಾನಿಯೊಬ್ಬರು (ಮಹಿಳೆ) ದಿಢೀರನೆ ವೇದಿಕೆ ಹತ್ತಿ ಬಂದು ನಟಿಗೆ ಬಲವಂತವಾಗಿ ಮುತ್ತಿಟ್ಟಿದ್ದಾರೆ.

ಈ ಅನಿರೀಕ್ಷಿತ ಘಟನೆಯಿಂದ ಮಂಜು ವಾರಿಯರ್ ದಂಗಾಗಿದ್ದಾರೆ. ಅಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ತಕ್ಷಣವೇ ಆ ಮಹಿಳೆಯನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ. ನಿರೂಪಕಿ ಕೂಡ ಮೈಕ್‌ನಲ್ಲಿ “ಇದು ಸರಿಯಾದ ವರ್ತನೆಯಲ್ಲ” ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿಗಳು ಬಂದಾಗ ಅವರಿಗೆ ಭದ್ರತೆ ನೀಡುವುದು ದೊಡ್ಡ  ಸವಾಲಾಗಿದೆ. ಅಭಿಮಾನಿಗಳ ಅತಿಯಾದ ಪ್ರೀತಿ ಅಥವಾ ಅತಿರೇಕದ ವರ್ತನೆಯಿಂದ ನಟ-ನಟಿಯರು ಆಗಾಗ ಇಂತಹ ಮುಜುಗುರದ ಪ್ರಸಂಗಗಳನ್ನು ಎದುರಿಸುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಂಜು ವಾರಿಯರ್ ಅವರು ಸದ್ಯ ‘ಎಂಬುರಾನ್’ ಚಿತ್ರದ ಯಶಸ್ಸಿನ ನಂತರ ವಿವಿಧ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಆರೋ’ ಎಂಬ ಕಿರುಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯ ನಂತರ ಆ ಅಭಿಮಾನಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, “ನಾನು ಈ ರೀತಿ ಮಾಡಿದ್ದು ಅವಳ ಮೇಲಿರುವ ಪ್ರೀತಿಯಿಂದಾಗಿ” ಎಂದು ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಭಿಮಾನ ಎನ್ನುವುದು ಗೌರವಯುತವಾಗಿರಬೇಕು, ಈ ರೀತಿ ಅನುಚಿತವಾಗಿ ವರ್ತಿಸುವುದು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ. ಕಲಾವಿದರ ವೈಯಕ್ತಿಕ ಘನತೆ ಮತ್ತು ಸಾರ್ವಜನಿಕವಾಗಿ ಅವರ ಸುರಕ್ಷತೆಯ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದು, ಅಭಿಮಾನ ಮತ್ತು ಅತಿಕ್ರಮಣದ ನಡುವಿನ ವ್ಯತ್ಯಾಸವನ್ನು ಜನರು ತಿಳಿಯಬೇಕು ಎಂದು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular