ಭೋಪಾಲ್: ಬಿ.ಫಾರ್ಮ್ ವಿದ್ಯಾರ್ಥಿಯೊಬ್ಬ ಮನೆಯವರಿಗೆ ವಿಡಿಯೋ ಕಾಲ್ ಮಾಡಿ ತಲೆಗೆವ್ ಗುಂಡು ಹಾರಿಸಿಕೊಂಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಎಂಐಜಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಬಿ.ಫಾರ್ಮಾ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .
ವಿದ್ಯಾರ್ಥಿಯ ತಂದೆ ತರಕಾರಿ ಖರೀದಿಸಲು ಹೊರಗೆ ಹೋಗಿದ್ದರು, ಮನೆಯಲ್ಲಿ ಪಿಸ್ತೂಲ್ ಇತ್ತು. ಮನೆಯವರಿಗೆ ವೀಡಿಯೊ ಕರೆ ಮಾಡಿದ ಸ್ವಲ್ಪ ಸಮಯದ ನಂತರ ವಿದ್ಯಾರ್ಥಿ, ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
ಮೃತ ವಿದ್ಯಾರ್ಥಿಯನ್ನು ಸೌರಭ್ ಪಟೇಲ್ ಎಂದು ಗುರುತಿಸಲಾಗಿದೆ. ಮೈಹಾರ್ ಮೂಲದವರಾಗಿದ್ದು, ಇಂದೋರ್ ನ ನೆಹರು ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಫಾರ್ಮಾ ವಿದ್ಯಾರ್ಥಿಯಾಗಿದ್ದರು.
ಘಟನೆ ನಡೆದ ಸಮಯದಲ್ಲಿ, ಸೌರಭ್‌ನ ರೂಮ್‌ಮೇಟ್‌ಗಳು ಮುಂಭಾಗದ ಕೋಣೆಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಅವನು ತನ್ನ ಕುಟುಂಬದೊಂದಿಗೆ ವೀಡಿಯೊ ಕರೆ ಮಾಡಲು ಹೋಗಿದ್ದ ಬಳಿಕ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಎಸಿಪಿ ಹಿಮಾನಿ ಮಿಶ್ರಾ ತಿಳಿಸಿದ್ದಾರೆ. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.
ಆತನ ರೂಮ್ ಮೇಟ್ ನಯನ್ ಹೇಳುವ ಪ್ರಕಾರ, ನಮಗೆ ದೊಡ್ಡ ಶಬ್ದ ಕೇಳಿತ್ತು ಮೊದಲು ಮೊಬೈಲ್ ಫೋನ್ ಸ್ಫೋಟಗೊಂಡಿದೆ ಎಂದು ಭಾವಿಸಿದ್ದೆವು. ನಾವು ಅಡುಗೆಮನೆಗೆ ಬಂದಾಗ ಸೌರಭ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡೆವು. ಅವನು ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹೇಳಿದರು.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವಿವರವಾದ ತನಿಖೆ ನಡೆಯುತ್ತಿದೆ. ಸೌರಭ್ ತನ್ನ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ, ಅಷ್ಟೇ ಅಲ್ಲದೆ ಇದು ಇತ್ತೀಚೆಗೆ ಆಕೆಯ ಕುಟುಂಬದ ಗಮನಕ್ಕೆ ಬಂದಿತ್ತು. ಅದಾದ ಬಳಿಕ ಅವನ ತಂದೆ ಕಳೆದ 15 ದಿನಗಳಿಂದ ಅವನೊಂದಿಗೆ ಇದ್ದರು. ಸೌರಭ್ ಸಹಜವಾಗಿ ಎಂದಿನಂತೆಯೇ ನಮ್ಮೊಂದಿಗಿದ್ದ. ಆತ್ಮಹತ್ಯೆಯಂತಹ ಯೋಚನೆ ಆತನಲ್ಲಿ ಬರುತ್ತಿದೆ ಎಂಬ ಸಣ್ಣ ಸುಳಿವು ಆತನ ಮುಖ ಲಕ್ಷಣದಲ್ಲಿ ಕಾಣುತ್ತಿರಲಿಲ್ಲ. ಏಕಾಏಕಿ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ ಎಂದು ಸ್ನೇಹಿತರು ಅಳಲು ತೋಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

