HomeLatest News'CBSE' 6 ನೇ ತರಗತಿಯಿಂದ ತ್ರಿಭಾಷಾ ಕಲಿಕೆ ಕಡ್ಡಾಯ ; 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿ.!

‘CBSE’ 6 ನೇ ತರಗತಿಯಿಂದ ತ್ರಿಭಾಷಾ ಕಲಿಕೆ ಕಡ್ಡಾಯ ; 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿ.!

ನವದೆಹಲಿ : ಸಿಬಿಎಸ್ಇ (CBSE) ಶಾಲೆಗಳಲ್ಲಿ ಇನ್ನು ಮುಂದೆ ತ್ರಿಭಾಷಾ ಸೂತ್ರ ಕಡ್ಡಾಯವಾಗಲಿದ್ದು, 2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರೊಂದಿಗೆ 9ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಎರಡು ಸ್ತರದ ಪರೀಕ್ಷಾ ಪದ್ಧತಿಯನ್ನು ಅಳವಡಿಸಲು ಮಂಡಳಿ ನಿರ್ಧರಿಸಿದೆ.

ಹೌದು. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಶಿಫಾರಸ್ಸಿನಂತೆ, ವಿದ್ಯಾರ್ಥಿಗಳು 10ನೇ ತರಗತಿಯ ಅಂತ್ಯದ ವೇಳೆಗೆ ಮೂರು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆಯಬೇಕು ಎಂಬ ಉದ್ದೇಶದೊಂದಿಗೆ ಸಿಬಿಎಸ್ಇ (CBSE) ಹೊಸ ಶೈಕ್ಷಣಿಕ ಚೌಕಟ್ಟನ್ನು ಗುರುವಾರ ಪ್ರಕಟಿಸಿದೆ. 2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರನೇ ಭಾಷೆ ಕಡ್ಡಾಯವಾಗಲಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಎರಡು ಭಾರತೀಯ ಭಾಷೆಗಳನ್ನು ಕಲಿಯುವುದು ಕಡ್ಡಾಯ. ಇದು 2031ರಲ್ಲಿ ನಡೆಯಲಿರುವ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಮೂರನೇ ಭಾಷೆಯನ್ನು ಮುಖ್ಯ ವಿಷಯವಾಗಿ ಅಳವಡಿಸಲು ದಾರಿ ಮಾಡಿಕೊಡಲಿದೆ.

ಇಂಗ್ಲಿಷ್ ಈಗ ‘ವಿದೇಶಿ ಭಾಷೆ’: ಹೊಸ ವರ್ಗೀಕರಣದ ಪ್ರಕಾರ ಇಂಗ್ಲಿಷ್ ಅನ್ನು ‘ವಿದೇಶಿ ಭಾಷೆ’ ಎಂದು ಪರಿಗಣಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ಮತ್ತೊಂದು ವಿದೇಶಿ ಭಾಷೆಯನ್ನು (ಉದಾಹರಣೆಗೆ ಫ್ರೆಂಚ್ ಅಥವಾ ಜರ್ಮನ್) ಒಟ್ಟಿಗೆ ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವಂತಿಲ್ಲ. ಕಡ್ಡಾಯವಾಗಿ ಎರಡು ಭಾರತೀಯ ಭಾಷೆಗಳನ್ನು ಕಲಿಯಲೇಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಬಿಎಸ್ಇ ಅಧ್ಯಕ್ಷರ ಹೇಳಿಕೆ
ಸಿಬಿಎಸ್ಇ ಅಧ್ಯಕ್ಷ ರಾಹುಲ್ ಸಿಂಗ್ ಅವರು ಮಾತನಾಡಿ, “ಈ ವರ್ಷದಿಂದಲೇ 6ನೇ ತರಗತಿಯಲ್ಲಿ R3 (ಮೂರನೇ ಭಾಷೆ) ಹಂತದ ಪಠ್ಯಪುಸ್ತಕಗಳನ್ನು ಪರಿಚಯಿಸಲಾಗುವುದು. ಈ ವಿದ್ಯಾರ್ಥಿಗಳು 2031ರಲ್ಲಿ ಬೋರ್ಡ್ ಪರೀಕ್ಷೆ ಬರೆಯಲಿದ್ದು, ಆಗ ಇಡೀ ಪರೀಕ್ಷಾ ಪದ್ಧತಿ ಬದಲಾಗಲಿದೆ ಮತ್ತು ತ್ರಿಭಾಷಾ ಸೂತ್ರ ಸಂಪೂರ್ಣವಾಗಿ ಜಾರಿಗೆ ಬರಲಿದೆ,” ಎಂದು ತಿಳಿಸಿದ್ದಾರೆ.

ಇತರ ವಿಷಯಗಳ ಸೇರ್ಪಡೆ
ಕಲೆ ಮತ್ತು ದೈಹಿಕ ಶಿಕ್ಷಣ: 9 ಮತ್ತು 10ನೇ ತರಗತಿಗಳಿಗೆ ಕಲಾ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಇವುಗಳಿಗೆ ಹೊಸ ಪಠ್ಯಪುಸ್ತಕಗಳು ಬಿಡುಗಡೆಯಾಗಲಿವೆ.ವೃತ್ತಿಪರ ಶಿಕ್ಷಣ: 2027-28ನೇ ಸಾಲಿನಿಂದ ವೃತ್ತಿಪರ ಶಿಕ್ಷಣವು (Vocational Education) ವಾರ್ಷಿಕ ಅಥವಾ ಬೋರ್ಡ್ ಪರೀಕ್ಷೆಯ ಕಡ್ಡಾಯ ವಿಷಯವಾಗಲಿದೆ.

AI ಮತ್ತು ಕಂಪ್ಯೂಟೇಶನಲ್ ಥಿಂಕಿಂಗ್: ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟೇಶನಲ್ ಥಿಂಕಿಂಗ್ ಅನ್ನು 9 ಮತ್ತು 10ನೇ ತರಗತಿಗೆ ಕಡ್ಡಾಯಗೊಳಿಸಲಾಗಿದ್ದು, 2029ರ ವೇಳೆಗೆ ಇವು 10ನೇ ತರಗತಿಯ ಬೋರ್ಡ್ ಪರೀಕ್ಷೆಯ ವಿಷಯಗಳಾಗಲಿವೆ.

ವಿದೇಶಿ ಶಾಲೆಗಳಿಗೆ ವಿನಾಯಿತಿ

ವಿದೇಶಗಳಲ್ಲಿರುವ ಸಿಬಿಎಸ್ಇ ಶಾಲೆಗಳಿಗೆ ನಿಯಮದಲ್ಲಿ ಸಲ್ಪ ಸಡಿಲಿಕೆ ನೀಡಲಾಗಿದೆ. ಭಾರತದಲ್ಲಿರುವ ಶಾಲೆಗಳಿಗೆ ಎರಡು ಭಾರತೀಯ ಭಾಷೆಗಳು ಕಡ್ಡಾಯವಾಗಿದ್ದರೆ, ವಿದೇಶಿ ಶಾಲೆಗಳು ಕನಿಷ್ಠ ಒಂದು ಭಾರತೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕಾಗುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ 9ನೇ ತರಗತಿಗೆ ಡೋಗ್ರಿ, ಮೈಥಿಲಿ, ಕೊಂಕಣಿ ಮತ್ತು ಸಂತಾಲಿ ಭಾಷೆಗಳನ್ನು ಆಯ್ಕೆಯಾಗಿ ನೀಡಲಾಗುತ್ತಿದೆ. ಇದರೊಂದಿಗೆ ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ ಎಲ್ಲಾ 22 ಭಾಷೆಗಳು ಈಗ ವಿದ್ಯಾರ್ಥಿಗಳ ಆಯ್ಕೆಗೆ ಲಭ್ಯವಿವೆ.

2026ರಿಂದ 6ನೇ ತರಗತಿಯ ಮಕ್ಕಳಿಗೆ ತ್ರಿಭಾಷಾ ಸೂತ್ರ ಅನ್ವಯವಾಗಲಿದ್ದು, ಕಲಿಯುವ 3 ಭಾಷೆಗಳಲ್ಲಿ 2 ಭಾಷೆಗಳು ಕಡ್ಡಾಯವಾಗಿ ಭಾರತೀಯ ಮೂಲದ್ದೇ ಆಗಿರಬೇಕು.9ನೇ ತರಗತಿಯಲ್ಲಿ ಇನ್ನು ಮುಂದೆ ಕೇವಲ ಒಂದು ಪರೀಕ್ಷೆಯಲ್ಲ, ಬದಲಾಗಿ 2 ಸ್ತರದ ಪರೀಕ್ಷೆ ಇರಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular