ಪಾಶ್ಚಿಮಾತ್ಯ ದೇಶಗಳು ಅಂದ್ರೆ ಸಾಕು ನಮ್ಮ ಕಣ್ಣಮುಂದೆ ಬರುವುದು ಬಲಿಷ್ಠ ಸೇನೆ ಹಾಗೂ ಶ್ರೀಮಂತಿಕೆಯ ಹುಮ್ಮಸ್ಸು. ಅದರಲ್ಲೂ ಹಾಲಿವುಡ್ ಸಿನಿಮಾಗಳ ಮೂಲಕ ಪಾಶ್ಚಿಮಾತ್ಯ ದೇಶಗಳು ತಮ್ಮನ್ನು ತಾವು ಇಡೀ ಪ್ರಪಂಚದ ಸೂಪರ್ ಹೀರೋಗಳು, ಜಗತ್ತನ್ನು ಕಾಪಾಡುತ್ತಿರುವುದು ತಾವೇ ಎಂದು ತೋರಿಸಿಕೊಳ್ಳುತ್ತಾ ಇವೆ. ಈ ಪೈಕಿ ಅಮೆರಿಕ ಎಂಬ ದೈತ್ಯ ದೇಶ ಯಾವುದೇ ಯುದ್ಧ ಸೋತಿಲ್ಲ ಎಂಬ ಮಾತುಗಳು, ಆಗಾಗ ಚರ್ಚೆಗು ಕೂಡ ವೇದಿಕೆ ಒದಗಿಸುತ್ತಾ ಬಂದಿದೆ. ಇಂತಹ ಸಮಯದಲ್ಲೇ ಅಮೆರಿಕ ಸೇನೆಯ ಶಕ್ತಿ ಏನು ಅನ್ನೋದನ್ನ & ಯುದ್ಧ ಮಾಡಿದರೆ ಏನಾಗುತ್ತೆ? ಅನ್ನೋದನ್ನೂ ಇರಾನ್ ತೋರಿಸಿಕೊಟ್ಟಿದೆ. ಇಷ್ಟೆಲ್ಲದರ ನಡುವೆ ಪುಟಿನ್ ಹೆಣೆದ ಬಲೆಗೆ ಬಿದ್ದ ಪಾಶ್ಚಿಮಾತ್ಯರು? ಎಂಬ ಚರ್ಚೆ ಜೋರಾಗಿದೆ.
ನಿಮಗೇ ಗೊತ್ತಿರುವಂತೆ ಇರಾನ್ ವಿರುದ್ಧದ ಯುದ್ಧದಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ ಅಮೆರಿಕ. ಈಗಿರುವ ಅಂದಾಜುಗಳ ಪ್ರಕಾರ ಸಾವಿರಾರು ಕೋಟಿ ರೂಪಾಯಿ ನಷ್ಟದ ಸುಳಿಯಲ್ಲಿ ಸಿಲುಕಿರುವ ಅಮೆರಿಕ, ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಯುದ್ಧ ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ, ಆದರೆ ಮೊಂಡು ಹಠ ಮಾಡುತ್ತಿರುವ ಇರಾನ್ ಮಾತ್ರ ಈ ಯುದ್ಧ ನಿಲ್ಲಿಸಲು ಸಿದ್ಧವಾಗಿಲ್ಲ. ಈ ಮೂಲಕ ಮತ್ತಷ್ಟು ಕಗ್ಗಂಟಾಗಿ ಹೋಗಿರುವ ಇರಾನ್ & ಅಮೆರಿಕ ಯುದ್ಧ ಇದೀಗ ಮತ್ತೊಂದು ದೊಡ್ಡ ತಿರುವು ಪಡೆಯುತ್ತಿದೆ. ಪ್ರಮುಖವಾಗಿ ಈ ಯುದ್ಧದಿಂದ ರಷ್ಯಾಗೆ ಭಾರಿ ದೊಡ್ಡ ಪ್ರಮಾಣದಲ್ಲೇ ಲಾಭ ಆಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಉಕ್ರೇನ್ ಸೇನೆಯ ತಿಥಿ ಗ್ಯಾರಂಟಿ?
ಅಮೆರಿಕ ಯಾವಾಗ ಉಕ್ರೇನ್ ಜೊತೆಗೆ ನಿಂತುಕೊಂಡು, ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿತ್ತೋ ಅಲ್ಲಿಂದ ಮುಂದೆ ಇದೇ ರಷ್ಯಾ ಸೇನೆ ದೊಡ್ಡ ಮಟ್ಟದಲ್ಲಿ ದಾಳಿ ಆರಂಭಿಸಿತ್ತು. ಅಲ್ಲದೆ ಉಕ್ರೇನ್ ನಾಶ ಆಗುವ ತನಕ ಯುದ್ಧ ನಿಲ್ಲುವುದಿಲ್ಲ ಎಂಬ ರೀತಿ ಪೆಟ್ಟು ಕೊಡುತ್ತಾ ಬಂದಿದೆ. ಆದರೆ ಇಂತಹ ಸಮಯದಲ್ಲೇ ಇರಾನ್ ವಿರುದ್ಧವೇ ಮುಗಿಬಿದ್ದು ಯುದ್ಧ ಆರಂಭ ಮಾಡಿರುವ ಅಮೆರಿಕಗೆ ಈಗ ತನ್ನ ಮಾನ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿಯೇ ಉಕ್ರೇನ್‌ಗೆ ನೀಡುತ್ತಿರುವ ಸಹಾಯ ಬಂದ್ ಆಗಿದ್ದು, ರಷ್ಯಾ ಸೇನೆಗೆ ಉಕ್ರೇನ್ ವಿರುದ್ಧದ ಕಾರ್ಯಾಚರಣೆ ಸುಲಭವಾಗುತ್ತಿದೆ. ಇದರ ಜೊತೆಗೆ ರಷ್ಯಾ ದೇಶದ ತೈಲ ಖರೀದಿಗೆ ಇದ್ದ ನಿರ್ಬಂಧ ಕೂಡ ಸಡಿಲವಾಗಿರುವುದು ಉಕ್ರೇನ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೆ ರಷ್ಯಾಗೆ ಈ ಸಮಯದಲ್ಲಿ ಬೇಕಾಗಿರುವ ಹಣಕಾಸಿನ ನೆರವು ಇದರಿಂದ ಇನ್ನಷ್ಟು ಸುಲಭವಾಗುತ್ತಿದೆ.
ಶೀಘ್ರದಲ್ಲೇ ರಷ್ಯಾಗೆ ದೊಡ್ಡ ಗೆಲುವು?
ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿದ ನಂತರ ರಷ್ಯಾ ಸೇನೆಯು ಮೇಲುಗೈ ಸಾಧಿಸಿದ್ದು, ಈಗಾಗಲೇ ರಷ್ಯಾ ಸೇನೆ ಬಹುತೇಕ ಉಕ್ರೇನ್‌ನ ನೆಲವನ್ನು ತನ್ನ ವಶಕ್ಕೆ ಪಡೆದಿದೆ. ಆದರೆ ಉಕ್ರೇನ್ ರಾಜಧಾನಿ ಕೀವ್ ಮಾತ್ರ ಈಗ ಬಾಕಿ ಉಳಿದಿದ್ದು, ಯಾವಾಗ ಇರಾನ್ & ಅಮೆರಿಕ ನಡುವೆ ಯುದ್ಧ ಶುರುವಾಯ್ತೋ ಅಲ್ಲಿಂದ ಮುಂದೆ ಉಕ್ರೇನ್ ರಾಜಧಾನಿ ಕೀವ್ ಬುಡ ಕೂಡ ಅಲ್ಲಾಡಿ ಹೋಗುತ್ತಿದೆ. ಯಾವ ಸಮಯದಲ್ಲಿ ಉಕ್ರೇನ್ ರಾಜಧಾನಿ ಕೀವ್ ಕೂಡ ರಷ್ಯಾ ಸೇನೆಯ ವಶಕ್ಕೆ ಸಿಲುಕುತ್ತದೋ? ಎಂಬ ಭಯವೂ ಆವರಿಸಿದೆ. ಈ ಮೂಲಕ, ಇರಾನ್ ಯುದ್ಧದ ವಿಚಾರದಲ್ಲಿ ಸುಮ್ಮನೇ ಇದ್ದು ತಟಸ್ಥ ನಿಲುವಿನ ಮೂಲಕ ಪುಟಿನ್ ಹೊಸ ಆಟ ಆಡಿದ್ದು ಪಕ್ಕಾ ಆಗಿದೆ. ಇದರ ಜೊತೆಗೆ ಉಕ್ರೇನ್‌ಗೆ ಸೋಲಿನ ಪಾಠ ಕಲಿಸಿ, ಪಾಶ್ಚಿಮಾತ್ಯರಿಗೆ ಕೂಡ ಆಘಾತ ನೀಡುತ್ತಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್.

