HomeLatest NewsBREAKING : ನಡೆದಾಡುವ ದೇವರಿಗೆ ಪ್ರಧಾನಿ ಮೋದಿ ನಮನ : ಸಿದ್ದಗಂಗಾ ಶ್ರೀಗಳ ಜಯಂತಿಗೆ ಕನ್ನಡದಲ್ಲೇ...

BREAKING : ನಡೆದಾಡುವ ದೇವರಿಗೆ ಪ್ರಧಾನಿ ಮೋದಿ ನಮನ : ಸಿದ್ದಗಂಗಾ ಶ್ರೀಗಳ ಜಯಂತಿಗೆ ಕನ್ನಡದಲ್ಲೇ ‘ನಮೋ’ ಟ್ವೀಟ್.!

ನವದೆಹಲಿ: ತುಮಕೂರಿನ ಸಿದ್ಧಗಂಗಾ ಮಠದ ‘ತ್ರಿವಿಧ ದಾಸೋಹಿ’ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಕ್ತಿಪೂರ್ವಕ ನಮನ ಸಲ್ಲಿಸಿದ್ದಾರೆ. ಶ್ರೀಗಳ ನಿಸ್ವಾರ್ಥ ಸೇವೆ, ಮನುಕುಲದ ಮೇಲಿನ ಕರುಣೆ ಮತ್ತು ಸಮಾಜಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಳನ್ನು ಪ್ರಧಾನಿ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ಸಿದ್ಧಗಂಗಾ ಮಠದ ‘ನಡೆದಾಡುವ ದೇವರು’ ಎಂದೇ ಖ್ಯಾತರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಭಾವಪೂರ್ಣ ಸಂದೇಶ ಹಂಚಿಕೊಂಡಿದ್ದಾರೆ.

ಸೇವೆಯ ಸಂಕೇತವಾಗಿ ಶ್ರೀಗಳು: ಪ್ರಧಾನಿಯವರು ತಮ್ಮ ಸಂದೇಶದಲ್ಲಿ, “ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯ ಸಂದರ್ಭದಲ್ಲಿ ಅವರಿಗೆ ನನ್ನ ಗೌರವಪೂರ್ಣ ನಮನಗಳು. ಮನುಕುಲದ ಬಗೆಗಿನ ಕರುಣೆ, ನಮ್ರತೆ ಮತ್ತು ಅಚಲ ಸೇವೆಯ ಸಂಕೇತವಾಗಿ ಅವರು ಜನರ ಸ್ಮೃತಿಯಲ್ಲಿ ಸದಾ ನೆಲೆಸಿದ್ದಾರೆ,” ಎಂದು ಬಣ್ಣಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಜವಾದ ಶ್ರೇಷ್ಠತೆಯ ಪಾಠ: ಇತರರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಶ್ರೀಗಳು, ನಿಜವಾದ ಶ್ರೇಷ್ಠತೆಯು ಸೇವೆಯಲ್ಲಿ ಅಡಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಗಳು ಸಮಾಜದ ಮೇಲೆ ಶಾಶ್ವತವಾದ ಛಾಪನ್ನು ಮೂಡಿಸಿವೆ ಎಂದು ಮೋದಿ ಶ್ಲಾಘಿಸಿದ್ದಾರೆ.

ಅಸಂಖ್ಯಾತ ಜನರಿಗೆ ಪ್ರೇರಣೆ: “ಇಂದಿಗೂ ಅವರ ಜೀವನವು ಅಸಂಖ್ಯಾತ ಜನರಿಗೆ ನಿಸ್ವಾರ್ಥ ಮತ್ತು ಸೇವೆಯ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡುತ್ತಿದೆ ಹಾಗೂ ನಿರಂತರ ಪ್ರೇರಣೆಯಾಗಿದೆ,” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಶ್ರೀಗಳ ಜಯಂತಿಯ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಭಕ್ತರು ಮತ್ತು ಗಣ್ಯರು ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಈ ಗೌರವಪೂರ್ಣ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular