HomeBusinessಭಾರತದ ₹10,000ಕ್ಕೆ ಕತಾರ್‌ನಲ್ಲಿ ಸಿಗೋದು ಇಷ್ಟೇನಾ? ಅಲ್ಲಿನ ಬೆಲೆಗಳನ್ನು ನೋಡಿದ್ರೆ ಶಾಕ್ ಆಗ್ತೀರಾ ಇಲ್ಲಿದೆ ಕಂಪ್ಲೀಟ್...

ಭಾರತದ ₹10,000ಕ್ಕೆ ಕತಾರ್‌ನಲ್ಲಿ ಸಿಗೋದು ಇಷ್ಟೇನಾ? ಅಲ್ಲಿನ ಬೆಲೆಗಳನ್ನು ನೋಡಿದ್ರೆ ಶಾಕ್ ಆಗ್ತೀರಾ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಬೆಂಗಳೂರು : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿರುವ ಬೆನ್ನಲ್ಲೇ ಕತಾರ್ ದೇಶ ಜಗತ್ತಿನ ಗಮನ ಸೆಳೆಯುತ್ತಿದೆ. ಇರಾನ್ ಜೊತೆ ರಹಸ್ಯ ಮೌನ ಒಪ್ಪಂದ ಮಾಡಿಕೊಂಡಿರುವ ಕತಾರ್ ಅಧಿಕೃತವಾಗಿ ಸಂಘರ್ಷದಿಂದ ದೂರ ಉಳಿಯಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಈ ರಾಜತಾಂತ್ರಿಕ ಬೆಳವಣಿಗೆಗಳ ನಡುವೆ, ಅಲ್ಲಿನ ಆರ್ಥಿಕ ಸ್ಥಿತಿ ಮತ್ತು ಭಾರತೀಯ ರೂಪಾಯಿಯ ಮೌಲ್ಯದ ಬಗ್ಗೆ ಕುತೂಹಲ ಮೂಡಿದೆ. ಹಾಗಾದರೆ ಭಾರತದ ₹10,000 ಹಣಕ್ಕೆ ಕತಾರ್‌ನಲ್ಲಿ ಎಷ್ಟು ಬೆಲೆ ಇದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

₹10,000 = ಎಷ್ಟು ಕತಾರಿ ರಿಯಾಲ್?

ಭಾರತದ ₹10,000 ಹಣ ಕತಾರ್‌ನ ಕರೆನ್ಸಿಯಾದ ರಿಯಾಲ್ ಗೆ ಹೋಲಿಸಿದರೆ ಸುಮಾರು 387 ಕತಾರಿ ರಿಯಾಲ್ ಆಗುತ್ತದೆ. ಕೇಳಲು ಇದು ದೊಡ್ಡ ಮೊತ್ತದಂತೆ ಕಂಡರೂ ಕತಾರ್‌ನ ದುಬಾರಿ ಜೀವನಶೈಲಿಗೆ ಹೋಲಿಸಿದರೆ ಇದರ ಕೊಳ್ಳುವ ಶಕ್ತಿ (Purchasing Power) ಭಾರತಕ್ಕಿಂತ ಬಹಳ ಕಡಿಮೆ.

ವಾಸದ ಖರ್ಚು ಎಷ್ಟು ದುಬಾರಿ?

ಗಲ್ಫ್ ರಾಷ್ಟ್ರಗಳಲ್ಲೇ ಕತಾರ್ ಅತ್ಯಂತ ದುಬಾರಿ ದೇಶಗಳಲ್ಲಿ ಒಂದು. ಅಲ್ಲಿನ ಸಾಮಾನ್ಯ ನಿವಾಸಿಯೊಬ್ಬನ ದಿನನಿತ್ಯದ ಸರಾಸರಿ ಖರ್ಚು ಸುಮಾರು 585 ರಿಯಾಲ್ ಆಗಬಹುದು. ಅಂದರೆ ಭಾರತದ ₹10,000 ಹಣ ಅಲ್ಲಿನ ಒಬ್ಬ ವ್ಯಕ್ತಿಯ ಒಂದು ದಿನದ ಸಾಮಾನ್ಯ ಖರ್ಚನ್ನು ಸರಿದೂಗಿಸಲು ಕೂಡ ಸಾಕಾಗುವುದಿಲ್ಲ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಣದಲ್ಲಿ ಏನೆಲ್ಲಾ ಖರೀದಿಸಬಹುದು?

ದುಬಾರಿ ಎನಿಸಿದರೂ, 387 ರಿಯಾಲ್‌ನಲ್ಲಿ ಕೆಲವು ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು:

ದಿನಸಿ ಪದಾರ್ಥಗಳು: ಒಂದು ವಾರಕ್ಕೆ ಬೇಕಾಗುವ ಹಾಲು, ಮೊಟ್ಟೆ, ಬ್ರೆಡ್‌ನಂತಹ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಅಲ್ಲಿ ಒಂದು ಲೀಟರ್ ಹಾಲಿಗೆ 7-8 ರಿಯಾಲ್ ಹಾಗೂ 30 ಮೊಟ್ಟೆಗಳಿಗೆ 15-22 ರಿಯಾಲ್ ಬೆಲೆ ಇದೆ.

ಹೊರಗಿನ ಊಟ: ಸಾಧಾರಣ ರೆಸ್ಟೋರೆಂಟ್‌ಗಳಲ್ಲಿ 10 ರಿಂದ 12 ಬಾರಿ ಸಾಮಾನ್ಯ ಊಟ ಮಾಡಬಹುದು. ಅಥವಾ ಹೈ-ಫೈ ರೆಸ್ಟೋರೆಂಟ್‌ನಲ್ಲಿ ಕೇವಲ 2-3 ಬಾರಿ ಭೋಜನ ಸವಿಯಬಹುದು. ನೀವು ಚಹಾ ಪ್ರಿಯರಾಗಿದ್ದರೆ ಸುಮಾರು 350-400 ಕಪ್ ಚಹಾ ಕುಡಿಯಬಹುದು

ಗ್ಯಾಜೆಟ್ಸ್ ಮತ್ತು ಶಾಪಿಂಗ್: ಈ ಬಜೆಟ್‌ನಲ್ಲಿ ಒಂದು ಬೇಸಿಕ್ ಸ್ಮಾರ್ಟ್‌ಫೋನ್ ಅಥವಾ ವೈರ್‌ಲೆಸ್ ಇಯರ್‌ಬಡ್ಸ್ ಖರೀದಿಸಬಹುದು. ಅಥವಾ ಅಲ್ಲಿನ ಪ್ರಸಿದ್ಧ ಖರ್ಜೂರಗಳು, ಸುಗಂಧ ದ್ರವ್ಯ (Perfume) ಅಥವಾ ಪುಟ್ಟ ಬೆಳ್ಳಿ ಆಭರಣಗಳನ್ನು ಮನೆಗೆ ತರಬಹುದು.

ಯುದ್ಧದ ನಡುವೆ ಕತಾರ್ ನಡೆ:

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದರೂ ಕತಾರ್ ತನ್ನ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿದೆ. ತನ್ನ ನೆಲವನ್ನು ಯುದ್ಧಕ್ಕೆ ಬಳಸದಂತೆ ಇರಾನ್ ಜೊತೆ ಗುಪ್ತ ಒಪ್ಪಂದ ಮಾಡಿಕೊಂಡಿದೆ ಎಂಬ ಸುದ್ದಿಗಳು ಅಲ್ಲಿನ ಮಾರುಕಟ್ಟೆಯ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular