HomeLatest NewsBIG NEWS: ಪೆಟ್ರೋಲ್ ಕ್ಯಾನ್ ಗೆ ಬೆಂಕಿ: ಹೊತ್ತಿ ಉರಿದ ಇಡೀ ಮನೆ: ಮಹಿಳೆ ಸ್ಥಿತಿ...

BIG NEWS: ಪೆಟ್ರೋಲ್ ಕ್ಯಾನ್ ಗೆ ಬೆಂಕಿ: ಹೊತ್ತಿ ಉರಿದ ಇಡೀ ಮನೆ: ಮಹಿಳೆ ಸ್ಥಿತಿ ಗಂಭೀರ

ಧಾರವಾಡ: ಮನೆಯಲ್ಲಿ ಸಂಗ್ರಹಿಸಿಟ್ತಿದ್ದ ಪೆಟ್ರೋಲ್ ಕ್ಯಾನ್ ಗೆ ಬೆಂಕಿ ತಗುಲಿದ ಪರಿಣಾಮ ಇಡೀ ಮನೆಗೆ ಬೆಂಕಿ ಆವರಿಸಿದ್ದು, ಧಗ ಧಗನೆ ಹೊತ್ತಿ ಉರಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಹರಿಜನಕೇರಿ ಓಣಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂರ್ಣಿಮಾ ಕಲ್ಲಪ್ಪ (32) ಗಾಯಾಳು ಮಹಿಳೆ.

ಶೇ.೮೦ರಷ್ಟು ಮಹಿಳೆಯ ದೇಹ ಸುಟ್ಟಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಧಾರವಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯ ಫ್ರಿಡ್ಜ್ ಬಳಿ ಪೆಟ್ರೋಲ್ ತುಂಬಿದ್ದ ಕ್ಯಾನ್ ಇಡಲಾಗಿತ್ತು. ಪೂರ್ಣಿಮಾ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಏಕಾಏಕಿ ಪೆಟ್ರೋಲ್ ಕ್ಯಾನ್ ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ವ್ಯಾಪಿಸಿದ್ದು, ಮನೆ ಸುಟ್ಟು ಕರಕಲಾಗಿದೆ.

ಅಡುಗೆ ಮನೆಯಲ್ಲಿ ಸಿಲುಕಿದ್ದ ಪೂರ್ಣಿಮಾ ಅವರನ್ನು ಮೈದುನ ಯಲ್ಲಪ್ಪ ರಕ್ಷಿಸಿದ್ದು, ಈ ವೇಳೆ ಅವರಿಗೂ ಸುಟ್ಟ ಗಾಯಗಳಾಗಿವೆ. ಪೂರ್ಣಿಮಾ ಸ್ಥಿತಿ ಗಂಭೀರವಾಗಿದೆ. ಅಗ್ನಿಶಾಮಕ ಸಿಬ್ಬಂದಿಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular