HomeLatest NewsBREAKING : ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ  ಸೂರಜ್ ಅಜ್ಜಿ, ರೀಲ್ಸ್ ಸ್ಟಾರ್ ‘ಲಕ್ಷ್ಮೀ’ ಇನ್ನಿಲ್ಲ

BREAKING : ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ  ಸೂರಜ್ ಅಜ್ಜಿ, ರೀಲ್ಸ್ ಸ್ಟಾರ್ ‘ಲಕ್ಷ್ಮೀ’ ಇನ್ನಿಲ್ಲ

ಯಲ್ಲಾಪುರ (ಉತ್ತರ ಕನ್ನಡ): ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಭಿನ್ನ ಶೈಲಿಯ ರೀಲ್ಸ್ ಮೂಲಕ ಮನೆಮಾತಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಲಕ್ಷ್ಮೀ ನಾಯ್ಕ್ ಅಜ್ಜಿ (93) ಅವರು ಭಾನುವಾರ ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

‘ಡ್ರಾಮಾ ಜೂನಿಯರ್’ ಖ್ಯಾತಿಯ ಮೊಮ್ಮಗ ಸೂರಜ್ ಜೊತೆಗೂಡಿ ಅವರು ಮಾಡುತ್ತಿದ್ದ ರೀಲ್ಸ್ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿತ್ತು. ಸೂರಜ್ ಮತ್ತು ಲಕ್ಷ್ಮೀ ಅಜ್ಜಿ ಜೋಡಿಯು ಉತ್ತರ ಕನ್ನಡದ ಮಲೆನಾಡು ಶೈಲಿಯ ಕನ್ನಡ ಹಾಗೂ ಕೊಂಕಣಿ ಮಿಶ್ರಿತ ಸಂಭಾಷಣೆಗಳ ಮೂಲಕ ಲಕ್ಷಾಂತರ ವೀಕ್ಷಕರನ್ನು ಸೆಳೆದಿತ್ತು.93ನೇ ವಯಸ್ಸಿನಲ್ಲೂ ಕಿವಿ ಸರಿಯಾಗಿ ಕೇಳದಿದ್ದರೂ ಮತ್ತು ಕಣ್ಣು ಮಂಜಾಗಿದ್ದರೂ, ಮೊಮ್ಮಗ ಹೇಳಿಕೊಟ್ಟಂತೆ ಅದ್ಭುತವಾಗಿ ಹಾವಭಾವ ವ್ಯಕ್ತಪಡಿಸಿ ನಟಿಸುತ್ತಿದ್ದರು.

ವಯೋಸಹಜ ಸಾವು: ಕಳೆದ ಕೆಲವು ದಿನಗಳಿಂದ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದುಃಖತಪ್ತ ಕುಟುಂಬ: ಅಜ್ಜಿಯನ್ನು ಕಳೆದುಕೊಂಡ ಮೊಮ್ಮಗ ಸೂರಜ್ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಜ್ಜಿಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.

View this post on Instagram

A post shared by A S SURAJ (@suraj._.dramajunior)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular