ಯುವ ಜನರಿಗೆ ಗುಡ್ ನ್ಯೂಸ್: ಸ್ವಾವಲಂಬಿ ಸಾರಥಿ ಯೋಜನೆಯಡಿ 6942 ಫಲಾನುಭವಿಗಳಿಗೆ ವಾಹನ ವಿತರಣೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ 2023-24ನೇ ಸಾಲಿನಿಂದ ಈ ವರೆಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ಒಟ್ಟು 3,011 ವಾಹನಗಳನ್ನು ವಿತರಣೆ ಮಾಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ 6,942 ಅರ್ಹ ಫಲಾನುಭವಿಗಳಿಗೆ ವಾಹನ ವಿತರಣೆಯ ಗುರಿ ಹೊಂದಲಾಗಿದ್ದು, ಇದಕ್ಕಾಗಿ ರೂ.208 ಕೋಟಿ ವೆಚ್ಚವಾಗಲಿದೆ.
ಸ್ವಯಂ ಉದ್ಯೋಗದ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಕನಸು ಕಂಡ ಸಹಸ್ರಾರು ಯುವ ಜನರಿಗೆ ಸ್ವಾವಲಂಬಿ ಸಾರಥಿ ಅಕ್ಷರಶಃ ಆಪದ್ಬಾಂಧವನಾಗಿದೆ.
ನಿರುದ್ಯೋಗ ನಿವಾರಣೆಗೆ ಟೊಂಕಕಟ್ಟಿ ನಿಂತಿರುವ ನಮ್ಮ ಸರ್ಕಾರವು, ಯುವ ಕೈಗಳಿಗೆ ಉದ್ಯೋಗದ ಆಸರೆ ನೀಡಿ ಅವರನ್ನು ಸಮಾಜದ ಆಸ್ತಿಯಾಗಿ ಪರಿವರ್ತಿಸುತ್ತಿದೆ ಎಂದು ಹೇಳಲಾಗಿದೆ.

