ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ಭಾಗವಹಿಸಿದ್ದರು ಎಂಬ ಮಾಧ್ಯಮ ವರದಿಯನ್ನು ಭಾರತ ನಿರಾಕರಿಸಿದೆ.
ಶನಿವಾರದ ಕರೆ ಇಬ್ಬರು ನಾಯಕರ ನಡುವೆ ಮಾತ್ರ ನಡೆದಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ನಡೆಯುತ್ತಿರುವ ಮಧ್ಯಪ್ರಾಚ್ಯದ ಪರಿಸ್ಥಿತಿಯ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದೆ.
“ನಾವು ಕಥೆಯನ್ನು ನೋಡಿದ್ದೇವೆ. ಮಾರ್ಚ್ 24 ರಂದು ನಡೆದ ದೂರವಾಣಿ ಸಂಭಾಷಣೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತ್ರ” ಎಂದು ವಿದೇಶಾಂಗ ಸಚಿವಾಲಯದ(ಎಂಇಎ) ವಕ್ತಾರರು ಹೇಳಿದ್ದಾರೆ. “ಈ ಹಿಂದೆ ಹೇಳಿದಂತೆ, ಇದು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಅಭಿಪ್ರಾಯ ವಿನಿಮಯಕ್ಕೆ ಅವಕಾಶವನ್ನು ಒದಗಿಸಿತು” ಎಂದು ತಿಳಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ (ಎನ್‌ವೈಟಿ) ಶುಕ್ರವಾರ ವರದಿ ಮಾಡಿರುವ ಪ್ರಕಾರ, ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಕರೆಯ ಭಾಗವಾಗಿ ಬಿಲಿಯನೇರ್ ಮಸ್ಕ್ ಇದ್ದರು ಎಂದು ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ, ಮಸ್ಕ್ ಅವರ ಭಾಗವಹಿಸುವಿಕೆಯು ಅವರ ಮತ್ತು ಟ್ರಂಪ್ ನಡುವಿನ ಸಂಬಂಧ ಸುಧಾರಿಸುತ್ತಿದೆ ಎಂದು ಸೂಚಿಸುತ್ತದೆ ಎಂದು ವರದಿ ಹೇಳಿದೆ. ಆದರೆ, ಮೋದಿ –ಟ್ರಂಪ್ ನಡುವಿನ ಮಾತುಕತೆಯಲ್ಲಿ ಮಸ್ಕ್ ಇರಲಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

