ಬೆಂಗಳೂರು: ಬೀದಿಬದಿ ವ್ಯಾಪಾರ ಎಂದರೆ ಕೇವಲ ಜೀವನೋಪಾಯ ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ. ಒಬ್ಬ ಸಾಮಾನ್ಯ ಪಾನಿಪುರಿ ಮಾರಾಟಗಾರ ತಿಂಗಳಿಗೆ ಗಳಿಸುವ ಮೊತ್ತ ಕೇಳಿದರೆ ನೀವು ಅಕ್ಷರಶಃ ಶಾಕ್ ಆಗ್ತೀರಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಡಿಗ್ರಿ ಪಡೆದವರಿಗಿಂತಲೂ ಈ ವ್ಯಾಪಾರಿ ಹೆಚ್ಚು ಸಂಪಾದಿಸುತ್ತಿದ್ದಾರೆ ಎಂಬ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.
ದಿನಕ್ಕೆ 3,000.ವರ್ಷಕ್ಕೆ 10.8 ಲಕ್ಷದ ಪ್ಯಾಕೇಜ್
ಕಂಟೆಂಟ್ ಕ್ರಿಯೇಟರ್ ಕ್ಯಾಸಿ ಪೆರೇರಾ ಹಂಚಿಕೊಂಡಿರುವ ವಿಡಿಯೋ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಆ ಪಾನಿಪುರಿ ವ್ಯಾಪಾರಿಯ ದಿನಚರಿಯನ್ನು ಹತ್ತಿರದಿಂದ ಗಮನಿಸಿದಾಗ ಸಿಕ್ಕ ಲೆಕ್ಕಾಚಾರ ಹೀಗಿದೆ:
ಒಂದು ಪ್ಲೇಟ್ ಬೆಲೆ: 30 ರೂ.
ದಿನದ ಮಾರಾಟ: ಸರಾಸರಿ 100 ಪ್ಲೇಟ್ಗಳು.
ದಿನದ ಆದಾಯ: 3,000 ರೂ.
ತಿಂಗಳ ಗಳಿಕೆ: ಬರೋಬ್ಬರಿ 90,000 ರೂ.ಹೌದು, ಇವರ ವಾರ್ಷಿಕ ಆದಾಯ 10.8 ಲಕ್ಷ ರೂಪಾಯಿ ಯಾವುದೇ ಎಂ.ಎನ್.ಸಿ ಕಂಪನಿಯ ಸೀನಿಯರ್ ಉದ್ಯೋಗಿಯ ಸಂಬಳಕ್ಕೆ ಇದು ಸಮನಾಗಿದೆ.
https://www.instagram.com/reel/DWG8ZFTCnkH/?utm_source=ig_web_copy_link&igsh=NTc4MTIwNjQ2YQ==
ನೆಟ್ಟಿಗರ ಚರ್ಚೆ: ಬಿಕಾಂ ಡಿಗ್ರಿ ಮಾಡೋದು ವೇಸ್ಟ್ ಅನ್ಸುತ್ತೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ಒಬ್ಬ ಬಿಕಾಂ ಪದವೀಧರನ ಕಾಮೆಂಟ್ ಸಖತ್ ವೈರಲ್ ಆಗಿದೆ. ಬ್ರೋ, ಒಬ್ಬ ಪಾನಿಪುರಿ ವ್ಯಾಪಾರಿ ಪದವೀಧರನಿಗಿಂತ ಹೆಚ್ಚು ಗಳಿಸುತ್ತಾನೆ. ಇಷ್ಟೊಂದು ಕಷ್ಟಪಟ್ಟು ಡಿಗ್ರಿ ಮಾಡೋದು ವೇಸ್ಟ್ ಅನ್ಸುತ್ತೆ ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಇನ್ನು ಕೆಲವರು, ಇದರಲ್ಲಿ ಖರ್ಚು ಎಷ್ಟು? ಉಳಿತಾಯ ಎಷ್ಟು? ಎಂಬ ತಾರ್ಕಿಕ ಪ್ರಶ್ನೆಗಳನ್ನೂ ಎತ್ತಿದ್ದಾರೆ.
ಪರಿಶ್ರಮಕ್ಕೆ ಸಿಕ್ಕ ಫಲ
ಕ್ಯಾಸಿ ಪೆರೇರಾ ಅವರು ಸ್ವತಃ ಸಂಜೆ 4 ರಿಂದ ರಾತ್ರಿ 10 ರವರೆಗೆ ಈ ವ್ಯಾಪಾರಿಗೆ ಸಹಾಯಕರಾಗಿ ಕೆಲಸ ಮಾಡಿ ಈ ಆದಾಯದ ಗುಟ್ಟನ್ನು ಬಯಲು ಮಾಡಿದ್ದಾರೆ. ಕೇವಲ ರುಚಿಯಷ್ಟೇ ಅಲ್ಲ, ಆ ವ್ಯಾಪಾರಿಯ ನಿರಂತರ ಕಠಿಣ ಪರಿಶ್ರಮ ಮತ್ತು ಗ್ರಾಹಕರಿಗೆ ನೀಡುವ ಗುಣಮಟ್ಟದ ಆಹಾರವೇ ಈ ಯಶಸ್ಸಿಗೆ ಕಾರಣ.
ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಸಿಗದ ರುಚಿ ಈ ಬೀದಿಬದಿಯ ಗಾಡಿಗಳಲ್ಲಿ ಸಿಗುವುದರಿಂದಲೇ ಇವರಿಗೆ ಇಷ್ಟೊಂದು ಡಿಮ್ಯಾಂಡ್. ಒಟ್ಟಿನಲ್ಲಿ, ಕೆಲಸ ಯಾವುದಾದರೇನು? ಅದರಲ್ಲಿ ನಿಷ್ಠೆ ಮತ್ತು ಪರಿಶ್ರಮವಿದ್ದರೆ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಈ ಪಾನಿಪುರಿ ವ್ಯಾಪಾರಿ ಸಾಬೀತುಪಡಿಸಿದ್ದಾರೆ.

