HomeKarnatakaGood News: ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ ಟಾಪ್‌

Good News: ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ ಟಾಪ್‌

ಕರ್ನಾಟಕ ಸರ್ಕಾರ ರಾಜಸ್ವ ನಿರೀಕ್ಷಕರು (Revenue Inspector) ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ Chromebook ಲ್ಯಾಪ್ ಟಾಪ್ ಹಂಚೆಕೆ ಮಾಡುವ ಬಗ್ಗೆ ಆದೇಶವನ್ನು ಹೊರಡಿಸಿದೆ.

ಈ ಕುರಿತು ಮೀನಾ ನಾಗರಾಜ್ ಕಂದಾಯ ಆಯುಕ್ತರು, ಕಂದಾಯ ಆಯುಕ್ತಾಲಯ, ಕಂದಾಯ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಸರ್ಕಾರದ ಆದೇಶ ದಿನಾಂಕ 20.01.2025, 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 399ರ ಘೋಷಣೆಯನ್ನು ಉಲ್ಲೇಖಿಸಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ, ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಭೂಮಿ-ಮೋಜಿನಿ-ಎಜೆಎಸ್‌ಕೆ ತಂತ್ರಾಂಶಗಳ ಏಕೀಕರಣದ ಮೂಲಕ ಕಂದಾಯ ಇಲಾಖೆಯು ನೀಡುವ ಎಲ್ಲಾ ಸೇವೆಗಳನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ರೈತರಿಗೆ/ ಸಾರ್ವಜನಿಕರಿಗೆ ಒದಗಿಸಲು ಕ್ರಮ ವಹಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇ-ಆಫೀಸ್ ವ್ಯವಸ್ಥೆಯನ್ನು ಇಲಾಖೆಯ ಗ್ರಾಮ ಮಟ್ಟದವರೆಗೆ ವಿಸ್ತರಿಸಲು ಇದಕ್ಕಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಗತ್ಯವಿರುವ ಲ್ಯಾಪ್ ಟ್ಯಾಪ್‌ ನೀಡಲಾಗುವುದು.

2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ-399ರಲ್ಲಿ ಈ ಕುರಿತು ಘೋಷಿಸಲಾಗಿರುತ್ತದೆ. ಅದರಂತೆ ಡಿಜಿ ಕಂದಾಯ ಯೋಜನೆಯಡಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ Chromebook ಗಳನ್ನು ನೀಡಲು ಕ್ರಮ ವಹಿಸಲಾಗಿರುತ್ತದೆ.

ಅದರಂತೆ ಕಂದಾಯ ನಿರೀಕ್ಷಕರು/ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಹಂಚಿಕೆ ಮಾಡಲು ಈ ಕೆಳಕಂಡ ಷರತ್ತುಗಳಂತೆ ಕ್ರಮಕೈಗೊಳ್ಳತಕ್ಕದ್ದು.

* Chromebook ಲ್ಯಾಪ್‌ಟಾಪ್‌ಗಳನ್ನು ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸಿಕೊಳ್ಳತಕ್ಕದ್ದು. ಉದ್ದೇಶಿತ ಕಾರ್ಯಗಳಿಗೆ ಅಲ್ಲದೇ ಬೇರೆ ಕಾರ್ಯಗಳಿಗೆ ಬಳಸಿದ್ದಲ್ಲಿ ಸಂಬಂಧಿಸಿದ ಕಂದಾಯ ನಿರೀಕ್ಷಕರ/ ಗ್ರಾಮಾಡಳಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

* ಕಂದಾಯ ನಿರೀಕ್ಷಕರು ಪ್ರಸ್ತುತ ಯಾವುದಾದರೂ ಒಂದು ಹೋಬಳಿಯಲ್ಲಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಮಾತ್ರ Chromebook ಲ್ಯಾಪ್ ಟಾಪ್ ಅನ್ನು ಪಡೆಯಲು ಅರ್ಹರಿರುತ್ತಾರೆ.

* ಒಬ್ಬ ಕಂದಾಯ ನಿರೀಕ್ಷಕರು ಹೆಚ್ಚುವರಿ ಹೋಬಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಒಂದೇ Chromebook ಲ್ಯಾಪ್ ಟಾಪ್ ಅನ್ನು ಮಾತ್ರ ವಿತರಿಸತಕ್ಕದ್ದು.

* ಕಂದಾಯ ನಿರೀಕ್ಷಕರು/ ಗ್ರಾಮ ಆಡಳಿತ ಅಧಿಕಾರಿಗಳು ಬೇರೆ ತಾಲ್ಲೂಕು/ ಜಿಲ್ಲೆಗೆ ನಿಯೋಜನೆ/ ವರ್ಗಾವಣೆ ಹೊಂದಿದ್ದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ತಾಲ್ಲೂಕಿನಲ್ಲಿ ಮಾತ್ರ Chromebook ಲ್ಯಾಪ್‌ ಟಾಪ್‌ ಪಡೆಯಲು ಅರ್ಹರಾಗಿರುತ್ತಾರೆ. (ಮೂಲ ತಾಲ್ಲೂಕು/ ಜಿಲ್ಲೆಯಲ್ಲಿ ಎರಡನೇ Chromebook ಲ್ಯಾಪ್ ಟಾಪ್ ಪಡೆಯುವಂತಿಲ್ಲ).

* ಸಹಾಯಕ ಆಯುಕ್ತರ ಕಛೇರಿ/ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ನಿರೀಕ್ಷಕರುಗಳಿಗೆ Chromebook ಲ್ಯಾಪ್ ಟಾಪ್ ವಿತರಿಸುವಂತಿಲ್ಲ.

* ಕಂದಾಯ ನಿರೀಕ್ಷಕರು ಗ್ರಾಮ ಆಡಳಿತ ಅಧಿಕಾರಿಗಳು, ನಿವೃತ್ತಿ ಪದೋನ್ನತಿ ಹೊಂದಿದ್ದಲ್ಲಿ Chromebook ಲ್ಯಾಪ್‌ಟಾಪ್‌ ಅನ್ನು ತಹಶೀಲ್ದಾರ್ ರವರು ಹಿಂಪಡೆದು ಅಗತ್ಯವಿರುವ ಅಧಿಕಾರಿಗೆ ವಿತರಿಸುವುದು.

* ಕಂದಾಯ ನಿರೀಕ್ಷಕರು/ ಗ್ರಾಮ ಆಡಳಿತ ಅಧಿಕಾರಿಗಳು ದೀರ್ಘಾವಧಿ ರಜೆಯ ಮೇಲೆ ತೆರಳಿದ್ದಲ್ಲಿ Chromebook ಲ್ಯಾಪ್‌ಟಾಪ್ ಅನ್ನು ನೀಡುವಂತಿಲ್ಲ.

* ಗ್ರಾಮ ಆಡಳಿತ ಅಧಿಕಾರಿಗಳಿಗೆ ಮತ್ತು ಕಂದಾಯ ನಿರೀಕ್ಷಕರಿಗೆ Chromebook ಲ್ಯಾಪ್‌ಟಾಪ್ ಗಳನ್ನು ವಿತರಿಸಿದ ಬಗ್ಗೆ ವರದಿಯನ್ನು ಈ ಕಚೇರಿಗೆ ಸಲ್ಲಿಸತಕ್ಕದ್ದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular