HomeLatest Newsಚಿನ್ನದ ಮೇಲಿನ ವ್ಯಾಮೋಹ: ಭೂಮಿಯ ಒಡಲಿನಲ್ಲಿ ಇನ್ನು ಎಷ್ಟು ಬಂಗಾರ ಬಾಕಿ ಇದೆ? ಮನುಷ್ಯ ಇದುವರೆಗೆ ಹೊರತೆಗೆದ...

ಚಿನ್ನದ ಮೇಲಿನ ವ್ಯಾಮೋಹ: ಭೂಮಿಯ ಒಡಲಿನಲ್ಲಿ ಇನ್ನು ಎಷ್ಟು ಬಂಗಾರ ಬಾಕಿ ಇದೆ? ಮನುಷ್ಯ ಇದುವರೆಗೆ ಹೊರತೆಗೆದ ಚಿನ್ನ ಎಷ್ಟು?

ಬೆಂಗಳೂರು: ಬಂಗಾರ ಅಂದಾಕ್ಷಣ ಸಾಕು, ಬಹುತೇಕರ ಕಣ್ಣಲ್ಲಿ ಹೊಸ ಹೊಳಪು ಮೂಡುತ್ತದೆ ಹಿಂದೆಲ್ಲಾ ಚಿನ್ನ ಅಂದ್ರೆ ಕೇವಲ ಮಹಿಳೆಯರ ಅಚ್ಚುಮೆಚ್ಚಿನ ಲೋಹ ಎಂಬ ಮಾತನ್ನೇ ಕೇಳುತ್ತಿದ್ದೆವು. ಆದರೆ ಕಾಲ ಬದಲಾಗಿದೆ; ಇಂದು ಪುರುಷರೂ ಕೂಡ ಟ್ರೆಂಡಿ ಚಿನ್ನಾಭರಣಗಳನ್ನು ಧರಿಸುವಲ್ಲಿ ಮಹಿಳೆಯರಿಗೆ ಸಮನಾದ ಪೈಪೋಟಿ ನೀಡುತ್ತಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಹಳದಿ ಲೋಹದ ಬೆಲೆ ಲಕ್ಷದ ಗಡಿ ದಾಟುತ್ತಿದ್ದರೂ ಸಹ, ಜನರ ಚಿನ್ನದ ವ್ಯಾಮೋಹ ಮಾತ್ರ ಕಿಂಚಿತ್ತೂ ತಗ್ಗಿಲ್ಲ.

ಅದರಲ್ಲೂ ಹಬ್ಬದ ದಿನಗಳಲ್ಲಂತೂ ಆಭರಣ ಮಳಿಗೆಗಳ ಮುಂದೆ ಜನಜಾತ್ರೆಯೇ ನೆರೆದಿರುತ್ತದೆ. ಬೆಲೆ ಏರಿಕೆಯ ಬಿಸಿಗಿಂತ ಬಂಗಾರವೇ ಮಿಗಿಲು ಎಂಬಂತಿರುವ ಜನರ ಈ ಕ್ರೇಜ್ ನೋಡುಗರನ್ನು ಬೆರಗುಗೊಳಿಸುವಂತಿದೆ ಈ ಬೆನ್ನಲ್ಲೇ, ಭೂಮಿಯ ಆಳದಲ್ಲಿ ಇನ್ನು ಎಷ್ಟು ಚಿನ್ನ ಅಡಗಿದೆ? ಮನುಷ್ಯ ಇದುವರೆಗೆ ಎಷ್ಟು ಚಿನ್ನವನ್ನು ಹೊರತೆಗೆದಿದ್ದಾನೆ? ಎಂಬ ಕುತೂಹಲಕಾರಿ ಪ್ರಶ್ನೆಗಳಿಗೆ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಅಚ್ಚರಿಯ ಉತ್ತರ ನೀಡಿದೆ.

ಇತಿಹಾಸದಲ್ಲೇ ಮನುಷ್ಯ ಹೊರತೆಗೆದ ಚಿನ್ನ ಎಷ್ಟು ಗೊತ್ತೇ?

ವರದಿಯ ಪ್ರಕಾರ, ದಾಖಲಿತ ಇತಿಹಾಸದಲ್ಲಿ ಮಾನವನು ಇದುವರೆಗೆ ಬಂಡೆಗಳು ಮತ್ತು ನದಿಗಳಿಂದ ಸುಮಾರು 2,10,000 ಟನ್‌ಗಳಿಗಿಂತಲೂ ಅಧಿಕ ಚಿನ್ನವನ್ನು ಹೊರತೆಗೆದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಲ್ಲಿ ಸುಮಾರು 26,000 ಟನ್‌ಗಳಿಗಿಂತ ಹೆಚ್ಚು ಅಧಿಕೃತ ಮಾರುಕಟ್ಟೆ ಚಲಾವಣೆಯಲ್ಲಿದೆ.

ವಿಶೇಷವೆಂದರೆ ವಿಶ್ವದ ಟಾಪ್ 10 ರಾಷ್ಟ್ರಗಳ ಒಟ್ಟು ಮೀಸಲು ಸಂಗ್ರಹಕ್ಕಿಂತಲೂ ಮನುಷ್ಯ ಇದುವರೆಗೆ ಗಣಿಗಾರಿಕೆ ಮಾಡಿ ತೆಗೆದ ಚಿನ್ನದ ಪ್ರಮಾಣವೇ ಹೆಚ್ಚಿದೆ

ಈ ಬೃಹತ್ ಪ್ರಮಾಣದ ಚಿನ್ನದ ಹೆಚ್ಚಿನ ಪಾಲನ್ನು ಆಭರಣ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆಗೆ ಬಳಸಲಾಗಿದೆ.

ಖಾಲಿಯಾಗುತ್ತಿದೆಯೇ ಚಿನ್ನದ ನಿಕ್ಷೇಪ? ಭೂಮಿಯಲ್ಲಿ ಬಾಕಿ ಇರುವುದು ಇಷ್ಟೇ

ಕೈಗಾರಿಕೀಕರಣದ ನಂತರ ಚಿನ್ನದ ಗಣಿಗಾರಿಕೆ ವೇಗ ಪಡೆದುಕೊಂಡಿದ್ದು, ನಿಕ್ಷೇಪಗಳು ವೇಗವಾಗಿ ಖಾಲಿಯಾಗುತ್ತಿವೆ. ಆದರೂ, ಭೂಮಿಯ ಆಳದಲ್ಲಿ ಇನ್ನು ಸುಮಾರು 57,000 ರಿಂದ 70,550 ಟನ್‌ಗಳಷ್ಟು ಚಿನ್ನದ ನಿಕ್ಷೇಪಗಳು ಬಾಕಿ ಇವೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ, ರಷ್ಯಾ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ವಿಶ್ವದ ಅತಿದೊಡ್ಡ ಬಳಕೆಯಾಗದ ಚಿನ್ನದ ನಿಕ್ಷೇಪಗಳನ್ನು ಹೊಂದಿವೆ.

ವಿಶ್ವದ ಚಿನ್ನ ಎಲ್ಲೆಲ್ಲಿ ಹಂಚಿಕೆಯಾಗಿದೆ?

ವಿಶ್ವದ ಒಟ್ಟು ಚಿನ್ನದ ಬಳಕೆಯ ಅಂಕಿ-ಅಂಶಗಳು ಹೀಗಿವೆ:

45%: ಆಭರಣಗಳ ರೂಪದಲ್ಲಿ ಜನರ ಬಳಿ ಇದೆ.

22%: ಹೂಡಿಕೆಯ ರೂಪದಲ್ಲಿ (ಬಿಸ್ಕತ್ತು ಮತ್ತು ನಾಣ್ಯಗಳು).

17%: ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಲ್ಲಿ (Central Banks) ಮೀಸಲು ಸಂಗ್ರಹವಾಗಿದೆ.

ಉಳಿದ ಭಾಗ: ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ.

ಚಿನ್ನದ ಮೀಸಲು ಸಂಗ್ರಹದಲ್ಲಿ ಅಮೆರಿಕ ನಂ.1

ಚಿನ್ನದ ಉತ್ಪಾದನೆಯಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದರೂ, ಚಿನ್ನದ ಮೀಸಲು ಸಂಗ್ರಹದಲ್ಲಿ (Gold Reserves) ಅಮೆರಿಕ ಇಂದಿಗೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಭಾರತ ಕೂಡ ತನ್ನ ಚಿನ್ನದ ಸಂಗ್ರಹವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಾ ಅಗ್ರ ರಾಷ್ಟ್ರಗಳ ಪಟ್ಟಿಯಲ್ಲಿ ಮುಂದುವರಿದಿದೆ

ಚಿನ್ನದ ಮೀಸಲು ಸಂಗ್ರಹದಲ್ಲಿ ಯಾವ ದೇಶ ನಂ.1?

ಚಿನ್ನದ ಉತ್ಪಾದನೆಯಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದರೂ, ಚಿನ್ನದ ಮೀಸಲು ಸಂಗ್ರಹದಲ್ಲಿ (Gold Reserves) ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.

ದೇಶ ಚಿನ್ನದ ಮೀಸಲು ಸಂಗ್ರಹ (ಟನ್‌ಗಳಲ್ಲಿ)

ಅಮೆರಿಕ (USA)8,133.46

ಜರ್ಮನಿ 3,351.53

ಇಟಲಿ 2,451.84

ಫ್ರಾನ್ಸ್ 2,436.97

ರಷ್ಯಾ 2,335.85

ಚೀನಾ 2,264.32

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular