HomeKarnatakaBIG NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ ; ಪಹಣಿ ತಿದ್ದುಪಡಿಗಾಗಿ ತಹಶೀಲ್ದಾರ್ ಅಧಿಕಾರ...

BIG NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ ; ಪಹಣಿ ತಿದ್ದುಪಡಿಗಾಗಿ ತಹಶೀಲ್ದಾರ್ ಅಧಿಕಾರ ಅವಧಿ ವಿಸ್ತರಣೆ.!

ಬೆಂಗಳೂರು: ರಾಜ್ಯಾದ್ಯಂತ ಬಾಕಿ ಇರುವ ಲಕ್ಷಾಂತರ ಪಹಣಿ (RTC) ದೋಷಗಳನ್ನು ಸರಿಪಡಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಕಂದಾಯ ಅದಾಲತ್ ಮೂಲಕ ಪಹಣಿ ತಿದ್ದುಪಡಿ ಮಾಡುವ ತಹಶೀಲ್ದಾರ್‌ಗಳ ಅಧಿಕಾರಾವಧಿಯನ್ನು 31 ಡಿಸೆಂಬರ್2026 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಯಾರಿಗೆ ಅನ್ವಯ?: ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳ ತಹಶೀಲ್ದಾರ್‌ಗಳಿಗೆ ಈ ಅಧಿಕಾರ ನೀಡಲಾಗಿದೆ.

ಅಧಿಕಾರಾವಧಿ : ಈ ವಿಶೇಷ ಅಧಿಕಾರವು 20-03-2026 ರಿಂದ31-12-2026 ರವರೆಗೆ ಚಾಲ್ತಿಯಲ್ಲಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ ದೋಷಗಳತಿದ್ದುಪಡಿ?: * ಆಕಾರ್‌ಬಂದ್ ಮತ್ತು ಪಹಣಿ ವಿಸ್ತೀರ್ಣದಲ್ಲಿನ ವ್ಯತ್ಯಾಸ.

  • ಖಾತೆದಾರರ ಹೆಸರು ಮತ್ತು ವಂಶಾವಳಿ ತಿದ್ದುಪಡಿ.
  • ಬೆಳೆ ವಿವರಗಳ ಇಂದೀಕರಣದಲ್ಲಿನ ತಪ್ಪುಗಳು.
  • ಮ್ಯುಟೇಶನ್ (Mutation) ಆದರೂ ಪಹಣಿಯಲ್ಲಿ ದಾಖಲಾಗದ ಪ್ರಕರಣಗಳು.

ಸರ್ಕಾರದ ಎಚ್ಚರಿಕೆ

ಪಹಣಿ ತಿದ್ದುಪಡಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಎಸಗಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ ತಹಶೀಲ್ದಾರ್ ಅಥವಾ ಸಿಬ್ಬಂದಿ ನಿಯಮಬಾಹಿರವಾಗಿ ದಾಖಲೆ ತಿದ್ದುಪಡಿ ಮಾಡಿದರೆ, ಅವರ ವಿರುದ್ಧ ಇಂಡಿಯನ್ ಪೀನಲ್ ಕೋಡ್ (IPC) ಸೆಕ್ಷನ್ 409 ಮತ್ತು ಕರ್ನಾಟಕ ಭೂಕಂದಾಯ ಕಾಯ್ದೆ 192-A ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular