HomeKarnatakaBIG NEWS : ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ಚಾಲನೆ

BIG NEWS : ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ಚಾಲನೆ

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಪ್ರಾಚೀನ ಹಾಗೂ ಸಾಂಸ್ಕೃತಿಕ ಹಬ್ಬವಾದ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಇಂದು ಚಾಲನೆ ಸಿಗಲಿದೆ . ಹೌದು. ನಗರದ ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಈ ಒಂಬತ್ತು ದಿನಗಳ ಧಾರ್ಮಿಕ ವೈಭವಕ್ಕೆ ಚಾಲನೆ ದೊರೆಯಲಿದ್ದು, ಇಡೀ ಸಿಲಿಕಾನ್ ಸಿಟಿ ಈಗ ಹಬ್ಬದ ಕಳೆಯನ್ನು ತುಂಬಿಕೊಂಡಿದೆ.

ಜ್ಞಾನೇಂದ್ರ ಸ್ವಾಮಿ ಅವರು ಈ ಬಾರಿ ಸತತ 16ನೇ ಬಾರಿಗೆ ಬೆಂಗಳೂರು ಕರಗವನ್ನು ಹೊರಲಿದ್ದಾರೆ. ಇವರ ಅನುಭವ ಮತ್ತು ಭಕ್ತಿ ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.ಒಟ್ಟು 11 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕರಗ ಶಕ್ತ್ಯೋತ್ಸವ ನಡೆಯಲಿದೆ.

ಮಾರ್ಚ್ 24, 2026 ರಂದು ಇಂದು ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.ಮಾರ್ಚ್ 30, 2026 ರಂದು ರಾತ್ರಿ ಪ್ರಸಿದ್ಧ ‘ಹಸಿಕರಗ’ ಮಹೋತ್ಸವ ಜರುಗಲಿದೆ.ಹೂವಿನ ಕರಗ (ಮುಖ್ಯ ಉತ್ಸವ): ಚೈತ್ರ ಪೌರ್ಣಮಿಯ ದಿನವಾದ ಏಪ್ರಿಲ್ 1, 2026ರ ಮಧ್ಯರಾತ್ರಿ ವಿಶ್ವವಿಖ್ಯಾತ ಹೂವಿನ ಕರಗ ಮೆರವಣಿಗೆ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋಮು ಸೌಹಾರ್ದತೆ: ಎಂದಿನಂತೆ ಈ ಬಾರಿಯೂ ಕರಗವು ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡುವ ಮೂಲಕ ಸರ್ವಧರ್ಮ ಸಮನ್ವಯದ ಸಂದೇಶವನ್ನು ಸಾರಲಿದೆ. ಸಂಪ್ರದಾಯದಂತೆ ಕರಗ ಮೆರವಣಿಗೆಯು ಕೌಟುಂಬಿಕ ಸೌಹಾರ್ದತೆಯ ಸಂಕೇತವಾಗಿ ತವಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಲಿದೆ. ಸಹಸ್ರಾರು ವೀರಕುಮಾರರು ‘ಗೋವಿಂದಾ.. ಗೋವಿಂದಾ..’ ಎಂಬ ಘೋಷಣೆಯೊಂದಿಗೆ ಕತ್ತಿ ವರಸೆ ಪ್ರದರ್ಶಿಸುತ್ತಾ ಕರಗವನ್ನು ಸ್ವಾಗತಿಸಲಿದ್ದಾರೆ.ಮಲ್ಲಿಗೆ ಹೂವಿನಿಂದ ಅಲಂಕೃತವಾದ ಕರಗವನ್ನು ಹೊತ್ತ ಅರ್ಚಕರು ನಗರದ ಪ್ರಮುಖ ಪೇಟೆ ಬೀದಿಗಳಲ್ಲಿ ಸಂಚರಿಸಲಿದ್ದಾರೆ.

ಲಕ್ಷಾಂತರ ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ಮತ್ತು ಪೊಲೀಸ್ ಇಲಾಖೆ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಿವೆ. ರಸ್ತೆಗಳ ದುರಸ್ತಿ, ಕುಡಿಯುವ ನೀರು ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಯು ಹಬ್ಬದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular