HomeInternationalಪರಮಾಣು ಯುದ್ಧಕ್ಕೆ ಸದ್ದೇ ಇಲ್ಲದೆ ಸಾಗಿದೆಯಾ ತಯಾರಿ? ಟ್ರಂಪ್ ಮಾತಿನಿಂದ ಭಯ.. ಭಯ..Iran Conflict

ಪರಮಾಣು ಯುದ್ಧಕ್ಕೆ ಸದ್ದೇ ಇಲ್ಲದೆ ಸಾಗಿದೆಯಾ ತಯಾರಿ? ಟ್ರಂಪ್ ಮಾತಿನಿಂದ ಭಯ.. ಭಯ..Iran Conflict

ಪರಮಾಣು ಬಾಂಬ್… ಈ ಪದವು ಕಿವಿಗೆ ಬಿದ್ದರೆ ಸಾಕು ಈಗ ತಾನೇ ಹುಟ್ಟಿದ ಮಗು ಸಹಿತ ಎಲ್ಲರೂ ಒಂದು ಬಾರಿ ಥಟ್ ಎಂದು ತಿರುಗಿ ನೋಡುವಷ್ಟು ಭಯ ಮನುಷ್ಯರ ವಂಶವಾಹಿನಿ ಜೊತೆ ಬೆರೆತು ಹೋಗಿದೆ ಎನ್ನಬಹುದು. ಈ ಸ್ಥಿತಿ ಏಕೆಂದರೆ ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಆವೇಶಕ್ಕೆ ಜಗತ್ತನ್ನೇ ಒಂದೇ ಒಂದು ಕ್ಷಣದಲ್ಲಿ ನಾಶ ಮಾಡುವ ಅಸ್ತ್ರ ಸುಮಾರು 80 ವರ್ಷಗಳ ಹಿಂದೆ ತಯಾರಾಗಿತ್ತು. ಹೀಗೆ ಮನುಷ್ಯರನ್ನ 80 ವರ್ಷಗಳಿಂದ ಪ್ರತಿದಿನ ಕೂಡ ಭಯಪಡಿಸುತ್ತಲೇ ಇರುವ ಪರಮಾಣು ಬಾಂಬ್ ಅಥವಾ ನ್ಯೂಕ್ಲಿಯರ್ ಅಸ್ತ್ರ ಮತ್ತೊಮ್ಮೆ ಭೂಮಿ ಮೇಲೆ ಹಾಗೂ ಮನುಷ್ಯರ ಪ್ರಯೋಗವಾಗುವ ಸಾಧ್ಯತೆಯ ಕಾರ್ಮೋಡ ಇದೀಗ ಆವರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಿಶ್ವಯುದ್ಧದ ಆತಂಕವನ್ನು ಹೆಚ್ಚಿಸುವ ರೀತಿಯಲ್ಲಿ ಕಠಿಣ ಎಚ್ಚರಿಕೆ ನೀಡಿರುವುದು ಪರಮಾಣು ಯುದ್ಧದ ಭಯ ಹುಟ್ಟಿಸಿದೆ. ಇರಾನ್‌ ದೇಶದ ಅತ್ಯಂತ ದೊಡ್ಡ ನೈಸರ್ಗಿಕ ಅನಿಲ ಪ್ರದೇಶದ ಮೇಲೆ ಇಸ್ರೇಲ್ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿದ ನಂತರ, ಇರಾನ್ ಕೂಡ ಮರುದಾಳಿ ಶುರು ಮಾಡಿದೆ. ಇರಾನ್ ದೇಶದ ಅತ್ಯಂತ ಸೂಕ್ಷ್ಮ ಹಾಗೂ ಅನಿವಾರ್ಯ ತೈಲ ಘಟಕವನ್ನೇ ನಾಶ ಮಾಡಿದೆ ಇಸ್ರೇಲ್, ಇದೇ ಕಾರಣಕ್ಕೆ ರೊಚ್ಚಿಗೆದ್ದ ಇರಾನ್ ಸೇನೆ ಸೌದಿ ಅರೇಬಿಯಾ ಸೇರಿದಂತೆ ಕತಾರ್, ಕುವೈತ್ ಹಾಗೂ ಯುಎಇ ನೆಲದಲ್ಲಿ ಕೂಡ ತೈಲ ಘಟಕಗಳ ಮೇಲೆ ಕೂಡ ದೊಡ್ಡ ಮಟ್ಟಿಗೆ ದಾಳಿ ನಡೆಸುತ್ತಿದೆ.

ಜಗತ್ತಿನ ಮೂಲೆ ಮೂಲೆಯಲ್ಲೂ ಆತಂಕ
ಯುದ್ಧದಿಂದ ಜಾಗತಿಕ ಆರ್ಥಿಕತೆ ಬುಡ ಅಲ್ಲಾಡುತ್ತಿದ್ದು, ತೈಲದ ಸಮಸ್ಯೆ ಕೂಡ ದೊಡ್ಡದಾಗಿದೆ. ಈ ಕಾರಣಕ್ಕೆ ಈಗ ಅಮೆರಿಕ ಸೇನೆ ಮಟ್ಟದಲ್ಲೇ ಇರಾನ್ ನಾಶ ಮಾಡುವಂತೆ ದಾಳಿ ಮಾಡಲು ಸಜ್ಜಾಗಿದೆ. ಅದ್ರಲ್ಲೂ ಪರಮಾಣು ಅಸ್ತ್ರ ಎಂಬ ವಿನಾಶಕಾರಿ ಬಾಂಬ್ ಬಳಸಲು ಅಮೆರಿಕ ಸಜ್ಜಾಗಿದೆ ಎಂಬ ಅನುಮಾನ ಮೂಡಿದೆ. ಈಗಾಗಲೇ ಈ ಬಗ್ಗೆ ರಷ್ಯಾ & ಚೀನಾ ನಾಯಕರಿಗೆ ಅನುಮಾನ ಕೂಡ ಮೂಡಿದ್ದು, ಅಮೆರಿಕ ಬಳಿ ಇರುವ ವಿಚಿತ್ರ ವಿನ್ಯಾಸ ಇರುವ ಫೈಟರ್ ಜೆಟ್‌ಗಳ ಬಗ್ಗೆಯೇ ಆತಂಕ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಸೇನೆ ದೊಡ್ಡದಾಗಿ ಅಸ್ತ್ರಗಳ ರಾಶಿಯನ್ನೇ ಇರಾನ್ ಬಳಿ ನಿಯೋಜನೆ ಮಾಡಿದ್ದು, ಯುದ್ಧ ನೌಕೆ ಹಾಗೂ ಫೈಟರ್ ಜೆಟ್ ಸಮೇತ ಹಲವಾರು ಅಸ್ತ್ರಗಳು ಮಧ್ಯಪ್ರಾಚ್ಯ ತಲುಪಿವೆ. ಇಂತಹ ಸಮಯದಲ್ಲೇ ಪರಮಾಣು ಅಸ್ತ್ರ ಬಳಕೆಯ ಬಗ್ಗೆಯೂ ಅನುಮಾನ ಹೆಚ್ಚಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ಇರಾನ್ ಸೇನೆಯು ಕತಾರ್ ಮೇಲೆ ನಡೆಸಿದ ಪ್ರತಿದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಟ್ರಂಪ್, ಇದಕ್ಕೆ ಸರಿಯಾದ ಶಾಸ್ತಿ ಆಗಬೇಕು ಎಂದಿದ್ದರು. ಅಲ್ಲದೆ ಅಮೆರಿಕದ ಸೇನಾಧಿಕಾರಿಗಳ ಉನ್ನತ ಸಭೆಯಲ್ಲಿ ಕೂಡ ಈ ಕುರಿತಾಗಿ, ಭಾರಿ ಆಕ್ರೋಶ ಹೊರ ಹಾಕಿರುವ ಟ್ರಂಪ್ ಅವರು ಇರಾನ್ ಸೇನೆ ಸೊಕ್ಕನ್ನು ಹೇಗಾದರೂ ಅಡಗಿಸಬೇಕು ಎಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಹೇಗಾದರೂ… ಎಂಬ ಪದವೇ ಇಲ್ಲಿ ಹೆಚ್ಚು ಭಯ ಹುಟ್ಟುಹಾಕುತ್ತ ಇದೆ. ಟ್ರಂಪ್ ಅವರ ನಡೆ ದಿನದಿಂದ ದಿನಕ್ಕೆ ನಿಗೂಢವಾಗುತ್ತಿದೆ. ಇರಾನ್‌ ದೇಶದ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ದಾಳಿ ನಡೆಸಿದ ಬಳಿಕ ಸೇಡು ತೀರಿಸಿಕೊಳ್ಳಲು ಇರಾನ್ ಸೇನೆ, ಕತಾರ್‌ ದೇಶದ ರಾಸ್ ಲಾಫ್ಫಾನ್ ಇಂಡಸ್ಟ್ರಿಯಲ್ ಸಿಟಿಯ LNG ಘಟಕದ ಮೇಲೆ ಮಾರ್ಚ್ 18ರ ಬುಧವಾರ ಮಿಸೈಲ್ ಅಟ್ಯಾಕ್ ಮಾಡಿತ್ತು.

ಕಠಿಣ ನಿಲುವು ಕೈಗೊಂಡರೆ 3ನೇ ಮಹಾಯುದ್ಧ?
ಕಳೆದ ವರ್ಷದ ಜೂನ್ ತಿಂಗಳು, ಎಂದರೆ 2025ರ ಜೂನ್‌ನಲ್ಲಿ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ನಡೆದ ಅಮೆರಿಕ ದಾಳಿ ಉಲ್ಲೇಖಿಸಿದ್ದ ಟ್ರಂಪ್ ಅವರು, ನಾನು ಸಾಧ್ಯವಾದಾಗ ಶಾಂತಿ ಮಾರ್ಗ ಅನುಸರಿಸುತ್ತೇನೆ. ಆದರೆ ಅಮೆರಿಕಗೆ ಬೆದರಿಕೆ ಬಂದಾಗ ಎದುರಿಸಲು ಹಿಂಜರಿಯಲ್ಲ ಎಂದಿದ್ದರು ಫೆಬ್ರವರಿ 24ರ ಭಾಷಣದ ವೇಳೆ. ಅಂದರೆ, ಇರಾನ್ ವಿರುದ್ಧ ಇಸ್ರೇಲ್ ದಾಳಿ ನಡೆಸಿ ಅಮೆರಿಕ ಕೂಡ ಇಸ್ರೇಲ್‌ಗೆ ಸಾಥ್ ಕೊಡುವ ಕೇವಲ 4 ದಿನಗಳ ಹಿಂದೆ ಟ್ರಂಪ್ ಅವರು ಈ ರೀತಿಯ ಎಚ್ಚರಿಕೆ ನೀಡಿದ್ದರು.

ಆದರೆ ಇದೀಗ ಇರಾನ್ ವಿರುದ್ಧ ಯುದ್ಧ ಶುರುವಾಗಿ 22 ದಿನಗಳೇ ಕಳೆದು ಹೋಗಿದೆ. ಇಂತಹ ಸಮಯದಲ್ಲೇ ಭಯ ಇನ್ನಷ್ಟು ಹೆಚ್ಚಾಗಿದ್ದು, ಪರಮಾಣು ಅಸ್ತ್ರ ಬಳಕೆ ಬಗ್ಗೆ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕಸ್ಮಾತ್ ಹೀಗೆ ಪರಮಾಣು ಅಸ್ತ್ರ ಬಳಕೆಯಾದರೆ ಆಗ 3ನೇ ಮಹಾಯುದ್ಧ ಶುರುವಾಗಲಿದೆ. ಈ ಮೂಲಕ ಜಗತ್ತಿನ ಮೊದಲ 2 ಮಹಾಯುದ್ಧಗಳು ಯುರೋಪ್ ನೆಲದಲ್ಲಿ ಆರಂಭ ಆಗಿದ್ದವು, ಆದರೆ ಈಗ 3ನೇ ಮಹಾಯುದ್ಧ ಮಧ್ಯಪ್ರಾಚ್ಯ ಭಾಗದಲ್ಲಿ ಆರಂಭವಾಗುವ ಮುನ್ಸೂಚನೆ ಸಿಗುತ್ತಿರುವುದು ಮನುಷ್ಯರ ಭವಿಷ್ಯವನ್ನೇ ಮಂಕಾಗಿಸುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular