HomeKarnatakaSHOCKING : ಸಾಕು ಬೆಕ್ಕಿನ ಮೇಲೆ ಅತಿಯಾದ ಪ್ರೀತಿ ; ಇಬ್ಬರು ಯುವತಿಯರು ಆತ್ಮಹತ್ಯೆ.!

SHOCKING : ಸಾಕು ಬೆಕ್ಕಿನ ಮೇಲೆ ಅತಿಯಾದ ಪ್ರೀತಿ ; ಇಬ್ಬರು ಯುವತಿಯರು ಆತ್ಮಹತ್ಯೆ.!

ಪ್ರೀತಿಯಿಂದ ಸಾಕುವ ಪ್ರಾಣಿಗಳು ಮನುಷ್ಯನಿಗೆ ಸಾಂತ್ವನ ನೀಡುತ್ತವೆ ಎಂಬ ಮಾತಿದೆ. ಆದರೆ, ಹೈದರಾಬಾದ್‌ನಲ್ಲಿ ಸಾಕುಪ್ರಾಣಿಗಳ ಮೇಲಿನ ಅತಿಯಾದ ವ್ಯಾಮೋಹ ಮತ್ತು ವಿರಹ ಇಬ್ಬರು ಯುವತಿಯರ ಬಲಿಯನ್ನೇ ಪಡೆದಿದೆ.

ತೆಲಂಗಾಣದ ರಾಜಧಾನಿಯಲ್ಲಿ ಬೆಕ್ಕಿನ ವಿಷಯವಾಗಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವತಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದು ಕಡೆ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಬೆಕ್ಕು ಸಾವನ್ನಪ್ಪಿದ್ದನ್ನು ಸಹಿಸಲಾರದೆ ಯುವತಿಯೊಬ್ಬಳು ವಿಷ ಸೇವಿಸಿದರೆ, ಮತ್ತೊಂದೆಡೆ ಬೆಕ್ಕನ್ನು ಮನೆಗೆ ತರಬೇಡ ಎಂದು ತಾಯಿ ಮಂದಲಿಸಿದ್ದಕ್ಕೆ ಮನನೊಂದ ಎಂಬಿಬಿಎಸ್ (MBBS) ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಸಾಕುಪ್ರಾಣಿಗಳ ಮೇಲಿನ ಅತಿರೇಕದ ಪ್ರೀತಿ ಮತ್ತು ಭಾವನಾತ್ಮಕ ಅಸ್ಥಿರತೆ ಹೇಗೆ ಒಂದು ಬದುಕನ್ನೇ ಕಸಿದುಕೊಳ್ಳಬಹುದು ಎಂಬುದಕ್ಕೆ ಈ ಘಟನೆಗಳು ಕನ್ನಡಿ ಹಿಡಿದಿವೆ.

ಅನೇಕರು ಪ್ರೀತಿಯಿಂದ ಸಾಕುವ ಸಾಕುಪ್ರಾಣಿಗಳೇ ಇಂದು ಅವರ ಪ್ರಾಣ ಕಳೆದುಕೊಳ್ಳಲು ಕಾರಣವಾಗುತ್ತಿವೆ. ಹೌದು, ತೆಲಂಗಾಣದಲ್ಲಿ ಬೆಕ್ಕುಗಳ ಕಾರಣದಿಂದಾಗಿ ಇಬ್ಬರು ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ತಾನು ಇಷ್ಟಪಟ್ಟು ಸಾಕಿದ್ದ ಬೆಕ್ಕು ಮೃತಪಟ್ಟಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ, ಹೈದರಾಬಾದ್‌ನಲ್ಲಿ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬೆಕ್ಕನ್ನು ಮನೆಗೆ ತರಬೇಡ ಎಂದಿದ್ದಕ್ಕೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ 1) ಬೆಕ್ಕನ್ನು ಮನೆಗೆ ತರಬೇಡ ಎಂದಿದ್ದಕ್ಕೆ ಆತ್ಮಹತ್ಯೆ

ಹೈದರಾಬಾದ್‌ನ ಅಲ್ವಾಲ್ ನಿವಾಸಿಗಳಾದ ಕುಸುಮಲತಾ ಮತ್ತು ದೇವದತ್ತಂ ದಂಪತಿಯ ಪುತ್ರಿ ಶ್ರೇಷ್ಠಾ ಪ್ರಸ್ತುತ ಎಂಬಿಬಿಎಸ್ (MBBS) ವ್ಯಾಸಂಗ ಮಾಡುತ್ತಿದ್ದರು. ಮನೆಯಲ್ಲಿ ಸಾಕುತ್ತಿದ್ದ ಬೆಕ್ಕಿನ ವಿಷಯವಾಗಿ ಶುಕ್ರವಾರ ಶ್ರೇಷ್ಠಾ ಮತ್ತು ಆಕೆಯ ತಾಯಿಯ ನಡುವೆ ವಾಗ್ವಾದ ನಡೆದಿತ್ತು. ಬೆಕ್ಕನ್ನು ಮನೆಗೆ ತರಬೇಡ ಎಂದು ತಾಯಿ ಮಂದಲಿಸಿದ್ದರು. ಇದರಿಂದ ತೀವ್ರ ಮನನೊಂದ ಶ್ರೇಷ್ಠಾ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಫ್ಯಾನಿಗೆ ನೇಣು ಹಾಕಿಕೊಂಡಿರುವುದನ್ನು ಕಂಡ ಪೋಷಕರು ಕಣ್ಣೀರು ಹಾಕಿದ್ದಾರೆ. ಪಿಜಿ (PG) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಸಣ್ಣ ವಿಚಾರಕ್ಕೆ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ವಿಷಾದ ಮೂಡಿಸಿದೆ.

ಘಟನೆ 2)  ಸಾಕಿದ ಬೆಕ್ಕುಸತ್ತಿದ್ದಕ್ಕೆ ಆತ್ಮಹತ್ಯೆ

ಇದೇ ರೀತಿಯ ಮತ್ತೊಂದು ಘಟನೆ ಮೂರು ದಿನಗಳ ಹಿಂದೆ ಮೀರ್‌ಪೇಟೆಯಲ್ಲಿ ನಡೆದಿದೆ. ತಾನು ಪ್ರೀತಿಯಿಂದ ಸಾಕಿದ್ದ ಬೆಕ್ಕು ಮೃತಪಟ್ಟಿದ್ದನ್ನು ತಡೆಯಲಾಗದೆ ಹಿಮಬಂದು ಎಂಬ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಈ ಬೆಕ್ಕನ್ನು ತನ್ನ ಮನೆಯ ಸದಸ್ಯರಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಹಿಮಬಂದು, ಅದು ಸತ್ತ ತಕ್ಷಣ ಏನನ್ನೋ ಕಳೆದುಕೊಂಡ ಭಾವನೆಯಿಂದ ಕ್ರಿಮಿನಾಶಕ ಸೇವಿಸಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

 ಸಾಮಾನ್ಯವಾಗಿ ನಾಯಿ, ಬೆಕ್ಕು ಅಥವಾ ಪಕ್ಷಿಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಸಹಜ. ಅವುಗಳನ್ನು ಮನೆಯ ಸದಸ್ಯರಂತೆ ಕಂಡು ಹುಟ್ಟುಹಬ್ಬವನ್ನೂ ಆಚರಿಸುವವರಿದ್ದಾರೆ. ಆದರೆ, ಅದೇ ಅತಿರೇಕದ ಪ್ರೀತಿ ಈಗ ಇಬ್ಬರು ಯುವತಿಯರ ಸಾವಿಗೆ ಕಾರಣವಾಗಿರುವುದು ನಿಜಕ್ಕೂ ದುರದೃಷ್ಟಕರ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular