HomeLatest News'ಧುರಂಧರ್ 2' ಚಿತ್ರತಂಡಕ್ಕೆ ಪೈರಸಿ ಶಾಕ್ : ಪಾಕಿಸ್ತಾನದಲ್ಲಿ ಇಡೀ ಸಿನಿಮಾ ಲೀಕ್ !

‘ಧುರಂಧರ್ 2’ ಚಿತ್ರತಂಡಕ್ಕೆ ಪೈರಸಿ ಶಾಕ್ : ಪಾಕಿಸ್ತಾನದಲ್ಲಿ ಇಡೀ ಸಿನಿಮಾ ಲೀಕ್ !

ಬಾಕ್ಸ್ ಆಫೀಸ್‌’ನಲ್ಲಿ ಅಬ್ಬರಿಸುತ್ತಿದ್ದ ‘ಧುರಂಧರ್ 2’ ಚಿತ್ರತಂಡಕ್ಕೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿ ಶಾಕ್ ಎದುರಾಗಿದೆ.  ಅದಿತ್ಯ ಧರ್ ನಿರ್ದೇಶನದ ಈ ಹೈ-ವೋಲ್ಟೇಜ್ ಸಿನಿಮಾ ಈಗ ಪಾಕಿಸ್ತಾನದಲ್ಲಿ ಸಂಪೂರ್ಣವಾಗಿ ಲೀಕ್ ಆಗಿದ್ದು, ಪತ್ರಕರ್ತರೊಬ್ಬರು ತಮ್ಮ ಮನೆಯಲ್ಲೇ ಸಿನಿಮಾ ವೀಕ್ಷಿಸುತ್ತಿರುವ ಫೋಟೋ ಹಂಚಿಕೊಂಡು ಚಿತ್ರತಂಡಕ್ಕೆ ಸವಾಲು ಹಾಕಿದ್ದಾರೆ.

ಹೌದು. ಅದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ 2’ (Dhurandhar: The Revenge) ಚಿತ್ರಕ್ಕೆ ಬಿಡುಗಡೆಯಾದ ಬೆನ್ನಲ್ಲೇ ಪೈರಸಿ ಬಿಸಿ ತಟ್ಟಿದೆ. ಮಾರ್ಚ್ 19 ರಂದು ಅದ್ಧೂರಿಯಾಗಿ ತೆರೆಕಂಡ ಈ ಚಿತ್ರದ ಪೈರೇಟೆಡ್ ಆವೃತ್ತಿಯು ಪಾಕಿಸ್ತಾನದಲ್ಲಿ ಲಭ್ಯವಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಎಕ್ಸ್ (X) ಸಾಮಾಜಿಕ ಜಾಲತಾಣದ ಕೆಲವು ಖಾತೆಗಳ ಪ್ರಕಾರ, ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದಲ್ಲಿ ಪೈರೇಟೆಡ್ ಪ್ರತಿಗಳು ಹರಿದಾಡುತ್ತಿವೆ. ಲಾಹೋರ್ ಮೂಲದ ಪತ್ರಕರ್ತರೊಬ್ಬರು ತಮ್ಮ ಮನೆಯ ಪರದೆಯ ಮೇಲೆ ಸಿನಿಮಾ ವೀಕ್ಷಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಪತ್ರಕರ್ತ ಹಾಗೂ ಚಿತ್ರದ ಸಂಶೋಧನಾ ಸಲಹೆಗಾರ ಆದಿತ್ಯ ರಾಜ್ ಕೌಲ್, “ದುರದೃಷ್ಟವಶಾತ್ ಚಿತ್ರದ ಪೈರೇಟೆಡ್ ಆವೃತ್ತಿ ಇಂದೇ ಪಾಕಿಸ್ತಾನ ತಲುಪಿದೆ. ಪಾಕಿಸ್ತಾನಿ ಭಯೋತ್ಪಾದನೆಯನ್ನು ಮಣಿಸುವ ಕಥೆಯನ್ನೊಳಗೊಂಡ ಈ ಸಿನಿಮಾವನ್ನು ನೋಡದೆ ಪಾಕಿಸ್ತಾನಿಗಳಿಗೆ ಇರಲಾಗುತ್ತಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ನಿರ್ದೇಶಕರ ಮನವಿ ಫಲ ನೀಡಲಿಲ್ಲ
ಸಿನಿಮಾ ಬಿಡುಗಡೆಗೂ ಮುನ್ನ ನಿರ್ದೇಶಕ ಅದಿತ್ಯ ಧರ್ ಅವರು ಪ್ರೇಕ್ಷಕರಲ್ಲಿ ಕಳಕಳಿಯ ಮನವಿ ಮಾಡಿದ್ದರು. “ಇದು ಕೇವಲ ಸಿನಿಮಾ ಅಲ್ಲ, ಇದೊಂದು ಹಂಚಿಕೊಂಡ ಅನುಭವ. ದಯವಿಟ್ಟು ಯಾರೂ ಸ್ಪಾಯ್ಲರ್ ಅಥವಾ ವಿಡಿಯೋ ತುಣುಕುಗಳನ್ನು ಲೀಕ್ ಮಾಡಬೇಡಿ” ಎಂದು ಕೇಳಿಕೊಂಡಿದ್ದರು. ಅಲ್ಲದೆ, ಚಿತ್ರದ ಕೊನೆಯ ಕ್ರೆಡಿಟ್ಸ್ ಮುಗಿಯುವವರೆಗೆ ಯಾರೂ ಸೀಟಿನಿಂದ ಏಳಬೇಡಿ ಎಂದು ಸೂಚಿಸಿದ್ದರು (ಇದು ‘ಧುರಂಧರ 3’ ಚಿತ್ರದ ಮುನ್ಸೂಚನೆ ಎನ್ನಲಾಗುತ್ತಿದೆ). ಆದರೆ, ಅವರ ಮನವಿಯನ್ನು ಗಾಳಿಗೆ ತೂರಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ದೃಶ್ಯಗಳು ವೈರಲ್ ಆಗುತ್ತಿವೆ.

ಚಿತ್ರದ ವಿಮರ್ಶೆ
ಪ್ರಸ್ತುತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಣವೀರ್ ಸಿಂಗ್ ಅವರ ನಟನೆ, ಹಿನ್ನೆಲೆ ಸಂಗೀತ ಮತ್ತು ನಿರ್ದೇಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಒಂದು ವರ್ಗದ ಪ್ರೇಕ್ಷಕರು ಚಿತ್ರದ ರಾಜಕೀಯ ನಿರೂಪಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಣವೀರ್ ಸಿಂಗ್ ಪ್ರಮುಖ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಂತೆ ಈ ಬಾರಿಯೂ ಅವರ ಆ್ಯಕ್ಷನ್ ಮತ್ತು ಲುಕ್ ಸದ್ದು ಮಾಡುತ್ತಿದೆ.ಸಂಜಯ್ ದತ್ (Sanjay Dutt) ಚಿತ್ರದಲ್ಲಿ ಪ್ರಬಲ ಪೋಷಕ ಅಥವಾ ವಿರೋಧಿ ಪಾತ್ರದಲ್ಲಿ ನಟಿಸಿದ್ದಾರೆ.ಆರ್. ಮಾಧವನ್ (R. Madhavan): ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಹೆಚ್ಚಿನ ತೂಕ ತಂದಿದ್ದಾರೆ.ಅರ್ಜುನ್ ರಾಂಪಾಲ್ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಆದಿತ್ಯ ಧರ್ (Aditya Dhar) ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇವರು ಈ ಹಿಂದೆ ‘ಉರಿ: ದ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ನಿರ್ದೇಶಿಸಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular