HomeLive Newsಜೇನುಹುಳ ಕಚ್ಚಿದ್ರೆ ಭಯಬೇಡ, ನೋವು ಮತ್ತು ಬಾವು ಕಡಿಮೆ ಮಾಡಲು ಈ ಮನೆಮದ್ದು ಬಳಸಿ

ಜೇನುಹುಳ ಕಚ್ಚಿದ್ರೆ ಭಯಬೇಡ, ನೋವು ಮತ್ತು ಬಾವು ಕಡಿಮೆ ಮಾಡಲು ಈ ಮನೆಮದ್ದು ಬಳಸಿ

ತೋಟದಲ್ಲಿ ಕೆಲಸ ಮಾಡುವಾಗ ಅಥವಾ ಹೊರಗಡೆ ಓಡಾಡುವಾಗ ನಮಗೆ ಅರಿವಿಲ್ಲದಂತೆ ಜೇನುನೊಣಗಳು ಕಚ್ಚುವುದುಂಟು. ಜೇನುನೊಣ ಕಚ್ಚಿದಾಗ ಉಂಟಾಗುವ ಉರಿ ಮತ್ತು ನೋವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಕೆಲವು ಸಂದರ್ಭಗಳಲ್ಲಿ ಇದು ತೀವ್ರವಾದ ಇನ್ಫೆಕ್ಷನ್‌ಗೆ (ಸೋಂಕು) ಕಾರಣವಾಗಬಹುದು. ಜೇನುನೊಣ ಕಚ್ಚಿದಾಗ ಉಂಟಾಗುವ ಅಲರ್ಜಿಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ತಕ್ಷಣದ ಪರಿಹಾರ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ತಕ್ಷಣ ಮಾಡಬೇಕಾದ ಕೆಲಸಗಳು

1. ಮುಳ್ಳನ್ನು ಹೊರತೆಗೆಯಿರಿ: ಜೇನುನೊಣ ಕಚ್ಚಿದ ತಕ್ಷಣ ಚರ್ಮದಲ್ಲಿ ಸಿಲುಕಿರುವ ಅದರ ಮುಳ್ಳನ್ನು ತೆಗೆಯಬೇಕು. ಇಲ್ಲದಿದ್ದರೆ ಮುಳ್ಳು ಒಡೆದು ವಿಷವು ದೇಹದೊಳಗೆ ಸೇರುವ ಅಪಾಯವಿರುತ್ತದೆ. ಉಗುರು ಅಥವಾ ಯಾವುದಾದರೂ ತೆಳುವಾದ ವಸ್ತುವಿನಿಂದ ಜಾಗರೂಕತೆಯಿಂದ ಮುಳ್ಳನ್ನು ತೆಗೆಯಿರಿ. ಮುಳ್ಳನ್ನು ಜೋರಾಗಿ ಒತ್ತಬೇಡಿ, ಹಾಗೆ ಮಾಡಿದರೆ ವಿಷವು ದೇಹದೊಳಗೆ ಮತ್ತಷ್ಟು ಹರಡಬಹುದು.

2. ಸ್ವಚ್ಛಗೊಳಿಸಿ: ಕಚ್ಚಿದ ಜಾಗವನ್ನು ಆಂಟಿಸೆಪ್ಟಿಕ್ ಸೋಪ್ ಮತ್ತು ತಣ್ಣೀರಿನಿಂದ ತೊಳೆಯಿರಿ. ಇದರಿಂದ ಇನ್ಫೆಕ್ಷನ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ಬಾವು ಬರದಂತೆ ತಡೆಯಲು ಐಸ್ ಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ ಕಚ್ಚಿದ ಜಾಗದ ಮೇಲಿಡಿ. ಇದು ರಕ್ತ ಸಂಚಲನವನ್ನು ನಿಧಾನಗೊಳಿಸಿ ನೋವನ್ನು ಕಡಿಮೆ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3. ಟೂತ್ ಪೇಸ್ಟ್ ಬಳಕೆ: ಜೇನುನೊಣ ಕಚ್ಚಿದ ತಕ್ಷಣ ಸ್ಪಂದಿಸಿ ಸರಿಯಾದ ಕ್ರಮ ಕೈಗೊಂಡರೆ ನೋವನ್ನು ನಿಯಂತ್ರಿಸಬಹುದು. ಸಾಮಾನ್ಯ ಬಿಳಿ ಟೂತ್‌ಪೇಸ್ಟ್ ಅನ್ನು ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ಅದರ ಕ್ಷಾರೀಯ ಪ್ರಭಾವದಿಂದ ಉರಿ ಕಡಿಮೆಯಾಗುತ್ತದೆ.

4. ಅಡುಗೆ ಸೋಡಾ ಮತ್ತು ಜೇನುತುಪ್ಪ: ಸ್ವಲ್ಪ ಅಡುಗೆ ಸೋಡಾವನ್ನು (Baking Soda) ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಕಚ್ಚಿದ ಜಾಗಕ್ಕೆ ಹಚ್ಚಿ. ಇದು ವಿಷದ ಆಮ್ಲೀಯ ಪರಿಣಾಮವನ್ನು ತಟಸ್ಥಗೊಳಿಸುತ್ತದೆ. ಆಶ್ಚರ್ಯವೆಂದರೆ, ಜೇನುನೊಣದ ವಿಷಕ್ಕೆ ಜೇನುತುಪ್ಪವೇ ಮದ್ದು! ಸ್ವಲ್ಪ ಜೇನುತುಪ್ಪ ಸವರುವುದರಿಂದ ಗಾಯ ಬೇಗ ಗುಣವಾಗುತ್ತದೆ ಮತ್ತು ಇದು ಆಂಟಿ-ಬ್ಯಾಕ್ಟೀರಿಯಲ್ ಆಗಿ ಕೆಲಸ ಮಾಡುತ್ತದೆ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಜೇನುನೊಣ ಕಚ್ಚಿದ ನಂತರ ಮೈಯೆಲ್ಲಾ ದದ್ದುಗಳು ಏಳುವುದು, ಗಂಟಲು ಬಾವು, ಉಸಿರಾಟದಲ್ಲಿ ತೊಂದರೆ ಅಥವಾ ನಾಡಿಮಿಡಿತ ವೇಗವಾಗುವುದು ಕಂಡುಬಂದರೆ ಅದು ‘ಅಲರ್ಜಿಕ್ ರಿಯಾಕ್ಷನ್’ ಇರಬಹುದು. ಅಂತಹ ಸಂದರ್ಭದಲ್ಲಿ ವಿಳಂಬ ಮಾಡದೆ ತಕ್ಷಣವೇ ತುರ್ತು ಚಿಕಿತ್ಸೆ ಪಡೆಯಬೇಕು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular