HomeLatest Newsಕಳಪೆ ಸಿನಿಮಾ,  ಥಿಯೇಟರ್‌ನಲ್ಲಿ ನಿದ್ದೆ ಮಾಡಿದೆ : 'ಧುರಂಧರ್ 2'  ಚಿತ್ರದ ಬಗ್ಗೆ ನಟಿ ರಮ್ಯಾ...

ಕಳಪೆ ಸಿನಿಮಾ,  ಥಿಯೇಟರ್‌ನಲ್ಲಿ ನಿದ್ದೆ ಮಾಡಿದೆ : ‘ಧುರಂಧರ್ 2’  ಚಿತ್ರದ ಬಗ್ಗೆ ನಟಿ ರಮ್ಯಾ ಶಾಕಿಂಗ್ ರಿವ್ಯೂ!

ಬಹುನಿರೀಕ್ಷಿತ ‘ಧುರಂಧರ್ 2’ ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಬರೆದಿರುವ ‘ಟೂ-ಪೇಜ್’ ವಿಮರ್ಶೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ‘ಧುರಂಧರ್ 2’ ಸಿನಿಮಾ ಈಗ ಪ್ರೇಕ್ಷಕರ ಪಾಲಿಗೆ ಅಕ್ಷರಶಃ ಸಹನೆಯ ಪರೀಕ್ಷೆಯಾಗಿ ಪರಿಣಮಿಸಿದೆ. ಮೊದಲ ಭಾಗದಲ್ಲಿ ಅದ್ಭುತ ಯಶಸ್ಸು ಕಂಡಿದ್ದ ಈ ಸಿನಿಮಾ, ಎರಡನೇ ಭಾಗದಲ್ಲಿ ಅತಿರೇಕದ ಹಿಂಸೆ, ತರ್ಕಹೀನ ದೃಶ್ಯಗಳು ಮತ್ತು ನೀರಸ ನಿರೂಪಣೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದೆ.

ವಿಶೇಷವಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಈ ಚಿತ್ರದ ಬಗ್ಗೆ ನೀಡಿರುವ ‘ಎರಡು ಪುಟಗಳ’ ಸುದೀರ್ಘ ವಿಮರ್ಶೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. “ಥಿಯೇಟರ್‌ಗೆ ಹೋಗಿ ಹಣ ವ್ಯರ್ಥ ಮಾಡಬೇಡಿ, ಇದು ಕೇವಲ ಒಟಿಟಿಯಲ್ಲಿ ನೋಡುವಂತಹ ಸ್ಕ್ರಾಲಿಂಗ್ ಕಂಟೆಂಟ್” ಎಂದು ರಮ್ಯಾ ನೇರವಾಗಿಯೇ ಕಿಡಿಕಾರಿದ್ದಾರೆ.

“ಇದೊಂದು ಸಿನಿಮಾ ಅಲ್ಲ, ಪ್ರೇಕ್ಷಕರ ಸಹನೆಗೆ ಒಡ್ಡಿದ ಪರೀಕ್ಷೆ” ಎಂದು ಕಿಡಿಕಾರುವ ಮೂಲಕ ಚಿತ್ರದ ಕಳಪೆ ಗುಣಮಟ್ಟವನ್ನು ರಮ್ಯಾ ಅಕ್ಷರಶಃ ಬಯಲು  ಮಾಡಿದ್ದಾರೆ. ರಣವೀರ್ ಸಿಂಗ್ ನಟನೆಗಿಂತ ಅವರ ಕೂದಲೇ ಸಿನಿಮಾದಲ್ಲಿ ಅತಿ ದೊಡ್ಡ ಪಾತ್ರ ವಹಿಸಿದೆ ಎಂದು ವ್ಯಂಗ್ಯವಾಡಿರುವ ಅವರು, ಅತಿಯಾದ ಹಿಂಸೆ ಮತ್ತು ತರ್ಕಹೀನ ದೃಶ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಧುರಂಧರ’ ಭಾಗ-1ರಲ್ಲಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ತಂಡ, ಎರಡನೇ ಭಾಗದಲ್ಲಿ ಪ್ರೇಕ್ಷಕರನ್ನು ಅಕ್ಷರಶಃ ನಿದ್ರೆಗೆ ಜಾರಿಸಿದೆ. ಇದೊಂದು ಅಂತ್ಯವಿಲ್ಲದ ನೀರಸ ಪಠ್ಯಪುಸ್ತಕದಂತಿದ್ದು, ಚಿತ್ರಮಂದಿರದಲ್ಲಿ ಹಣ ವ್ಯರ್ಥ ಮಾಡುವ ಬದಲು ಒಟಿಟಿಯಲ್ಲಿ ನೋಡುತ್ತಾ ಫೋನ್ ಸ್ಕ್ರಾಲ್ ಮಾಡುವುದೇ ಲೇಸು ಎನ್ನುವಂತಿದೆ. ಅತಿಯಾದ ಹಿಂಸೆ, ತರ್ಕಹೀನ ದೃಶ್ಯಗಳು ಮತ್ತು ಕಳಪೆ ನಿರ್ದೇಶನದಿಂದಾಗಿ ಈ ಸಿನಿಮಾ ಒಂದು ದೊಡ್ಡ ನಿರಾಸೆ ಮೂಡಿಸಿದೆ.

ಸಿನಿಮಾ ನೋಡುತ್ತಿದ್ದರೆ ಒಂದು ಹಂತದಲ್ಲಿ ಮಿದುಳು ಕೆಲಸ ಮಾಡುವುದನ್ನೇ ನಿಲ್ಲಿಸುತ್ತದೆ. ಚಿತ್ರಕಥೆ, ಸಂಕಲನ ಮತ್ತು ಹಿನ್ನೆಲೆ ಸಂಗೀತ ಎಲ್ಲವೂ ತೀರಾ ಕಳಪೆಯಾಗಿವೆ. ಮಾರ್ಚ್ 19ರ ಡೆಡ್‌ಲೈನ್‌ಗೆ ಹೇಗೋ ಮುಗಿಸಬೇಕು ಎಂದು ಸಿನಿಮಾ ಮಾಡಿದಂತಿದೆ.

ರಣವೀರ್ ಈ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತಿದ್ದಾರೆ ಎನ್ನುವವರಿಗೆ ಒಂದು ಪ್ರಶ್ನೆ- ಅವರು ಹೊತ್ತಿರುವುದು ಏನನ್ನು? ಇಲ್ಲಿ ಕಾಣುವುದು ಬರೀ ಅವರ ಕೂದಲು ಮಾತ್ರ! ಮೊದಲ ಭಾಗದಲ್ಲಿದ್ದ ಕಳೆ ಇಲ್ಲಿ ಇಲ್ಲ. ರಣವೀರ್ ಅವರ ಕೂದಲಿಗೇ ಈ ಬಾರಿ ‘ಪೋಷಕ ನಟ’ ಪ್ರಶಸ್ತಿ ನೀಡಬಹುದು ಎಂಬಂತಿದೆ.ಇದೊಂದು ಸಿನಿಮಾ ಅಲ್ಲ, ಬದಲಿಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ಎಷ್ಟು ಕ್ರೂರವಾಗಿ ಹಿಂಸೆ ನೀಡಬಹುದು ಎಂಬ ಕೈಪಿಡಿಯಂತಿದೆ. ಚಾಕು, ಕೊಡಲಿ ಮಾತ್ರವಲ್ಲದೆ ಇಂಜೆಕ್ಷನ್ ಸಿರಿಂಜ್‌ವರೆಗೆ ಎಲ್ಲವನ್ನೂ ಶಸ್ತ್ರವನ್ನಾಗಿಸಲಾಗಿದೆ.

ಕಾಲುಗಳು ತುಂಡಾಗಿ, ಮೈಮೇಲೆ ಸೀಮೆಎಣ್ಣೆ ಸುರಿದಿದ್ದರೂ ನಟರು ಟೆಡ್-ಟಾಕ್ (TED Talk) ನೀಡುವಂತೆ ಸುದೀರ್ಘ ಡೈಲಾಗ್ ಹೊಡೆಯುತ್ತಾರೆ! ವೈದ್ಯಕೀಯ ವಿಜ್ಞಾನಕ್ಕೆ ಇಲ್ಲಿ ಬೆಲೆಯೇ ಇಲ್ಲ. ಇದಕ್ಕಾಗಿ ಆಸ್ಕರ್ ಅಲ್ಲ, ನೋಬೆಲ್ ಪ್ರಶಸ್ತಿಯೇ ನೀಡಬೇಕು ಎಂದು ನಟಿ ರಮ್ಯಾ ತಮಾಷೆ ಮಾಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular