HomeLatest NewsBREAKING: ದಾವಣಗೆರೆ ಹೋಟೆಲ್ ಗಳ ಮೇಲೆ ತಹಶೀಲ್ದಾರ್ ದಾಳಿ: 20 ಗೃಹ ಬಳಕೆ ಸಿಲಿಂಡರ್ ಗಳು...

BREAKING: ದಾವಣಗೆರೆ ಹೋಟೆಲ್ ಗಳ ಮೇಲೆ ತಹಶೀಲ್ದಾರ್ ದಾಳಿ: 20 ಗೃಹ ಬಳಕೆ ಸಿಲಿಂಡರ್ ಗಳು ವಶಕ್ಕೆ

ದಾವಣಗೆರೆ: ಹೋಟೆಲ್ ಗಳ ಮೇಲೆ ತಹಶೀಲ್ದಾರ್ ದಾಳಿ ನಡೆಸಿ 20 ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ.

ನಗರದ ಹಲವು ಹೋಟೆಲ್ ಹಾಗೂ ಟೀ ಅಂಗಡಿಗಳಲ್ಲಿ ಕಮಿರ್ಷಿಯಲ್ ಸಿಲಿಂಡರ್ ಗಳ ಬದಲು ಗೃಹ ಬಳಕೆ ಸಿಲಿಂಡರ್ ಗಳನ್ನು ಬಳಸಲಾಗುತ್ತಿತ್ತು. ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಲಿಂ ಉಲ್ಲಾ ಅವರು ರೇಡ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೃಹ ಬಳಕೆ ಸಿಲಿಂದರ್ ಗಳನ್ನು ಹೋಟೆಲ್ ಗಳಲ್ಲಿ ಬಳಸುವಂತಿಲ್ಲ ಎಂಬ ನಿಯಮವಿದ್ದರೂ ಕಮರ್ಷಿಯಲ್ ಸಿಲಿಂಡರ್ ಅಭಾವ ಇದ್ದುದರಿಂದ ಈ ಸಿಲಿಂಡರ್ ಗಳನ್ನು ಬಳಸಲಾಗುತ್ತಿತ್ತು. 20 ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular