ಬೆಂಗಳೂರು: ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ, ನಿಧನ ಹೊಂದಿದ ಬೋಧಕರು, ಬೋಧಕೇತರ ಸಿಬ್ಬಂದಿಯ ಗಳಿಕೆ ರಜೆ ನಗದೀಕರಣ ಸೌಲಭ್ಯಕ್ಕಾಗಿ ಸರ್ಕಾರ 30 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಅನುದಾನವನ್ನು ಜಿಲ್ಲಾವಾರು ಮರು ಹಂಚಿಕೆ ಕೂಡ ಮಾಡಲಾಗಿದ್ದು, 2022 -23ರಿಂದ 2025 -26 ನೇ ಸಾಲಿನಲ್ಲಿ ನಿವೃತ್ತಿ,, ನಿಧನ ಹೊಂದಿದ ಸಿಬ್ಬಂದಿ ಗಳಿಕೆ ರಜೆ ನಗದೀಕರಿಸಿ ಅವರಿಗೆ ಸೂಕ್ತ ಮೊತ್ತವನ್ನು ಸಿಬ್ಬಂದಿ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ.
2025-26ನೇ ಸಾಲಿಗೆ ಆದ್ಯತೆ ನೀಡಿ ನಂತರ 2022- 23 ಮತ್ತು 2023 -24ನೇ ಸಾಲಿನವರ ಗಳಿಕೆ ರಜೆ ನಗರೀಕರಣದ ಮೊತ್ತ ಜಮೆ ಮಾಡಲು ತಿಳಿಸಲಾಗಿದೆ.

