ಚೆನ್ನೈ: ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬದಲಿಗೆ ಇಂಡಕ್ಷನ್ ಸ್ಟವ್ ಗೆ ಬದಲಾಗುವ ಹೋಟೆಲ್, ರೆಸ್ಟೋರೆಂಟ್, ಚಹಾ ಅಂಗಡಿಗಳು, ಆಹಾರ ಪೂರೈಕೆದಾರರು, ಆಹಾರ ಘಟಕಗಳಿಗೆ ತಮಿಳುನಾಡು ಸರ್ಕಾರ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿ ಘೋಷಿಸಿದೆ.
ಇಂಡಕ್ಷನ್ ಸ್ಟವ್ ಬಳಕೆಗೆ ತಗಲುವ ಹೆಚ್ಚುವರಿ ವಿದ್ಯುತ್ ನ ಪ್ರತಿ ಯೂನಿಟ್ ಗೆ ಎರಡು ರೂಪಾಯಿ ರಿಯಾಯಿತಿ ನೀಡಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ. ವಾಣಿಜ್ಯ ಸಿಲಿಂಡರ್ ಬಳಕೆಯ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ನಿರ್ಬಂಧ ತೆರವಾಗುವವರೆಗೆ ವಿದ್ಯುತ್ ಬಿಲ್ ನಲ್ಲಿ ನೀಡಲಾಗುವುದು ಎಂದು ಹೇಳಲಾಗಿದೆ.

