ನವದೆಹಲಿ: ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರ ಏಪ್ರಿಲ್ 1ರಿಂದ 75 ರೂ. ಹೆಚ್ಚಳವಾಗಲಿದೆ. ಖಾಸಗಿ ವಾಹನಗಳಿಗೆ ನೀಡುವ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಏಪ್ರಿಲ್ 1ರಿಂದ ಶೇ. 2.5ರಷ್ಟು ಅಂದರೆ 75 ರೂ. ನಷ್ಟು ಹೆಚ್ಚಳ ಮಾಡಲಾಗುವುದು.
ಸದ್ಯ 3 ಸಾವಿರ ರೂಪಾಯಿ ವಾರ್ಷಿಕ ಪಾಸ್ ದರ ಇದ್ದು, ಮುಂದಿನ ತಿಂಗಳಿನಿಂದ 3075 ರೂ. ಆಗಲಿದೆ. ಶೇ. 2.5 ರಷ್ಟು ದರ ಹೆಚ್ಚಾಗಲಿದೆ. ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ವಾರ್ಷಿಕ ಪಾಸ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಫಾಸ್ಟ್ಯಾಗ್ ವಾರ್ಷಿಕ ಪಾಸ್ ಖರೀದಿಸುವ ಖಾಸಗಿ ಕಾರು ಮಾಲೀಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯ ಟೋಲ್ ಪ್ಲಾಜಾಗಳಲ್ಲಿ ವರ್ಷಕ್ಕೆ 200 ಟ್ರಿಪ್ ಕೈಗೊಳ್ಳಬಹುದು. ಈ ವಾರ್ಷಿಕ ಪಾಸ್ ಅನ್ನು ವರ್ಷದಲ್ಲಿ ಎಷ್ಟು ಬಾರಿಯಾದರೂ ರೀಚಾರ್ಜ್ ಮಾಡಬಹುದಾಗಿದೆ.

