HomeLatest NewsSHOCKING : ಮೃತಪಟ್ಟ ಮಾಲೀಕಿಯ ಶವವನ್ನೇ ಕಚ್ಚಿ ತಿಂದ ಸಾಕು ಬೆಕ್ಕುಗಳು ; ಮಗ ಬಂದು...

SHOCKING : ಮೃತಪಟ್ಟ ಮಾಲೀಕಿಯ ಶವವನ್ನೇ ಕಚ್ಚಿ ತಿಂದ ಸಾಕು ಬೆಕ್ಕುಗಳು ; ಮಗ ಬಂದು ನೋಡಿದಾಗ ಶಾಕ್ !

ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ತಾನು ಪ್ರೀತಿಯಿಂದ ಸಾಕಿದ್ದ ಬೆಕ್ಕುಗಳೇ ವೃದ್ಧೆಯೊಬ್ಬರ ಶವವನ್ನು ತಿಂದಿರುವ ಭೀಕರ ದೃಶ್ಯ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಮಂಚಿರ್ಯಾಲ ಜಿಲ್ಲೆಯ ಮಂದಮರ್ರಿಯ ಭಗತ್ ಸಿಂಗ್ ನಗರದ ನಿವಾಸಿ ಜಕ್ಕನಬೋಯಿನ ಲಕ್ಷ್ಮಿ (80) ಕಳೆದ 16 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಪತಿ ರಾಜೀರು ಮೃತಪಟ್ಟ ನಂತರ, ಲಕ್ಷ್ಮಿ ಅವರಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದರೂ, ಎಲ್ಲರಿಗೂ ಮದುವೆಯಾಗಿ ಬೇರೆ ಬೇರೆ ಕಡೆ ವಾಸವಾಗಿದ್ದರು. ಲಕ್ಷ್ಮಿ ಅವರು ತಮ್ಮ ಸ್ವಂತ ಮನೆಯಲ್ಲಿ ಒಂಟಿಯಾಗಿಯೇ ಕಾಲ ಕಳೆಯುತ್ತಿದ್ದರು.

ಪತ್ತೆಯಾದದ್ದು ಹೇಗೆ?: ಲಕ್ಷ್ಮಿ ಅವರ ಎರಡನೇ ಮಗ ಸಮುಂದರ್ ವಾರಕ್ಕೆ ಎರಡು ಬಾರಿ ಬಂದು ತಾಯಿಯ ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಅವರು ಬಂದಿರಲಿಲ್ಲ. ಗುರುವಾರ ಮನೆಯ ಮುಂಭಾಗದ ಗಡಪಿನ ಬಳಿ ವೃದ್ಧೆ ಲಕ್ಷ್ಮಿ ಕುಸಿದು ಬಿದ್ದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಈ ವಿಷಯ ಯಾರಿಗೂ ತಿಳಿದಿಲ್ಲ. ರಾತ್ರಿ ವೇಳೆ ಮನೆಯಲ್ಲಿ ಲೈಟ್ ಹಾಕದಿದ್ದುದನ್ನು ಗಮನಿಸಿದ ನೆರೆಹೊರೆಯವರು ವಿಚಾರಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಕ್ಕುಗಳ ಕೃತ್ಯ: ಸ್ಥಳೀಯರು ಹೋಗಿ ನೋಡಿದಾಗ ಲಕ್ಷ್ಮಿ ಅವರು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ಅವರ ಕೈಗಳನ್ನು ಯಾರೋ ಬರ್ಬರವಾಗಿ ಕಚ್ಚಿ ತಿಂದಿರುವುದು ಕಂಡುಬಂದಿದೆ. ತಕ್ಷಣ ಮಗ ಸಮುಂದರ್ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ರಾತ್ರಿ 11 ಗಂಟೆಗೆ ಮಗ ಬಂದು ನೋಡಿದಾಗ ಮನೆಯಲ್ಲಿದ್ದ ಎರಡು ಸಾಕು ಬೆಕ್ಕುಗಳು ಲಕ್ಷ್ಮಿ ಅವರ ಕೈಯ ಚರ್ಮ ಮತ್ತು ಮಾಂಸವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಹಸಿವಿನಿಂದಿದ್ದ ಸಾಕು ಬೆಕ್ಕುಗಳೇ ಈ ಕೃತ್ಯ ಎಸಗಿರುವುದು ಪ್ರಾಥಮಿಕವಾಗಿ ದೃಢಪಟ್ಟಿದೆ.

ಪೊಲೀಸ್ ದೂರು: ವೃದ್ಧೆ ಲಕ್ಷ್ಮಿ ಅವರು ವಯೋಸಹಜವಾಗಿ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೃತರ ಹಿರಿಯ ಮಗ ಶ್ರೀನಿವಾಸ್ ಅವರು ಪೊಲೀಸರಿಗೆ ದೂರು ನೀಡಿದ್ದು, “ತಾಯಿಯ ಸಾವಿನ ಬಗ್ಗೆ ನಮಗೆ ಯಾರ ಮೇಲೂ ಸಂಶಯವಿಲ್ಲ, ಅವರು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular