HomeLatest NewsBIG NEWS : ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಬೆಂಗಳೂರಲ್ಲಿ ತಿಂಡಿ-ತಿನಿಸುಗಳ ಬೆಲೆ 10...

BIG NEWS : ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಬೆಂಗಳೂರಲ್ಲಿ ತಿಂಡಿ-ತಿನಿಸುಗಳ ಬೆಲೆ 10 ರೂ.ಹೆಚ್ಚಳ.!

ಬೆಂಗಳೂರು: ಹೋಟೆಲ್ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇರಾನ್-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ಅಭಾವ ಮತ್ತು ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ದರವನ್ನು ಐದರಿಂದ ಹತ್ತು ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದೆ.

ಇನ್ನು ಮುಂದೆ ಹೋಟೆಲ್‌ಗಳಲ್ಲಿ ನಿಮ್ಮ ಫೇವರೆಟ್ ತಿಂಡಿ ತಿನ್ನುವ ಮುನ್ನ ಜೇಬಿಗೆ ಸ್ವಲ್ಪ ಹೆಚ್ಚು ಹೊರೆ ಬೀಳಲಿದೆ. ಗ್ಯಾಸ್ ಸಿಲಿಂಡರ್ ಅಭಾವದಿಂದ ಕಂಗಾಲಾಗಿರುವ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ದರ ಏರಿಕೆಯ ಹಾದಿ ಹಿಡಿದಿದ್ದಾರೆ. ಬೆಂಗಳೂರಲ್ಲಿ ಇಡ್ಲಿ, ದೋಸೆ, ಕಾಫಿ-ಟೀ ಸೇರಿದಂತೆ ದಿನನಿತ್ಯದ ತಿಂಡಿಗಳ ಮೇಲೆ 10 ರೂ. ವರೆಗೆ ದರ ಹೆಚ್ಚಳವಾಗಿದೆ.ಇದರ ಜೊತೆ ಕೆಲವು ಹೋಟೆಲ್ ಗಳಲ್ಲಿ ಬಿಲ್ ನಲ್ಲಿ  ಗ್ಯಾಸ್ ದರ 30 ರೂ. ವಿಧಿಸುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿದೆ. ತೈಲ ಕಂಪನಿಗಳು ನೀಡುತ್ತಿದ್ದ ರಿಯಾಯಿತಿಯನ್ನು ಕಡಿತಗೊಳಿಸಿವೆ. ಖಾದ್ಯ ತೈಲ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ದರ ಏರಿಕೆಯು ಸದ್ಯಕ್ಕೆ ತಾತ್ಕಾಲಿಕವಾಗಿದ್ದು, ಗ್ಯಾಸ್ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಮುಂದುವರಿಯಲಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ ವ್ಯತ್ಯಾಸದ ಪಟ್ಟಿ (ಅಂದಾಜು):

  • ಇಡ್ಲಿ: 30 ರೂ. ನಿಂದ 40 ರೂ. ಗೆ ಏರಿಕೆ.
  • ವಡೆ: 30 ರೂ. ನಿಂದ 40 ರೂ. ಗೆ ಏರಿಕೆ.
  • ಮಸಾಲಾ ದೋಸೆ/ಸೆಟ್ ದೋಸೆ: 60 ರೂ. ನಿಂದ 70 ರೂ. ಗೆ ಏರಿಕೆ.
  • ಪಲಾವ್/ಖಾರಾಬಾತ್: 10 ರೂ. ಹೆಚ್ಚಳ.
  • ಊಟ/ರೋಟಿ ಕರಿ: 90 ರೂ. ನಿಂದ 100 ರೂ. ಗೆ ಏರಿಕೆ.
  • ಪೂರಿ ಸಾಗು : 60 ರಿಂದ 70 ರೂಗೆ ಹೆಚ್ಚಳ
  • ಊಟ 90-100

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular