ಬೆಂಗಳೂರು: ಕರ್ನಾಟಕ ಸರ್ಕಾರವು ತನ್ನ ಎಲ್ಲಾ ಅಧಿಕಾರಿಗಳು ಮತ್ತು ನೌಕರರ ಸೇವಾ ವಿವರಗಳನ್ನು ಕಡ್ಡಾಯವಾಗಿ Electronic Service Register (ESR) ನಲ್ಲಿ ದಾಖಲಿಸಲು ಮತ್ತು ಪಿಂಚಣಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಲು ಆದೇಶ ಹೊರಡಿಸಿದೆ.
ಈ ಪ್ರಕ್ರಿಯೆಯನ್ನು ಮಾರ್ಚ್ 2026 ರ ಒಳಗೆ ಪೂರ್ಣಗೊಳಿಸಲು ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ.ಏಪ್ರಿಲ್ 1, 2021ರ ನಂತರ ನೇಮಕಗೊಂಡ ನೌಕರರ ಸೇವಾ ಹಿರಿಯತೆಯನ್ನು ESR ಮೂಲಕವೇ ನಿರ್ವಹಿಸಬೇಕು. ಮುಂಬರುವ ಒಂದು ವರ್ಷದೊಳಗೆ ನಿವೃತ್ತಿಯಾಗಲಿರುವ ನೌಕರರ ವಿವರಗಳನ್ನು ತಕ್ಷಣವೇ ಅಪ್‌ಡೇಟ್ ಮಾಡುವುದು ಕಡ್ಡಾಯ.
ಕಾಗದ ರಹಿತ ಪಿಂಚಣಿ : ಏಪ್ರಿಲ್ 1, 2026 ರಿಂದ ಯಾವುದೇ ಭೌತಿಕ (Paper) ಪಿಂಚಣಿ ಅರ್ಜಿಗಳನ್ನು ಮಹಾಲೇಖಪಾಲರ (AG) ಕಚೇರಿ ಸ್ವೀಕರಿಸುವುದಿಲ್ಲ. ಕೇವಲ HRMS-2.0 ತಂತ್ರಾಂಶದ ಮೂಲಕ ಸಿದ್ಧಪಡಿಸಿದ ESR ಮತ್ತು ಆನ್‌ಲೈನ್ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
ತಿದ್ದುಪಡಿಗೆ ಕೊನೆಯ ಅವಕಾಶ: HRMS-1 ರಿಂದ HRMS-2 ಕ್ಕೆ ಡೇಟಾ ವರ್ಗಾವಣೆಯಾದ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಈಗಲೇ ಸೇವಾ ವಿವರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ.
DDOಗಳ ಜವಾಬ್ದಾರಿ: ಇಲಾಖಾ ಮುಖ್ಯಸ್ಥರು ಮತ್ತು DDOಗಳು ನಿವೃತ್ತಿ ಹೊಂದಲಿರುವ ನೌಕರರ Form-7 ಮತ್ತು ಇತರ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಇದರಲ್ಲಿ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು.
ಮುಂದಿನ ಒಂದು ವರ್ಷದೊಳಗೆ ನಿವೃತ್ತಿಯಾಗಲಿರುವ ಎಲ್ಲಾ ನೌಕರರ ESR ವಿವರಗಳನ್ನು ಕಡ್ಡಾಯವಾಗಿ ನವೀಕರಿಸಬೇಕು ಭವಿಷ್ಯದಲ್ಲಿ HRMS-1 ಸ್ಥಗಿತಗೊಳ್ಳುವುದರಿಂದ, ಎಲ್ಲಾ ಮಾಹಿತಿಗಳನ್ನು HRMS-2 ಕ್ಕೆ ವರ್ಗಾಯಿಸುವುದು ಅತ್ಯಗತ್ಯ.: ಹಳೆಯ ವಿವರಗಳನ್ನು ವರ್ಗಾಯಿಸುವ ಮುನ್ನವೇ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು. ಯಾವುದೇ ತಾಂತ್ರಿಕ ತೊಂದರೆಗಳಿದ್ದಲ್ಲಿ HRMS ತಂಡವನ್ನು ಸಂಪರ್ಕಿಸಿ ಮಾರ್ಚ್ 2026ರೊಳಗೆ ಕೆಲಸ ಮುಗಿಸಲು ಸೂಚಿಸಲಾಗಿದೆ.





