HomeLatest News'ಸಚಿವರು ಶಾಸಕರಿಗೆ ಸಿಗಲ್ಲ, ಶಾಸಕರು ಜನರಿಗೆ ಸಿಗಲ್ಲ' : ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ...

‘ಸಚಿವರು ಶಾಸಕರಿಗೆ ಸಿಗಲ್ಲ, ಶಾಸಕರು ಜನರಿಗೆ ಸಿಗಲ್ಲ’ : ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ !

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಜೆಡಿಎಸ್ (JDS) ತೀವ್ರವಾಗಿ ಲೇವಡಿ ಮಾಡಿದೆ. “ಈ ಭ್ರಷ್ಟ ಸರ್ಕಾರದಲ್ಲಿ ಸಚಿವರು ಶಾಸಕರಿಗೆ ಸಿಗುತ್ತಿಲ್ಲ, ಶಾಸಕರು ಜನರಿಗೆ ಸಿಗುತ್ತಿಲ್ಲ” ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಮೇಲಿನ ಹಿಡಿತವನ್ನು ಪ್ರಶ್ನಿಸಿದೆ.

ಜೆಡಿಎಸ್ ಮಾಡಿರುವ ಪ್ರಮುಖ ಆರೋಪಗಳು

ಸ್ವಪಕ್ಷೀಯರ ಮೇಲೆ ಹಿಡಿತವಿಲ್ಲ: ಸಿದ್ದರಾಮಯ್ಯ ಅವರಿಗೆ ಸ್ವಂತ ಪಕ್ಷದ ಶಾಸಕರನ್ನೇ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸ್ವಪಕ್ಷದ ಶಾಸಕರೇ ಮಂತ್ರಿಗಳ ವಿರುದ್ಧ ದೂರು ನೀಡುತ್ತಿರುವುದು ಸಿಎಂ ಅವರ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಜೆಡಿಎಸ್ ಹೇಳಿದೆಜನಹಿತಕ್ಕಿಂತ ಮುಖ್ಯಮಂತ್ರಿಯವರಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಬಣ ರಾಜಕೀಯ ಮತ್ತು ಆಂತರಿಕ ಕಲಹದಲ್ಲಿ ಸರ್ಕಾರ ಮುಳುಗಿದೆ ಎಂದು ಲೇವಡಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಸರ್ಕಾರವು ಕೇವಲ ಕಮಿಷನ್, ವರ್ಗಾವಣೆ ದಂಧೆ ಮತ್ತು ಬಣ ರಾಜಕೀಯದಲ್ಲಿ ನಿರತವಾಗಿದೆ. ಇದರಿಂದಾಗಿ ರಾಜ್ಯದ ಆರ್ಥಿಕ ಮತ್ತು ಆಡಳಿತಾತ್ಮಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ.ಇತ್ತೀಚೆಗೆ ಪ್ರತಿಪಕ್ಷ ನಾಯಕರು ಸರ್ಕಾರವು ಸ್ವಪಕ್ಷದ ಶಾಸಕರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಮತ್ತು ಫೋನ್ ಟ್ಯಾಪಿಂಗ್ ಮಾಡುತ್ತಿದೆ ಎಂದು ಆರೋಪಿಸಿದ್ದು, ಇದು ಸರ್ಕಾರದೊಳಗಿನ ಭಿನ್ನಮತವನ್ನು ಮತ್ತಷ್ಟು ಸ್ಫೋಟಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular