HomeLatest NewsWAR BREAKING: ಭಾರತಕ್ಕೆ ಅತಿ ದೊಡ್ದ ರಾಜತಾಂತ್ರಿಕ ಗೆಲುವು: ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಹಡಗುಗಳ...

WAR BREAKING: ಭಾರತಕ್ಕೆ ಅತಿ ದೊಡ್ದ ರಾಜತಾಂತ್ರಿಕ ಗೆಲುವು: ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಹಡಗುಗಳ ಓಡಾಟಕ್ಕೆ ಇರಾನ್ ಗ್ರೀನ್ ಸಿಗ್ನಲ್

ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದ ಸಂದಿಗ್ಧ ಸ್ಥಿತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅತಿದೊಡ್ದ ರಾಜತಾಂತ್ರಿಕ ಗೆಲುವಾಗಿದೆ. ಒಂದೆಡೆ ಯುದ್ಧ, ಮತ್ತೊಂದೆಡೆ ತೈಲ ಟ್ಯಾಂಕರ್ ಗಳ ಸಾಗಾಟಕ್ಕೆ ತಡೆ ಬೆನ್ನಲ್ಲೇ ಭಾರತಕ್ಕೆ ಅತಿದೊಡ್ದ ಗೆಲುವಾಗಿದೆ.

ಭಾರತದ ಹಡಗುಗಳ ಸಾಗಾಟಕ್ಕೆ ಇರಾನ್ ಅನುಮತಿ ನೀಡಿದೆ. ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಹಡಗಿಗಳು ಸಂಚರಿಸಲು ಇರಾನ್ ಗ್ರೀನ್ ಸಿಗ್ನಲ್ ನೀಡಿದೆ. ಯುದ್ಧದ ಸಂದರ್ಭದಲ್ಲಿ ಇದು ಭಾರತಕ್ಕೆ ಅತಿ ದೊಡ್ದ ರಾಜತಾಂತ್ರಿಕ ಗೆಲುವಾಗಿದೆ.

ಭಾರತದ ಭಾವುಟವಿರುವ ಟ್ಯಾಂಕರ್ ಗಳನ್ನು ಹೊರ್ಮುಜ್ ಜಲಸಂಧಿಯಲ್ಲಿ ಸಾಗಲು ಅವಕಾಶ ನೀಡುವಂತೆ ಇರಾನ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಎರಡು ಹಡಗುಗಳು ಸಾಗಿ ಬಂದಿವೆ. ಪುಷ್ಪಕ್ ಹಾಗೂ ಪರಿಮಳ ಎಂಬ ಎರಡು ತೈಲ ಟ್ಯಾಂಕರ್ ಗಳ ನೌಕೆಗಳು ಆಗಮಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊನ್ನೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಇರಾನ್ ಜೊತೆ ಮಾತುಕತೆ ನಡೆಸಿದ್ದರು. ಭಾರತದ ಹಡಗುಗಳಿಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದರು. ಇರಾನ್ ವಿದೇಶಾಂಗ ಸಚಿವರ ಜೊತೆ ಭಾರತದ ವಿದೇಶಾಂಗ ಸಚಿವರು ನಡೆಸಿದ್ದ ಮಾತುಕತೆ ಫಲಪ್ರದವಾಗಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ತೈಲ ಹಡಗುಗಳ ಓಡಾಟಕ್ಕೆ ಇರಾನ್ ಅವಕಾಶ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular