ಬೆಂಗಳೂರು: ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿರುವುದರಿಂದ ನಗರದ ಕೇಂದ್ರ ಭಾಗದಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಉಪ್ಪಾರಪೇಟೆ ಸಂಚಾರ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ರಸ್ತೆಗಳಲ್ಲಿ ಬದಲಾವಣೆ ಮಾಡಿದ್ದಾರೆ.
ವಿಶೇಷವಾಗಿ ಮೈಸೂರು ಬ್ಯಾಂಕ್ ಜಂಕ್ಷನ್, ಶೇಷಾದ್ರಿ ರಸ್ತೆ ಮತ್ತು ಆನಂದ್ ರಾವ್ ವೃತ್ತದ ಸುತ್ತಮುತ್ತ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಫ್ರೀಡಂಪಾರ್ಕ್‌ನಲ್ಲಿಇಂದು (ಮಾರ್ಚ್12, 2026) ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಸಂದರ್ಭದಲ್ಲಿ ಶೇಷಾದ್ರಿ ರಸ್ತೆಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತ್ತು ವಾಹನಗಳು ಆಗಮಿಸುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ತಾತ್ಕಾಲಿಕ ಸಂಚಾರ ನಿರ್ಬಂಧಿತ ಪ್ರದೇಶಗಳು
- ಶಾಂತಲಾ ಜಂಕ್ಷನ್ ಮತ್ತು ಖೋಡೆ ಸರ್ಕಲ್‌ನಿಂದ ಆನಂದ್ ರಾವ್ ಫ್ಲೈ ಓವರ್‌ವರೆಗೆ.
- ಓಲ್ಡ್ ಜೆ.ಡಿ.ಎಸ್. ಕ್ರಾಸ್, ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್‌ವರೆಗೆ.
ಪರ್ಯಾಯ ಮಾರ್ಗಗಳು
- ಶಾಂತಲಾ ಜಂಕ್ಷನ್ ಕಡೆಯಿಂದ ಬರುವವರು: ಲುಲು ಮಾಲ್, ಕೆ.ಎಫ್.ಎಂ, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್, ರೇಸ್ ಕೋರ್ಸ್ ರಸ್ತೆ ಮೂಲಕ ಚಲಿಸಬಹುದು.
- ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆವರೆಗೆ: ಕೆ.ಜಿ. ರಸ್ತೆ, ಸಾಗರ್ ಜಂಕ್ಷನ್, ಎಲೈಟ್, ಟಿ.ಬಿ. ರಸ್ತೆ, ರಾಜೀವ್ ಗಾಂಧಿ ಸರ್ಕಲ್, ಸ್ವಸ್ತಿಕ್, ನೆಹರು ಸರ್ಕಲ್ ಮೂಲಕ ಸಾಗುವುದು.
- ಚಾಲುಕ್ಯ ಸರ್ಕಲ್‌ನಿಂದ ಮೈಸೂರು ಬ್ಯಾಂಕ್ ಕಡೆವರೆಗೆ: ಎಲ್.ಆರ್.ಡಿ, ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ಮೂಲಕ ತೆರಳುವುದು.
- ಕಾಳಿದಾಸ ರಸ್ತೆಕಡೆಯಿಂದ: ಕನಕದಾಸ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸಾಗರ್ ಜಂಕ್ಷನ್ ಕಡೆಗೆ ತೆರಳುವುದು.
- ಮೌರ್ಯ/ಸುಬ್ಬಣ್ಣ ಜಂಕ್ಷನ್ ಕಡೆಯಿಂದ: ಸುಬ್ಬಣ್ಣ ಜಂಕ್ಷನ್‌ನಿಂದ ಬಲ ತಿರುವು ಪಡೆದು ಆನಂದ್ ರಾವ್ ಸರ್ಕಲ್ ಕಡೆಗೆ ತೆರಳುವುದು.

