HomeLatest Newsದೇಶಾದ್ಯಂತ LPG ಅಭಾವ : ರೈಲುಗಳಲ್ಲಿ ಊಟದ ಸೇವೆ ಸ್ಥಗಿತ, ಪರ್ಯಾಯ ವ್ಯವಸ್ಥೆಗೆ IRCTC ಸೂಚನೆ.!

ದೇಶಾದ್ಯಂತ LPG ಅಭಾವ : ರೈಲುಗಳಲ್ಲಿ ಊಟದ ಸೇವೆ ಸ್ಥಗಿತ, ಪರ್ಯಾಯ ವ್ಯವಸ್ಥೆಗೆ IRCTC ಸೂಚನೆ.!

ದೇಶಾದ್ಯಂತ ಉಂಟಾಗಿರುವ ಅಡುಗೆ ಅನಿಲದ (LPG) ತೀವ್ರ ಅಭಾವವು ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಸೇವೆಗಳ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಬೇಯಿಸಿದ ಆಹಾರ ನೀಡುವ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ರೈಲ್ವೆ ಇಲಾಖೆ ಆಲೋಚಿಸುತ್ತಿದೆ. ಟಿಕೆಟ್ ಜೊತೆಗೆ ಊಟ ಬುಕ್ ಮಾಡಿದ ಪ್ರಯಾಣಿಕರಿಗೆ ಹಣ ಮರುಪಾವತಿ (Refund) ಮಾಡುವ ಸಾಧ್ಯತೆಯೂ ಇದೆ.

ಹೌದು. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರ್ಮೋಡ ಹಾಗೂ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಏರುಪೇರಿನಿಂದಾಗಿ ದೇಶಾದ್ಯಂತ ಎಲ್ಪಿಜಿ (LPG) ಅಭಾವ ತಲೆದೋರಿದೆ. ಇದರ ನೇರ ಪರಿಣಾಮ ಈಗ ಭಾರತೀಯ ರೈಲ್ವೆ ಮೇಲೂ ಬೀರಿದ್ದು, ರೈಲುಗಳಲ್ಲಿ ನೀಡಲಾಗುವ ಬಿಸಿ ಊಟದ ಸೇವೆಯನ್ನು ಸ್ಥಗಿತಗೊಳಿಸಲು ಐಆರ್ಸಿಟಿಸಿ (IRCTC) ಗಂಭೀರ ಚಿಂತನೆ ನಡೆಸಿದೆ. ಗ್ಯಾಸ್ ಸಿಲಿಂಡರ್ಗಳ ಕೊರತೆಯಿಂದಾಗಿ ಅಡುಗೆ ತಯಾರಿಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ, ಪ್ರಯಾಣಿಕರಿಗೆ ತೊಂದರೆಯಾಗದಂತೆ ‘ರೆಡಿ-ಟು-ಈಟ್’ (Ready-to-Eat) ಆಹಾರ ಹಾಗೂ ಪರ್ಯಾಯ ಇಂಧನ ಮೂಲಗಳನ್ನು ಬಳಸುವಂತೆ ರೈಲ್ವೆ ಕ್ಯಾಟರಿಂಗ್ ಘಟಕಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ರೈಲುಗಳಿಗೆ ಆಹಾರ ತಯಾರಿಸಿ ಕಳುಹಿಸುವ ‘ಬೇಸ್ ಕಿಚನ್’ಗಳಲ್ಲಿ ಗ್ಯಾಸ್ ಕೊರತೆಯಿಂದಾಗಿ ಅಡುಗೆ ಮಾಡಲು ಸಮಸ್ಯೆಯಾಗುತ್ತಿದೆ. ಪ್ಯಾಂಟ್ರಿ ಕಾರ್ಗಳಲ್ಲಿ ಕೇವಲ ಆಹಾರ ಬಿಸಿ ಮಾಡುವ ವ್ಯವಸ್ಥೆ ಇರುವುದರಿಂದ, ಮುಖ್ಯ ಅಡುಗೆ ಕೇಂದ್ರಗಳಲ್ಲೇ ವ್ಯತ್ಯಯ ಉಂಟಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರ್ಯಾಯ ವ್ಯವಸ್ಥೆಗೆ ಸೂಚನೆ: ರೈಲ್ವೆ ನಿಲ್ದಾಣಗಳಲ್ಲಿರುವ ಫುಡ್ ಪ್ಲಾಜಾಗಳು, ಜನ ಆಹಾರ ಕೇಂದ್ರಗಳು ಮತ್ತು ರಿಫ್ರೆಶ್ಮೆಂಟ್ ರೂಮ್ಗಳಿಗೆ ಎಲ್ಪಿಜಿ ಬದಲಿಗೆ ವಿದ್ಯುತ್ ಅಥವಾ ಇತರ ಪರ್ಯಾಯ ಇಂಧನ ಬಳಸಲು ಐಆರ್ಸಿಟಿಸಿ ಸೂಚಿಸಿದೆ.
ಸಿದ್ಧ ಆಹಾರಕ್ಕೆ (Ready to Eat) ಆದ್ಯತೆ: ಪ್ರಯಾಣಿಕರ ಬೇಡಿಕೆ ಪೂರೈಸಲು ಹೆಚ್ಚಿನ ಪ್ರಮಾಣದ ‘ರೆಡಿ ಟು ಈಟ್’ (ತಕ್ಷಣ ಸೇವಿಸಬಹುದಾದ) ಆಹಾರದ ದಾಸ್ತಾನು ಇಟ್ಟುಕೊಳ್ಳುವಂತೆ ತಿಳಿಸಲಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಎಫೆಕ್ಟ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಅಸ್ಥಿರತೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿಲ ಪೂರೈಕೆ ಕುಂಠಿತಗೊಂಡಿದೆ. ಇದು ಭಾರತದ ಮೇಲೂ ನೇರ ಪರಿಣಾಮ ಬೀರಿದೆ.

ಸರ್ಕಾರದ ಕ್ರಮ: ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಆದ್ಯತೆಗಳನ್ನು ಬದಲಿಸಿದೆ. ಸದ್ಯಕ್ಕೆ ಮನೆಬಳಕೆಯ ಪೈಪ್ಲೈನ್ ಗ್ಯಾಸ್ (PNG) ಮತ್ತು ವಾಹನಗಳ ಸಿಎನ್ಜಿ (CNG) ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಐಆರ್ಸಿಟಿಸಿ ಪ್ರತಿದಿನ ಸುಮಾರು 17 ಲಕ್ಷ ಊಟದ ವ್ಯವಸ್ಥೆಯನ್ನು ಮಾಡುತ್ತದೆ. ಈ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ವಲಯದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular