HomeLatest Newsಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನಾಭರಣಗಳ ಮೌಲ್ಯವೆಷ್ಟು? ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದೇನು?

ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನಾಭರಣಗಳ ಮೌಲ್ಯವೆಷ್ಟು? ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದೇನು?

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನಾಭರಣಗಳ ಮೌಲ್ಯ ಹಾಗೂ ಅವುಗಳು ಎಷ್ಟು ಕಾಲದ ಹಳೆಯ ಒಡವೆಗಳು ಎಂಬ ಬಗ್ಗೆ ಪುರಾತತ್ವ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ.

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನಾಭರಣಗಳು 500-600 ವರ್ಷಗಳ ಹಳೆಯ ಚಿನ್ನದ ನಿಧಿ. ಇದು ಚಾಲುಕ್ಯ-ವಿಜಯನಗರ ಕಾಲದ ಅಪೂರ್ವ ದಾಖಲೆಯಾಗಿವೆ. ಇವು ಸಾಮಾನ್ಯ ಆಭರಣವಲ್ಲ, ದೇವತೆಗಳಿಗೆ ಅರ್ಪಿಸಲಾಗಿದ್ದ 465 ಗ್ರಾಂ ಚಿನ್ನ, ರತ್ನಖಚಿತ ಒಡವೆಗಳಾಗಿವೆ. ಇದರ ಆ್ಯಂಟಿಕ್’ ಮೌಲ್ಯ ಸುಮಾರು 8 ಕೋಟಿ ರೂಪಾಯಿ ಎಂದು ಪುರಾತತ್ವ ಶಾಸ್ತ್ರಜ್ಞರು ದೃಢಪಡಿಸಿದ್ದಾರೆ.

ಈ ಚಿನ್ನಾಭರಣಗಳು ಲಕ್ಕುಂಡಿಯ ಗತವೈಭವಕ್ಕೆ ಹೊಸ ಸಾಕ್ಷ್ಯಗಳಾಗಿವೆ. ಲಕ್ಕುಂಡಿಯಲ್ಲಿ ಈ ವರ್ಷದ ಜನವರಿ 10ರಂದು ಪತ್ತೆಯಾಗಿದ್ದ ಚಿನ್ನದ ನಿಧಿಯ ಕುರಿತು ಕುತೂಹಲಕಾರಿ ವಿಷಯಗಳು ಹೊರಬಂದಿವೆ. ರಿತ್ತಿ ಕುಟುಂಬದ ಮನೆಯ ಪಾಯ ಅಗೆಯುವಾಗ ಸಿಕ್ಕಿದ್ದ ಈ ಆಭರಣಗಳು ಕೇವಲ ಬಂಗಾರವಲ್ಲ, ಅವು ಇತಿಹಾಸದ ಅಮೂಲ್ಯ ದಾಖಲೆಗಳಾಗಿವೆ. ಗದಗ ಜಿಲ್ಲಾಡಳಿತ ಭವನದಲ್ಲಿ ಡಿಸಿ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಪುರಾತತ್ವ ಶಾಸ್ತ್ರಜ್ಞರ ಸಮಿತಿ ಕೆಲವೊಂದು ಅಚ್ಚರಿಯ ವಿಚಾರಗಳನ್ನು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಆಭರಣಗಳು ಸುಮಾರು 500 ರಿಂದ 600 ವರ್ಷಗಳಷ್ಟು ಹಳೆಯವು. ಇವು ಕಲ್ಯಾಣ ಚಾಲುಕ್ಯರು ಮತ್ತು ವಿಜಯನಗರ ಅರಸರ ಕಾಲದ ಕಲೆ ಮತ್ತು ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ. ಇವು ಸಾಮಾನ್ಯ ಮಹಿಳೆಯರು ಧರಿಸುವ ಒಡವೆಗಳಲ್ಲ, ಬದಲಿಗೆ ಹೆಣ್ಣು ದೇವರಿಗೆ ಅಥವಾ ಉತ್ಸವ ಮೂರ್ತಿಗಳಿಗೆ ಅಲಂಕರಿಸುವ ಅಪರೂಪದ ಆಭರಣಗಳಾಗಿವೆ. ಇದರಲ್ಲಿ ಹೆಣ್ಣು ದೇವರ ಮೂರ್ತಿಯೂ ಪತ್ತೆಯಾಗಿದೆ. ಚಿನ್ನದ ಜೊತೆಗೆ ಈ ಆಭರಣಗಳಲ್ಲಿ ಅತ್ಯಂತ ಅಪರೂಪದ ನೀಲಮಣಿ, ಸ್ಪಟಿಕ, ಹವಳ ಸೇರಿದಂತೆ ರತ್ನಗಳನ್ನು ಬಳಸಲಾಗಿದೆ.

ಕೇವಲ ಚಿನ್ನದ ತೂಕದ (465 ಗ್ರಾಂ) ಲೆಕ್ಕಾಚಾರ ಹಾಕಿದರೆ ಇಂದಿನ ಮಾರುಕಟ್ಟೆ ದರದಲ್ಲಿ ಸುಮಾರು 35-40 ಲಕ್ಷ ರೂ. ಆಗಬಹುದು. ಆದರೆ ಇವುಗಳ ಆ್ಯಂಟಿಕ್ (ಪ್ರಾಚೀನ) ಮೌಲ್ಯ ಅಂದಾಜು 8 ಕೋಟಿ ರೂಪಾಯಿ. ಅಂದರೆ ಈಗಿನ ದರಕ್ಕಿಂತ ಹತ್ತು ಪಟ್ಟು ಹೆಚ್ಚು.

ಸಮಿತಿ ಚೇರ್ಮನ್ ಎಂ.ಎಸ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಕಲಾ ಇತಿಹಾಸಗಾರರಾದ ರಾಘವೇಂದ್ರ ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಶಾಸನ ತಜ್ಞ ಹನುಮಾಪಕ್ಷಿ ಗೋಗಿ, ರತ್ನಶಾಸ್ತ್ರಜ್ಞ ಪ್ರಭು ಕಮ್ಮಾರ ಮತ್ತು ಡಾ. ಶೇಜೇಶ್ವರ ಅವರ ತಂಡ ನಾಲ್ಕೈದು ಗಂಟೆಗಳ ಕಾಲ ಒಂದೊಂದು ಆಭರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular