ಬಾಲಿವುಡ್ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ‘ಧುರಂಧರ್: ದಿ ರಿವೇಂಜ್’ (Dhurandhar 2) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಅಡ್ವಾನ್ಸ್ ಬುಕಿಂಗ್ನಲ್ಲಿ ಈ ಸಿನಿಮಾ ಇತಿಹಾಸ ಬರೆಯುತ್ತಿದೆ.ಚಿತ್ರದ ಮೇಲಿರುವ ಭಾರಿ ಕ್ರೇಜ್ನಿಂದಾಗಿ ಟಿಕೆಟ್ ದರ ಗಗನಕ್ಕೇರಿದೆ. ದೆಹಲಿ ಮತ್ತು ಮುಂಬೈನ ಕೆಲವು ಚಿತ್ರಮಂದಿರಗಳಲ್ಲಿ ಒಂದು ಟಿಕೆಟ್ ಬೆಲೆ ಬರೋಬ್ಬರಿ 3,100 ರೂಪಾಯಿ ತಲುಪಿದೆ! ದೆಹಲಿಯ ಪಿವಿಆರ್ ಸೆಲೆಕ್ಟ್ ಸಿಟಿ ವಾಕ್ನಲ್ಲಿ 2,400 ರೂ. ವರೆಗೆ ದರವಿದೆ.
ಹೌದು. ಬುಕಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ಸುಮಾರು 3 ಲಕ್ಷ ಟಿಕೆಟ್ಗಳು ಮಾರಾಟವಾಗಿದ್ದು, ಬಿಡುಗಡೆಗೂ ಮುನ್ನವೇ ಸಿನಿಮಾ 15 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಬಾಲಿವುಡ್ ಚಿತ್ರವೊಂದರ ಪ್ರೀಮಿಯರ್ ಶೋಗೆ ಸಿಕ್ಕ ಅತಿ ದೊಡ್ಡ ಮೊತ್ತವಾಗಿದೆ.
ಬೆಂಗಳೂರಿನಲ್ಲಿ ದರ : ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಹಿಂದಿ ವರ್ಷನ್ ಟಿಕೆಟ್ ಬೆಲೆ 1,000 ರೂಪಾಯಿಗೂ ಅಧಿಕವಿದೆ. ಇನ್ನು ಕನ್ನಡ ಮತ್ತು ತೆಲುಗು ವರ್ಷನ್ ಟಿಕೆಟ್ಗಳು 400 ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿವೆ.
ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಭಾರತೀಯ ಗೂಢಚಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಮ್ಪಾಲ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್ 18ರ ಸಂಜೆಯಿಂದಲೇ ಸಿನಿಮಾದ ಪ್ರಿವ್ಯೂ ಶೋಗಳು ಆರಂಭವಾಗಲಿದ್ದು, ಮೊದಲ ಭಾಗದಂತೆಯೇ ಎರಡನೇ ಭಾಗವೂ ಸಾವಿರಾರು ಕೋಟಿ ಗಳಿಸುವ ಲಕ್ಷಣಗಳು ಕಾಣುತ್ತಿವೆ.

