HomeLatest Newsಕಾನ್ಪುರ: ಮಾಂಸಾಹಾರ ಸೇವಿಸಿದ ಪೂಜಾರಿ ವಿಡಿಯೋ ವೈರಲ್: ರೊಚ್ಚಿಗೆದ್ದ ಭಕ್ತರಿಂದ ಪೂಜಾರಿಯ ಮೇಲೆ ಹಲ್ಲೆ

ಕಾನ್ಪುರ: ಮಾಂಸಾಹಾರ ಸೇವಿಸಿದ ಪೂಜಾರಿ ವಿಡಿಯೋ ವೈರಲ್: ರೊಚ್ಚಿಗೆದ್ದ ಭಕ್ತರಿಂದ ಪೂಜಾರಿಯ ಮೇಲೆ ಹಲ್ಲೆ

ಕಾನ್ಪುರ: ದೇವಸ್ಥಾನದ ಪಾವಿತ್ರ್ಯತೆ ಕಾಪಾಡಬೇಕಾದ ಪೂಜಾರಿಯೇ ನಿಯಮ ಮೀರಿ ಮಾಂಸಾಹಾರ ಸೇವಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ರಾವತ್‌ಪುರದ ಪ್ರಸಿದ್ಧ ಭೂತೇಶ್ವರ ದೇವಾಲಯದ ಪೂಜಾರಿ ಪ್ರಶಾಂತ್ ಗಿರಿ ಎಂಬುವವರು ಹೋಟೆಲ್‌ವೊಂದರಲ್ಲಿ ಮಾಂಸದ ಅಡುಗೆ ಸವಿಯುತ್ತಿರುವ ದೃಶ್ಯ ವೈರಲ್ ಆಗಿದ್ದು, ಇದರಿಂದ ರೊಚ್ಚಿಗೆದ್ದ ಭಕ್ತರು ಪೂಜಾರಿಗೆ ಮೈ ಕೈ ನೋವಾಗುವಂತೆ ಥಳಿಸಿದ್ದಾರೆ.

ವೈರಲ್ ವಿಡಿಯೋ ತಂದ ಆಪತ್ತು

ಭೂತೇಶ್ವರ ದೇವಾಲಯದ ಆರತಿ ಸಮಿತಿಯ ಮುಖ್ಯಸ್ಥರಾಗಿದ್ದ ಪ್ರಶಾಂತ್ ಗಿರಿ, ಕಲ್ಯಾಣಪುರದ ಇಂದಿರಾ ನಗರದ ಹೋಟೆಲ್‌ವೊಂದರಲ್ಲಿ ಮಾಂಸಾಹಾರ ಸೇವಿಸುತ್ತಿದ್ದರು ಎನ್ನಲಾಗಿದೆ. ಈ ದೃಶ್ಯವನ್ನು ಕೆಲವು ಯುವಕರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ದೇವಸ್ಥಾನದ ಆವರಣದಲ್ಲೇ ವಾಸವಿದ್ದು, ಇಂತಹ ಅಪಚಾರ ಎಸಗಿರುವುದು ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಎರಡು ದಿನಗಳಿಂದ ಈ ವಿಡಿಯೋ ಸ್ಥಳೀಯವಾಗಿ ಸಂಚಲನ ಮೂಡಿಸಿತ್ತು. ಭಾನುವಾರ ರಾತ್ರಿ ಪೂಜಾರಿ ಪ್ರಶಾಂತ್ ದೇವಾಲಯದ ಬಳಿ ಕಾಣಿಸಿಕೊಳ್ಳುತ್ತಿದ್ದಂತೆ, ಸ್ಥಳೀಯರು ಮತ್ತು ಭಕ್ತರು ಅವರನ್ನು ಸುತ್ತುವರೆದಿದ್ದಾರೆ. ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ತಂದಿದ್ದೀರಿ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ದೊಡ್ಡ ಗುಂಪು ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

https://www.instagram.com/reel/DVqFJU-EVsp/?utm_source=ig_web_copy_link&igsh=MzRlODBiNWFlZA==

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಾವತ್‌ಪುರ ಪೊಲೀಸರು, ಉದ್ರಿಕ್ತ ಗುಂಪಿನಿಂದ ಪೂಜಾರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಗಾಯಗೊಂಡಿದ್ದ ಪೂಜಾರಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಪೊಲೀಸರ ಹೇಳಿಕೆ:

ಪೂಜಾರಿಯ ಮೇಲಿನ ಹಲ್ಲೆ ಮತ್ತು ವೈರಲ್ ವಿಡಿಯೋ ಎರಡನ್ನೂ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕಾನೂನು ಕೈಗೆತ್ತಿಕೊಂಡವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಸದ್ಯ ದೇವಸ್ಥಾನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ದೇವಾಲಯದ ಆಡಳಿತ ಮಂಡಳಿಯು ಈ ಘಟನೆಯನ್ನು ಖಂಡಿಸಿದ್ದು, ಪೂಜಾರಿಯನ್ನು ಸ್ಥಾನದಿಂದ ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular