ಚಿಕ್ಕಬಳ್ಳಾಪುರ: ಗೆಳತಿಯ ಪ್ರೀತಿಗೆ ಮಧ್ಯಸ್ಥಿಕೆ ವಹಿಸಿದಕ್ಕೆ ಪತಿ ಬೈದ ಕಾರಣಕ್ಕೆ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಆರ್.ಚೊಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರಲಕ್ಷ್ಮಿ(25) ಮೃತ ಮಹಿಳೆ. ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ವರಲಕ್ಷ್ಮೀ ಪತಿ ಬೈದಿದ್ದಾನೆ. ಗಂಡ-ಹೆಂಡತಿ ನಡುವೆ ಗಲಾಟೆಯಾಗಿದ್ದು, ಸಾವಿನಲ್ಲಿ ಅಂತ್ಯವಾಗಿದೆ.
ಸ್ನೇಹಿತೆಯ ಪ್ರಿಯಕರ ವರಲಕ್ಷ್ಮಿ ಫೋನ್ಗೆ ಕರೆ ಮಾಡಿದ್ದ. ಆದ್ರೆ, ಕರೆಯನ್ನು ವರಲಕ್ಷ್ಮಿ ಗಂಡ ಗಂಗರಾಜು ರಿಸಿವ್ ಮಾಡಿದ್ದ. ಬಳಿಕ ಗಂಗರಾಜು ಪ್ರೇಮಿಗಳ ಮದ್ಯೆ ಮದ್ಯಸ್ಥಿಕೆ ವಹಿಸಿಬೇಡ ಎಂದು ಹೆಂಡತಿಗೆ ಬೈದು ಬುದ್ಧಿವಾದ ಹೇಳಿದ್ದಾನೆ. ಅದೇನಾಯ್ತೋ ಏನೋ ವರಲಕ್ಷ್ಮಿ ಶವವಾಗಿ ಪತ್ತೆಯಾಗಿದ್ದು, ಪತಿಯೇ ವರಲಕ್ಷ್ಮೀಯನ್ನು ನೇಣಿಗೆ ಹಾಕಿ ಕೊಂದಿದ್ದಾನೆಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಪೆರೇಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

