HomeRecipiesಬಾಯಲ್ಲಿಟ್ಟರೆ ಕರಗುವ ವೇಗನ್ ಗಲೌಟಿ ಕಬಾಬ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಸ್ಪೆಷಲ್ ರೆಸಿಪಿ

ಬಾಯಲ್ಲಿಟ್ಟರೆ ಕರಗುವ ವೇಗನ್ ಗಲೌಟಿ ಕಬಾಬ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಸ್ಪೆಷಲ್ ರೆಸಿಪಿ

ಲಕ್ನೋ ಶೈಲಿಯ ಗಲೌಟಿ ಕಬಾಬ್ ಅಂದ ತಕ್ಷಣ ಸಾಮಾನ್ಯವಾಗಿ ಮಾಂಸಾಹಾರಿ ಖಾದ್ಯ ನೆನಪಾಗುತ್ತದೆ. ಆದರೆ ಈಗ ಸಸ್ಯಾಹಾರಿಗಳೂ ಕೂಡ ಅದೇ ರುಚಿಯನ್ನು ಸವಿಯಲು ‘ವೇಗನ್ ಗಲೌಟಿ ಕಬಾಬ್’ ರೆಸಿಪಿ ಸಿದ್ಧವಾಗಿದೆ. ಸಂಜೆ ಪಾರ್ಟಿ ಅಥವಾ ಮನೆಗೆ ಅತಿಥಿಗಳು ಬಂದಾಗ ತಯಾರಿಸಲು ಇದು ಅತ್ಯುತ್ತಮ ಸ್ಟಾರ್ಟರ್ ಎನ್ನಬಹುದು. ಪ್ರೋಟೀನ್ ಅಂಶದಿಂದ ಸಮೃದ್ಧವಾಗಿರುವ ಈ ಕಬಾಬ್ ಅನ್ನು ಬೇಯಿಸಿದ ಕಡಲೆ ಮತ್ತು ಕ್ವಿನೋವಾ ಬಳಸಿ ತಯಾರಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

  • ಬೇಯಿಸಿದ ಕಡಲೆ (Chickpeas): 1 ಕಪ್
  • ಬೇಯಿಸಿದ ಕ್ವಿನೋವಾ (Quinoa): 1 ಕಪ್
  • ಸಣ್ಣಗೆ ಹೆಚ್ಚಿದ ಈರುಳ್ಳಿ: 2
  • ಹಸಿಮೆಣಸಿನಕಾಯಿ: 3
  • ಕೊತ್ತಂಬರಿ ಸೊಪ್ಪು: 2 ಚಮಚ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಚಮಚ
  • ಗರಂ ಮಸಾಲಾ ಮತ್ತು ಜೀರಿಗೆ ಪುಡಿ: ತಲಾ 1 ಚಮಚ
  • ಧನಿಯಾ ಪುಡಿ ಮತ್ತು ಅಚ್ಚಖಾರದ ಪುಡಿ: ತಲಾ 1 ಚಮಚ
  • ಕಡಲೆ ಹಿಟ್ಟು: 3 ಚಮಚ
  • ಉಪ್ಪು ಮತ್ತು ಎಣ್ಣೆ: ರುಚಿಗೆ ತಕ್ಕಷ್ಟು

ತಯಾರಿಸುವ ಕ್ರಮ: ಮೊದಲು ಬೇಯಿಸಿದ ಕಡಲೆ ಮತ್ತು ಕ್ವಿನೋವಾವನ್ನು ಬ್ಲೆಂಡರ್‌ನಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಅದಕ್ಕೆ ಉಪ್ಪು, ಗರಂ ಮಸಾಲಾ, ಜೀರಿಗೆ ಪುಡಿ, ಖಾರದ ಪುಡಿ, ಧನಿಯಾ ಪುಡಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣಕ್ಕೆ ಕಡಲೆ ಹಿಟ್ಟು ಸೇರಿಸಿ ಹದವಾಗಿ ಕಲಸಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಕಬಾಬ್ ಅಥವಾ ಪ್ಯಾಟೀಸ್ ಆಕಾರ ನೀಡಿ. ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಕಬಾಬ್‌ಗಳನ್ನು ಎರಡೂ ಬದಿ ಕೆಂಪಾಗುವವರೆಗೆ ಬೇಯಿಸಿ. ಕಬಾಬ್‌ಗಳು ಗರಿಗರಿಯಾದ ನಂತರ ಅವುಗಳನ್ನು ತೆಗೆದು ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸದೊಂದಿಗೆ ಗಾರ್ನಿಶ್ ಮಾಡಿ ಸರ್ವ್ ಮಾಡಿ. ಬಾಯಲ್ಲಿಟ್ಟರೆ ಕರಗುವ ಈ ವೇಗನ್ ಕಬಾಬ್ ಸಸ್ಯಹಾರಿಗಳಿಗೆ ಹೊಸ ರುಚಿಯನ್ನು ನೀಡುವುದರಲ್ಲಿ ಸಂಶಯವಿಲ್ಲ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular