ಇಂಧನ ಬೆಲೆ ಏರಿಕೆಯಿಂದ ಕಂಗಾಲಾದ ರೈತರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ರೈತ ಶಕ್ತಿ ಯೋಜನೆ ಜಾರಿಗೊಳಿಸಿದೆ.
ಕೃಷಿ ಚಟುವಟಿಕೆಗಳಲ್ಲಿ ಟಿಲ್ಲರ್, ಟ್ರ್ಯಾಕ್ಟರ್ ಇತರೆ ಡೀಸೆಲ್ ಚಾಲಿತ ಯಂತ್ರಗಳ ಬಳಕೆ ಮಾಡುವ ರೈತರಿಗೆ ಸಹಾಯಧನ ನೀಡಲಾಗುವುದು. ಜಮೀನಿನ ಉಳುಮೆ ಮತ್ತು ಇತರ ಕೆಲಸಗಳಿಗೆ ಬಳಕೆ ಮಾಡುವ ಡೀಸೆಲ್ ಗೆ ನೇರ ನಗದು ಸಹಾಯಧನ ನೀಡಲಿದ್ದು, ಪ್ರತಿ ಎಕರೆಗೆ 250 ರೂ.ನಂತೆ ಪ್ರತಿ ರೈತರಿಗೆ ಗರಿಷ್ಠ 5 ಎಕರೆವರೆಗೆ 1250 ರೂ. ಗರಿಷ್ಠ ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು.
ಫ್ರೂಟ್ಸ್ ಪೋರ್ಟಲ್ ನಲ್ಲಿ ರೈತರು ನೋಂದಣಿಯಾಗಿದ್ದಲ್ಲಿ ಭೂ ದಾಖಲೆಗಳ ಆಧಾರದ ಮೇಲೆ ಕೃಷಿ ಇಲಾಖೆ ಅರ್ಹ ಫಲಾನುಭವಿಗಳನ್ನು ಗುರುತಿಸಲಿದೆ. ಸಮೀಪದ ರೈತಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ರೈತರು ನೋಂದಾಯಿಸಿಕೊಳ್ಳಬಹುದಾಗಿದೆ.

