HomeLatest Newsಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಕಪ್?

ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಕಪ್?

ಕಳೆದ ಕೆಲ ದಿನಗಳಿಂದ ಕ್ರಿಕೆಟ್ ಪ್ರಿಯರಿಗೆ ಹಬ್ಬದ ರಸದೌತಣ ಬಡಿಸಿದ್ದ ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಗೆ ನಾಳೆ ( ಮಾರ್ಚ್ 8 ) ನಡೆಯಲಿರುವ ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದೆ.

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಮುಖಿಯಾಗಲಿದ್ದು ಟ್ರೋಫಿಗಾಗಿ ಕೊನೆಯ ಪೈಪೋಟಿ ನಡೆಸಲಿವೆ.

ಈ ಮಹಾಕದನಕ್ಕಾಗಿ ಉಭಯ ತಂಡಗಳು ಸದ್ಯ ತಾಲಿಮಿನಲ್ಲಿ ತೊಡಗಿದ್ದು, ಈ ಬಾರಿ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ನಾಳೆ ನಡೆಯಲಿರುವ ಪಂದ್ಯಕ್ಕೆ ಒಂದು ವೇಳೆ ಮಳೆ ಅಡ್ಡಿಯನ್ನುಂಟು ಮಾಡಿದರೆ ಚಾಂಪಿಯನ್ ಪಟ್ಟ ಯಾರಿಗೆ ಒಲಿಯಲಿದೆ, ಐಸಿಸಿಯ ನಿಯಮ ಏನು ಹೇಳುತ್ತೆ ಎಂಬ ಮಾಹಿತಿ ಮುಂದಿದೆ.

ಐಸಿಸಿ ನಿಯಮದ ಪ್ರಕಾರ ಪಂದ್ಯದಲ್ಲಿ ಫಲಿತಾಂಶ ಪಡೆಯಲು ಒಂದು ಕಡೆಯ ಆಟ ಕನಿಷ್ಠವೆಂದರೂ 10 ಓವರ್ ನಡೆದಿರಬೇಕು. ಮಳೆಯಿಂದ ಪಂದ್ಯ ಆರಂಭವಾಗುವುದು ತಡವಾದರೆ 120 ನಿಮಿಷಗಳ ಕಾಲ ಪಂದ್ಯವನ್ನು ವಿಸ್ತರಿಸಬಹುದು.

ಹೀಗೆ ಮಾರ್ಚ್ 8ರಂದು ಮಳೆ ಅಡ್ಡಿಯನ್ನುಂಟುಮಾಡಿದರೆ ಮಾರ್ಚ್ 9ರಂದು ಮೀಸಲು ದಿನವಿರಲಿದ್ದು, ಪಂದ್ಯ ಎಲ್ಲಿಗೆ ನಿಲ್ಲಲಿದೆಯೋ ಅಲ್ಲಿಂದಲೇ ಮಾರನೇ ದಿನ ಪಂದ್ಯ ಮುಂದುವರೆಯಲಿದೆ. ಒಂದು ವೇಳೆ ಯಾವುದೇ ಎಸೆತ ಆಗದೆಯೇ ಪಂದ್ಯ ರದ್ದಾದರೆ ಮೀಸಲು ದಿನದಂದು ಸಂಪೂರ್ಣ ಪಂದ್ಯ ನಡೆಯಲಿದೆ.

ಮೀಸಲು ದಿನದಂದೂ ಸಹ ಮಳೆ ಬಂದು ಪಂದ್ಯ ನಡೆಯದಿದ್ದರೆ, ಎರಡೂ ತಂಡಗಳನ್ನು ಚಾಂಪಿಯನ್ ಎಂದು ಘೋಷಣೆ ಮಾಡಲಾಗುವುದು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular