HomeLatest Newsಆತನದ್ದು ತಲೆಇಲ್ಲದ ಬ್ಯಾಟಿಂಗ್, ಸಂಜು ಆಡುವಾಗ ಸಿಂಗಲ್ ತೆಗೆದುಕೊಳ್ಳುವುದಿಲ್ಲ: ಅಭಿಷೇಕ್ ಶರ್ಮಾಗೆ ತಿವಿದ ಭಾರತದ ಮಾಜಿ...

ಆತನದ್ದು ತಲೆಇಲ್ಲದ ಬ್ಯಾಟಿಂಗ್, ಸಂಜು ಆಡುವಾಗ ಸಿಂಗಲ್ ತೆಗೆದುಕೊಳ್ಳುವುದಿಲ್ಲ: ಅಭಿಷೇಕ್ ಶರ್ಮಾಗೆ ತಿವಿದ ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ

ಗುರುವಾರ ( ಮಾರ್ಚ್ 5 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಗೆಲುವನ್ನು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಕಳೆದ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದು ಹಾಲಿ ಚಾಂಪಿಯನ್ ಎನಿಸಿಕೊಂಡಿರುವ ಭಾರತ ಈ ಬಾರಿ ಟ್ರೋಫಿ ಗೆದ್ದು ಸತತವಾಗಿ ಎರಡು ಟ್ರೋಫಿ ಗೆದ್ದ ತಂಡ ಎಂಬ ದಾಖಲೆ ಬರೆಯುವತ್ತ ಕಣ್ಣಿಟ್ಟಿದೆ.

ಆದರೆ ಭಾರತ ತಂಡದಲ್ಲಿ ಬದಲಾವಣೆ ಬೇಕು, ಸತತವಾಗಿ ನೆಲಕಚ್ಚಿರುವ ಆಟಗಾರರನ್ನು ಫೈನಲ್ ಪಂದ್ಯದಿಂದ ಕೈಬಿಟ್ಟು ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಲ್ಲೂ ಟೂರ್ನಿಯಲ್ಲಿ ಜಿಂಬಾಬ್ವೆ ಹೊರತುಪಡಿಸಿ ಉಳಿದ ಬಲಿಷ್ಟ ತಂಡಗಳ ವಿರುದ್ಧ ಮಕಾಡೆ ಮಲಗಿ ಫಾರ್ಮ್ ಕಳೆದುಕೊಂಡಿರುವ ಅಭಿಷೇಕ್ ಶರ್ಮಾರನ್ನು ಕೈಬಿಡಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.

ಇದೇ ಸಮಯದಲ್ಲಿ ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸಹ ಅಭಿಷೇಕ್ ಶರ್ಮಾ ಆಟದ ಬಗ್ಗೆ ಮಾತನಾಡಿ ಆತನ ತಪ್ಪುಗಳನ್ನು ಟೀಕಿಸಿ, ಕೆಲ ಸಲಹೆಗಳನ್ನು ನೀಡಿದ್ದಾರೆ.

‘ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಚೆನ್ನಾಗಿ ಆಡಿದ್ದ, ಹಾಗಾಗಿ ಆತನ ಬಗ್ಗೆ ನನಗೆ ಯಾವುದೆ ಗಡಿಬಿಡಿ ಇಲ್ಲ. ಆದರೆ ನಾನು ಆತನ ಜತೆ ಮಾತನಾಡಿ ಯೋಜನೆ ಬಗ್ಗೆ ಮಾತನಾಡಲಿದ್ದೇನೆ. ದೊಡ್ಡ ಹೊಡೆತಗಳನ್ನು ಹೊಡೆಯಲು ಸದಾ ಯತ್ನಿಸಬೇಡ. ನನಗೆ ಅದು ತಲೆ ಇಲ್ಲದ ಬ್ಯಾಟಿಂಗ್ ಎನಿಸಿತು. ನಾನು ಆತನ ದೊಡ್ಡ ಅಭಿಮಾನಿ. ಆತನ ಉದ್ದೇಶ ಕೇವಲ ಆತ ರನ್ ಬಾರಿಸಬೇಕು ಎಂಬುದು. ಆದರೆ ಕೆಲವು ಬಾರಿ ನೀವು ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಸಂಜು ಒಂದೆಡೆ ಚೆನ್ನಾಗಿ ಆಡುತ್ತಿರುವಾಗ ಸಿಂಗಲ್ ತೆಗೆದುಕೊಂಡು ಜಾಗ ಮಾಡಿಕೊಡಬೇಕು. ನಿನ್ನ ಸಮಯ ಸಹ ಬರಲಿದೆ. ನೀನು ರನ್ ಬಾರಿಸುವ ಓವರ್ ಸಿಗಲಿದೆ’ ಎಂದು ರವಿಚಂದ್ರನ್ ಅಶ್ವಿನ್ ಹೇಳಿಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular