HomeKarnatakaBREAKING : ಬೆಂಗಳೂರಲ್ಲಿ 200ಕ್ಕೂ ಹೆಚ್ಚು ಅಕ್ರಮ ವಲಸಿಗರು ಪೊಲೀಸ್ ವಶಕ್ಕೆ , ಬಾಂಗ್ಲಾದೇಶಿಗರೇ ಹೆಚ್ಚು!

BREAKING : ಬೆಂಗಳೂರಲ್ಲಿ 200ಕ್ಕೂ ಹೆಚ್ಚು ಅಕ್ರಮ ವಲಸಿಗರು ಪೊಲೀಸ್ ವಶಕ್ಕೆ , ಬಾಂಗ್ಲಾದೇಶಿಗರೇ ಹೆಚ್ಚು!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ನಗರ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, 200ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಬಾಂಗ್ಲಾದೇಶ ಮೂಲದವರೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾ,  ಆಫ್ರಿಕಾ ಸೇರಿ ವಿವಿಧ ದೇಶಗಳಿಂದ ಬಂದು ನೆಲೆಸಿದ್ದರು.

ವಶಕ್ಕೆ ಪಡೆದವರಲ್ಲಿ 124ಕ್ಕೂ ಹೆಚ್ಚು ಮಂದಿ ಬಾಂಗ್ಲಾದೇಶದ ಪ್ರಜೆಗಳಾಗಿದ್ದು, ಉಳಿದವರು ಆಫ್ರಿಕಾ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ.

ಎಫ್ಆರ್ಆರ್ಒ (FRRO) ಭಾಗಿ: ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಧಿಕಾರಿಗಳ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆದಿದೆ. ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಿದ್ದವರನ್ನು ಗುರುತಿಸಲಾಗಿದೆ.

ನಕಲಿ ದಾಖಲೆಗಳಪತ್ತೆ: ವಿಚಾರಣೆಯ ವೇಳೆ ಹಲವರ ಬಳಿ ನಕಲಿ ಆಧಾರ್ಕಾರ್ಡ್‌ಗಳು, ಪಾನ್ ಕಾರ್ಡ್‌ಗಳು ಮತ್ತು ಸ್ಥಳೀಯ ವಿಳಾಸವಿರುವ ವಸತಿ ದಾಖಲೆಗಳು ಪತ್ತೆಯಾಗಿರುವುದು ಆಘಾತ ತಂದಿದೆ. ಇವರು ಸ್ಥಳೀಯರಂತೆ ನಟಿಸಿ ನಗರದ ವಿವಿಧೆಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.ನಿರಂತರ ಕಾರ್ಯಾಚರಣೆ: ಬೆಂಗಳೂರಿನ ವರ್ತೂರು, ಕಾಡುಗೋಡಿ ಸೇರಿದಂತೆ ಪೂರ್ವ ವಿಭಾಗದ ವಿವಿಧೆಡೆ ಈ ದಾಳಿ ನಡೆದಿದೆ. ನಗರದಾದ್ಯಂತ ಈ ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular