ಕೀನ್ಯಾ, ನೈರೋಬಿಯಂತಹ ಸಾವಿರಾರು ಕಿ.ಮೀ.ದೂರದಲ್ಲಿ ಇರುವ ಟೆಕ್ಕಿಗಳು ನಿಮ್ಮ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ನೀವು ಎಐ ಮೆಟಾ ಗ್ಲಾಸ್ ಬಳಕೆ ಮಾಡುತ್ತಿದ್ದರೆ ನೀವು ಅವರ ಕಣ್ಗಾವಲಿನಲ್ಲಿ ಇದ್ದೀರಿ ಎಚ್ಚರ.
ಈ ಕುರಿತ ವರದಿಯೊಂದು ಈಗ ಸಂಚಲನ ಮೂಡಿಸಿದೆ. ಮೆಟಾ ರೇ-ಬ್ಯಾನ್ ಗೌಪ್ಯತೆ ಕುರಿತ ವರದಿ ಇದಾಗಿದೆ. ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್‌ಗಳಲ್ಲಿ ಅಳವಡಿಸಲಾದ ಕ್ಯಾಮೆರಾ ಮತ್ತು ಮೈಕ್ರೊಫೋನ್‌ಗಳ ಮೂಲಕ ಸೆರೆಹಿಡಿಯಲಾದ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಸ್ವೀಡಿಷ್ ಪತ್ರಿಕೆಗಳಾದ ಗೋಟೆಬೋರ್ಗ್ಸ್-ಪೋಸ್ಟನ್ ಮತ್ತು ಸ್ವೆನ್ಸ್ಕಾ ಡಾಗ್ಬ್ಲಾಡೆಟ್ ವರದಿಯ ಪ್ರಕಾರ, ಕೀನ್ಯಾದಲ್ಲಿರುವ ಟೆಕ್ಕಿಗಳು ತಾವು ನೋಡಿದ ದೃಶ್ಯಗಳಲ್ಲಿ ಜನರು ಶೌಚಾಲಯಕ್ಕೆ ಹೋಗುವುದು, ಬಟ್ಟೆ ಬಿಚ್ಚುವುದು ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತಹ ದೃಶ್ಯಗಳನ್ನು ಗಮನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸೆರೆಹಿಡಿಯಲಾದ ಈ ದೃಶ್ಯಗಳನ್ನು ಸಾಮಾ ಎಂಬ ತಂತ್ರಜ್ಞಾನ ಗುತ್ತಿಗೆ ಸಂಸ್ಥೆಯ ಟೆಕ್ಕಿಗಳಿಗೆ ಕಳುಹಿಸಲಾಗುತ್ತದೆ. ಅವರು ಅದನ್ನು ಡೇಟಾ ಅನಾಟೇಟರ್‌ಗಳಾಗಿ ವಿಡಿಯೋಗಳನ್ನು ಪರಿಶೀಲಿಸಲು ಹಣ ಪಾವತಿಸಲಾಗುತ್ತದೆ.
ನಾವು ಲಿವಿಂಗ್ ರೂಮ್‌ಗಳಿಂದ ಹಿಡಿದು ಬೆತ್ತಲೆ ದೇಹಗಳವರೆಗೆ ಎಲ್ಲವನ್ನೂ ನೋಡುತ್ತೇವೆ. ಸ್ಮಾರ್ಟ್ ಗ್ಲಾಸ್‌ಗಳ ಮೂಲಕ ಚಿತ್ರೀಕರಿಸಿದ ಲೈಂಗಿಕ ದೃಶ್ಯಗಳೂ ಇವೆ, ಯಾರೋ ಅವುಗಳನ್ನು ಧರಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಟೆಕ್ಕಿಯೊಬ್ಬರು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕೆಲವು ವಿಡಿಯೋಗಳಲ್ಲಿ ಜನರು ಶೌಚಾಲಯಕ್ಕೆ ಹೋಗುವುದು ಅಥವಾ ಬಟ್ಟೆ ಬಿಚ್ಚುವುದನ್ನು ಕಾಣಬಹುದು. ಅವರಿಗೆ ಈ ಬಗ್ಗೆ ತಿಳಿದಿಲ್ಲ ಎಂದು ನಾವು ಭಾವಿಸುತ್ತೇನೆ. ಏಕೆಂದರೆ ಅವರಿಗೆ ತಿಳಿದಿದ್ದರೆ ಅವರು ಖಂಡಿತ ಅವರು ರೆಕಾರ್ಡ್ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಕೆಲವು ದೃಶ್ಯಗಳಲ್ಲಿ ಜನರ ಬ್ಯಾಂಕ್ ಕಾರ್ಡ್‌ಗಳು ಆಕಸ್ಮಿಕವಾಗಿ ಗೋಚರಿಸುತ್ತವೆ. ಇವು ಸೋರಿಕೆಯಾದರೆ ದೊಡ್ಡ ಹಗರಣಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಉದ್ಯೋಗಿಯೊಬ್ಬರು ಹೇಳುವಂತೆ, ಕೆಲಸ ಕಳೆದುಕೊಳ್ಳುವ ಭಯದಿಂದಾಗಿ ಅವರು ಈ ದೃಶ್ಯಗಳನ್ನು ನೋಡಲು ಮತ್ತು ಲೇಬಲ್ ಮಾಡುವ ಕೆಲಸ ಮಾಡುತ್ತಾರೆ. ನೀವು ನೋಡುತ್ತಿರುವುದು ಮತ್ತೊಬ್ಬರ ಖಾಸಗಿ ಜೀವನ ಎಂದು ನಿಮಗೆ ತಿಳಿದಿದೆ, ಆದರೆ ಅದೇ ಸಮಯದಲ್ಲಿ ನೀವು ಕೇವಲ ಕೆಲಸವನ್ನು ಪೂರೈಸಬೇಕೆಂದು ನಿರೀಕ್ಷಿಸಲಾಗುತ್ತದೆ.
ಮೆಟಾದ ನಿಯಮ ಮತ್ತು ಷರತ್ತುಗಳು: ಸ್ಮಾರ್ಟ್ ಗ್ಲಾಸ್‌ಗಳನ್ನು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಮತ್ತು ಬಳಕೆದಾರರೇ ತಮ್ಮ ಡೇಟಾದ ನಿಯಂತ್ರಣವನ್ನು ಹೊಂದಿರುತ್ತಾರೆ ಎಂದು ಮೆಟಾ ಹೇಳಿದೆ. ಈ ಜನಪ್ರಿಯ ಉತ್ಪನ್ನದ ಗೌಪ್ಯತಾ ನೀತಿಯು ಡೇಟಾವನ್ನು ಹೇಗೆ ಬಳಸಲಾಗುತ್ತದೆ? ಎಂಬುದನ್ನು ಅಸ್ಪಷ್ಟವಾಗಿ ವಿವರಿಸಿದೆ.
ಕೆಲವು ಸಂದರ್ಭಗಳಲ್ಲಿ ಮೆಟಾ ನಿಮ್ಮ ಮತ್ತು ಎಐ ನಡುವಿನ ಸಂಭಾಷಣೆಗಳು ಅಥವಾ ಸಂದೇಶಗಳ ವಿಷಯವನ್ನು ಒಳಗೊಂಡಂತೆ, ಎಐ ಜೊತೆಗಿನ ನಿಮ್ಮ ಸಂವಹನಗಳನ್ನು ಪರಿಶೀಲಿಸುತ್ತದೆ. ಈ ಪರಿಶೀಲನೆಯು ಸ್ವಯಂಚಾಲಿತವಾಗಿರಬಹುದು ಅಥವಾ ಮಾನವ ಹಸ್ತಕ್ಷೇಪದ ಮೂಲಕವೂ ಆಗಿರಬಹುದು.
ಎಐ ಬಳಸಬೇಕೆಂದು ಅಥವಾ ಉಳಿಸಿಕೊಳ್ಳಬೇಕೆಂದು ನೀವು ಬಯಸದ ಸೂಕ್ಷ್ಮ ವಿಷಯಗಳ ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಮೆಟಾ ಕನ್ನಡಕಗಳನ್ನು ಧರಿಸುವವರು, ಹೇ ಮೆಟಾ ಎಂದು ಹೇಳುವ ಮೂಲಕ ಎಐ ಚಾಟ್‌ಬಾಟ್‌ನೊಂದಿಗೆ ಮಾತನಾಡಬಹುದು.
ಈ ಎಐ ಅನ್ನು ಕ್ಯಾಮೆರಾವನ್ನು ಸಕ್ರಿಯಗೊಳಿಸಲು ಬಳಸಬಹುದು, ಇದು ಬಳಕೆದಾರರಿಗೆ ಮೊದಲ ವ್ಯಕ್ತಿಯ ವಿಡಿಯೋ ಕರೆಗಳನ್ನು ಮಾಡಲು ಅಥವಾ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಅನುಕೂಲ ಮಾಡಿಕೊಡುತ್ತದೆ.
ಎಸ್ಸಿಲ್ಲೋರ್ ಲಕ್ಸೋಟಿಕಾ ಜೊತೆಗೂಡಿ ತಯಾರಿಸಲಾದ ಮೆಟಾ ಸಂಸ್ಥೆಯು 2023 ಮತ್ತು 2024ರಲ್ಲಿ ಒಟ್ಟಾರೆಯಾಗಿ 2 ಮಿಲಿಯನ್ ಸ್ಮಾರ್ಟ್ ಗ್ಲಾಸ್‌ಗಳನ್ನು ಮಾರಾಟ ಮಾಡಿತ್ತು. ನಂತರ 2025ರಲ್ಲಿ ತನ್ನ ಎಐ ಕನ್ನಡಕಗಳ 7 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿದೆ.

