HomeKarnatakaರಾಮನಗರ, ಕನಕಪುರಕ್ಕೆ ಬಿಎಂಟಿಸಿ ಬಸ್: ದರ, ಮಾಸಿಕ ಪಾಸ್ ವಿವರ

ರಾಮನಗರ, ಕನಕಪುರಕ್ಕೆ ಬಿಎಂಟಿಸಿ ಬಸ್: ದರ, ಮಾಸಿಕ ಪಾಸ್ ವಿವರ

ಕರ್ನಾಟಕ ಸರ್ಕಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇವೆಯನ್ನು ವಿಸ್ತರಣೆ ಮಾಡಿದೆ. ಮಾರ್ಚ್ 4ರಿಂದ ಕನಕಪುರ, ರಾಮನಗರ ಜಿಲ್ಲಾ ಕೇಂದ್ರಕ್ಕೂ ಬಿಎಂಟಿಸಿ ಬಸ್ ಸಂಚಾರ ನಡೆಸುತ್ತಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಸೇವೆಗೆ ಬುಧವಾರ ಹಸಿರು ನಿಶಾನೆ ತೋರಿಸಿದ್ದಾರೆ. ರಾಮನಗರ, ಕನಕಪುರಕ್ಕೆ ಎಸಿ ವೋಲ್ವೊ ಬಸ್‌ಗಳನ್ನು ಬಿಎಂಟಿಸಿ ನಿಯೋಜನೆ ಮಾಡಿದ್ದು, ಈ ಬಸ್ ಸೇವೆಗೆ ‘ವಜ್ರ ವಿಸ್ತಾರ’ ಎಂದು ನಾಮಕರಣ ಮಾಡಲಾಗಿದೆ.

ಬೆಂಗಳೂರು ನಗರದ ವಿವಿಧ ಬಸ್ ನಿಲ್ದಾಣದಿಂದ ರಾಮನಗರ, ಕನಕಪುರಕ್ಕೆ ಬಿಎಂಟಿಸಿ ಬಸ್ ಸಂಚಾರವನ್ನು ನಡೆಸುತ್ತದೆ. ಈ ಬಸ್ ಸೇವೆ ದರ, ನಿಲ್ದಾಣ, ಮಾಸಿಕ ಪಾಸುಗಳ ವಿವರಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸ್‌ಗಳ ವಿವರ: V-EX-RMN-1 ಮಾರ್ಗದ ಬಸ್ ಕೆಬಿಎಸ್-ರಾಮನಗರ ನಡುವೆ ಸಂಚಾರ ನಡೆಸುತ್ತದೆ. ಒಟ್ಟು ಬಸ್‌ಗಳು 6. 36 ಟ್ರಿಪ್ ಸಂಚಾರವನ್ನು ನಡೆಸಲಿದೆ. ಟೋಲ್, ಜಿಎಸ್‌ಟಿ ಸೇರಿ ಪ್ರಯಾಣ ದರ 95 ರೂ.ಗಳು.

V-EX-KNP-1 ಮಾರ್ಗದ ಬಸ್ ಬನಶಂಕರಿ-ಕನಕಪುರ ನಡುವೆ ಸಂಚಾರವನ್ನು ನಡೆಸುತ್ತದೆ. ಒಟ್ಟು ಬಸ್‌ಗಳು 8. 48 ಟ್ರಿಪ್ ಸಂಚಾರವನ್ನು ನಡೆಸುತ್ತದೆ. ಜಿಎಸ್‌ಟಿ, ಟೋಲ್ ಸೇರಿ ಪ್ರಯಾಣ ದರ 90 ರೂ.ಗಳು.

ಇವು ಬಿಎಂಟಿಸಿ ಐಷಾರಾಮಿ ಎಸಿ ಬಸ್ ಆದ ಕಾರಣ ‘ಶಕ್ತಿ’ ಯೋಜನೆ ಅನ್ವಯವಾಗುವುದಿಲ್ಲ. ಆದ್ದರಿಂದ ಮಹಿಳಾ ಪ್ರಯಾಣಿಕರು ಸಹ ಹಣ ಪಾವತಿ ಮಾಡಿ ಟಿಕೆಟ್ ಪಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಪಾಸುಗಳ ವಿವರ

  • ದಿನದ ಪಾಸು – 180 ರೂ.
  • ವಾರದ ಪಾಸು – 1000 ರೂ.
  • ಮಾಸಿಕ ಪಾಸು – 2700 ರೂ.

ಬೆಂಗಳೂರು-ರಾಮನಗರ, ಬೆಂಗಳೂರು-ಕನಕಪುರ ಹಂತವಾರು ಟಿಕೆಟ್ ದರಗಳ ಮಾಹಿತಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular