HomeKarnatakaGOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಕರ್ನಾಟಕದಲ್ಲಿ 8,176 ಪೊಲೀಸ್ ಹುದ್ದೆಗಳ...

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಕರ್ನಾಟಕದಲ್ಲಿ 8,176 ಪೊಲೀಸ್ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ !

ಬೆಂಗಳೂರು :  ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಕೆಡರ್‌ನ ಒಟ್ಟು 8,176 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿದೆ. ಈ ಕುರಿತು ಡಿಜಿ ಮತ್ತು ಐಜಿಪಿ ಕಚೇರಿಯಿಂದ ಮಾರ್ಚ್ 4, 2026 ರಂದು ಅಧಿಕೃತ ಆದೇಶ ಹೊರಬಿದ್ದಿದೆ.

ಹೌದು. ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಸೇರಬಯಸುವ ಯುವಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಖಾಲಿ ಇರುವ ಒಟ್ಟು 8,176 ವಿವಿಧ ಪೊಲೀಸ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇಲಾಖೆಯು ಅಧಿಕೃತ ಪ್ರಕ್ರಿಯೆ ಆರಂಭಿಸಿದೆ. ವಿಶೇಷವಾಗಿ, ಪರಿಷ್ಕೃತ ಮೀಸಲಾತಿ ನಿಯಮಗಳ ಅನ್ವಯ ಈ ಬೃಹತ್ ನೇಮಕಾತಿ ನಡೆಯಲಿದ್ದು, ನಾಗರಿಕ (Civil), ಸಶಸ್ತ್ರ (Armed), ಮತ್ತು KSRP ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಮಾರ್ಚ್ 5ರೊಳಗೆ ಹುದ್ದೆಗಳ ವರ್ಗೀಕರಣ ಪಟ್ಟಿ ಸಿದ್ಧಪಡಿಸಲು ಡಿಜಿ ಮತ್ತು ಐಜಿಪಿ ಕಚೇರಿಯು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ.

ಹುದ್ದೆಗಳ ವಿವರ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
ಕ್ರಮ ಸಂಖ್ಯೆಹುದ್ದೆಯ ಹೆಸರುಕಲ್ಯಾಣ ಕರ್ನಾಟಕಕಲ್ಯಾಣ ಕರ್ನಾಟಕೇತರಒಟ್ಟು ಹುದ್ದೆಗಳು
01ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (DSI)051520
02ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (APC)27513751650
03ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (Civil)61035004110
04ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (KSRP)53215002032
05ಪೊಲೀಸ್ ಕಾನ್ಸ್ಟೇಬಲ್ (KSISF)364–364
ಒಟ್ಟು8176

ಮುಖ್ಯಾಂಶಗಳು:

  • ಮೀಸಲಾತಿ ಬದಲಾವಣೆ: ಪರಿಶಿಷ್ಟ ಜಾತಿ (SC) ಮೀಸಲಾತಿಯನ್ನು ಶೇ. 15 ರಿಂದಶೇ. 17 ಕ್ಕೆ ಮತ್ತು ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು ಶೇ. 3 ರಿಂದಶೇ. 7 ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ಈ ಹೊಸ ನಿಯಮದಂತೆ ಹುದ್ದೆಗಳ ವರ್ಗೀಕರಣ ಮಾಡಲು ಸೂಚಿಸಲಾಗಿದೆ.
  • ಹೈಕೋರ್ಟ್ ಆದೇಶ: ಮೀಸಲಾತಿ ಕುರಿತು ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶವನ್ನು ಪರಿಗಣಿಸಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಸರ್ಕಾರ ನಿರ್ದೇಶಿಸಿದೆ.
  • ಗಡುವು: ಎಲ್ಲಾ ಘಟಕಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹುದ್ದೆಗಳ ವರ್ಗೀಕರಣ ಪಟ್ಟಿಯನ್ನು (Rooster Points) ಸಿದ್ಧಪಡಿಸಿ ಮಾರ್ಚ್ 5, 2026 ರೊಳಗಾಗಿ ನೇಮಕಾತಿ ವಿಭಾಗಕ್ಕೆ ಸಲ್ಲಿಸಬೇಕೆಂದು ಡಿಜಿ ಮತ್ತು ಐಜಿಪಿ ಅವರು ಆದೇಶಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular