HomeKarnatakaಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ Whistle Blower Policy: ದೂರು ನೀಡುವುದು ಹೇಗೆ?

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ Whistle Blower Policy: ದೂರು ನೀಡುವುದು ಹೇಗೆ?

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ Whistle Blower Policy ಜಾರಿಗೊಳಿಸಲಾಗಿದೆ. ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶವಿದೆ. ದೂರು ನೀಡಿದವರ ಗುರುತು ಗೌಪ್ಯವಾಗಿಡಲಾಗುತ್ತದೆ ಎಂದು ಅಭಯ ನೀಡಲಾಗಿದೆ.

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ, ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಅಥವಾ ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗುವ ಯಾವುದೇ ಪಾಲುದಾರರ ವಿರುದ್ಧ ಭ್ರಷ್ಟಾಚಾರ, ವೈದ್ಯಕೀಯ ಮತ್ತು ವೈದ್ಯಕೀಯೇತರ ವಂಚನೆ ಅಥವಾ ಉದ್ದೇಶಪೂರ್ವಕವಾಗಿ ಅಥವಾ ವಿವೇಚನಾಯುತವಾಗಿ ಅಧಿಕಾರ ದುರುಪಯೋಗದಂತಹ ಯಾವುದೇ ಆರೋಪ ಕಂಡುಬಂದಲ್ಲಿ ದೂರು ನೀಡಬಹುದು.

ಆರೋಪಿತರ ವಿರುದ್ಧ ದೂರು/ ಮಾಹಿತಿ ನೀಡುವ ಯಾವುದೇ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಟ್ಟು ಇಂತಹ ಪ್ರಕರಣಗಳ ಮಾಹಿತಿ ಪಡೆದು ವಿಚಾರಣೆ ನಡೆಸಲು Whistle Blower Policy ಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಸರ್ಕಾರದ ಆದೇಶದ ಅನ್ವಯ ಅನುಷ್ಠಾನಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಂತೆ, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ, ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಅನುಷ್ಠಾನದಲ್ಲಿ ಭಾಗಿಯಾಗಿರುವ ಯಾವುದೇ ಪಾಲುದಾರರ ವಿರುದ್ಧ ಕೇಳಿಬರುವ ಅಂತಹ ಆರೋಪದ ಮೇಲೆ ದೂರುಗಳನ್ನು ಸ್ವೀಕರಿಸಲು, ವಿಚಾರಿಸಲು, ಅಂತಹ ದೂರು ನೀಡುವ ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡಲು ಹಾಗೂ ಅದಕ್ಕೆ ಪ್ರಾಸಂಗಿಕವಾದ ವಿಷಯಗಳ ಬಹಿರಂಗಪಡಿಸುವಿಕೆಯ ವಿರುದ್ಧ ಸಾಕಷ್ಟು ಸುರಕ್ಷತೆಗಳನ್ನು ಒದಗಿಸುವುದು Whistle Blower Policy ಉದ್ದೇಶವಾಗಿರುತ್ತದೆ.

ಗುರುತರ ಆರೋಪಗಳ ಬಹಿರಂಗ ಪಡಿಸುವಿಕೆಯನ್ನು ಸುರಕ್ಷಿತವಾಗಿ ಸ್ವೀಕರಿಸುವ ಮತ್ತು ಅದರ ಬಗ್ಗೆ, ವಿವರವಾದ ತನಿಖೆ ನಡೆಸಿ ಪ್ರಾಥಮಿಕ ವರದಿಯನ್ನು Whistle Blower ಸಮಿತಿಗೆ ಸಲ್ಲಿಸುವ ನಾಮನಿರ್ದೇಶಿತ/ ನೇಮಕಾತಿಗೊಂಡ ಒಬ್ಬ ಅಧಿಕಾರಿಯನ್ನು Whistle Blower ಅಧಿಕಾರಿ ಎಂದು ಕರೆಯಲಾಗುವುದು.

ಅದರಂತೆ ಮುಖ್ಯ ಜಾಗೃತಾಧಿಕಾರಿಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರು Whistle Blower ಅಧಿಕಾರಿ ಆಗಿರುತ್ತಾರೆ. Whistle Blower ಸಮಿತಿಯು ಅಧಿಕಾರಿ ಸಲ್ಲಿಸಿದ ತನಿಖಾ ವರದಿಯ ಕುರಿತು ಮತ್ತಷ್ಟು ಚರ್ಚಿಸಿ ಪರಿಶೀಲಿಸುತ್ತದೆ. ಈ ಸಮಿತಿಯು ಸಕ್ಷಮ ಪ್ರಾಧಿಕಾರದ ನಿರ್ದಿಷ್ಟ ಅನುಮೋದನೆಯ ಮೇರೆಗೆ ಅಗತ್ಯವಿರುವ ಯಾವುದೇ ಇತರ ಅಧಿಕಾರಿಯ ಸಹಾಯವನ್ನು ಪಡೆದು ಕ್ರಮ ಕೈಗೊಳ್ಳುತ್ತದೆ.

ಯಾವುದೇ ಮಾಹಿತಿ ಇದ್ದಲ್ಲಿ Whistle Blower ಅಧಿಕಾರಿಗೆ ಮಾಹಿತಿ ಸಲ್ಲಿಸಬಹುದು. ಮಾಹಿತಿ ಸಲ್ಲಿಸಿದವರ ವಿವರವನ್ನು ಗೌಪ್ಯವಾಗಿಡಲಾಗುವುದು. ದೂರು ಸಲ್ಲಿಸಲು ವಾಟ್ಸಪ್ ನಲ್ಲಿ ವಿವರವಾದ ಮಾಹಿತಿ ನೀಡಲು 9480819724 ಗೆ ಸಂಪರ್ಕಿಸಬಹುದು. ಆಸ್ಪತ್ರೆಗಳು, ಫಲಾನುಭವಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಮುಖ್ಯ ಜಾಗೃತಾಧಿಕಾರಿಗಳು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ‘ಆರೋಗ್ಯ ಸೌಧ’, 7ನೇ ಮಹಡಿ, 1ನೇ ಕ್ರಾಸ್, ಮಾಗಡಿ ರಸ್ತೆ, ಬೆಂಗಳೂರು-560 023 ಅಥವಾ ದೂರವಾಣಿ ಸಂಖ್ಯೆ 9480819724 ಅಥವಾ ಉಚಿತ ಸಹಾಯವಾಣಿ ಸಂಖ್ಯೆ 18004258330 ಹಾಗೂ ಇಮೇಲ್ ವಿಳಾಸ [email protected] ಗೆ ಸಂಪರ್ಕಿಸಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular