HomeIndiaBig Update: ಕಾಂಗ್ರೆಸ್‌ಗೆ ಗಡುವು ಕೊಟ್ಟ ಡಿಎಂಕೆ, ಹಿರಿಯ ನಾಯಕನಿಗೆ ಮಹತ್ವದ ಸೂಚನೆ ನೀಡಿದ ಕಾಂಗ್ರೆಸ್!

Big Update: ಕಾಂಗ್ರೆಸ್‌ಗೆ ಗಡುವು ಕೊಟ್ಟ ಡಿಎಂಕೆ, ಹಿರಿಯ ನಾಯಕನಿಗೆ ಮಹತ್ವದ ಸೂಚನೆ ನೀಡಿದ ಕಾಂಗ್ರೆಸ್!

ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಸೀಟು ಹಂಚಿಕೆ ಕುರಿತು ಅಂತಿಮ ನಿಲುವು ತಿಳಿಸುವಂತೆ ಡಿಎಂಕೆ ಕಾಂಗ್ರೆಸ್ ಪಕ್ಷಕ್ಕೆ ಗಡುವು ನೀಡಿದೆ. ಆದ್ದರಿಂದ ಡಿಎಂಕೆ ಜೊತೆ ಮಾತುಕತೆಯನ್ನು ನಡೆಸಲು ಪಕ್ಷ ಹಿರಿಯ ನಾಯಕರಿಗೆ ಮಹತ್ವದ ಸೂಚನೆ ನೀಡಿದೆ.

ಡಿಎಂಕೆ ಜೊತೆ ಸೀಟು ಹಂಚಿಕೆ ಕುರಿತು ಇಷ್ಟು ದಿನ ಕಾಂಗ್ರೆಸ್ ಪಕ್ಷದ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಮಾತುಕತೆ ನಡೆಸುತ್ತಿದ್ದರು. ಗೋವಾ ಮೂಲದ ಅವರ ಜೊತೆ ಡಿಎಂಕೆ ಮಾತುಕತೆ ವಿಫಲವಾಗಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಹುಲ್ ಗಾಂಧಿ ಆಪ್ತರಾದ ಕೆ.ಸಿ.ವೇಣುಗೋಪಾಲ್ ಒಮ್ಮೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭೇಟಿಯಾಗಿ ಮಾತುಕತೆ ನಡೆಸಿದರೂ ಸಹ ಸೀಟು ಹಂಚಿಕೆ ಅಂತಿಮವಾಗಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈಗ ಡಿಎಂಕೆ ಕಾಂಗ್ರೆಸ್ ನಿಲುವು ತಿಳಿಸಿ ಎಂದು ಗಡುವು ನೀಡಿದ ಹಿನ್ನಲೆಯಲ್ಲಿ ತಮಿಳುನಾಡು ಮೂಲದವರೇ ಆದ ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂಗೆ ಮಾತುಕತೆಯ ಜವಾಬ್ದಾರಿಯನ್ನು ನೀಡಿದೆ.

ಸೀಟು ಹಂಚಿಕೆ ಕಗ್ಗಂಟು: 25 + 1 ಅಂದರೆ 25 ವಿಧಾನಸಭೆ ಮತ್ತು 1 ರಾಜ್ಯಸಭೆ ಸೂತ್ರವನ್ನು ಕಾಂಗ್ರೆಸ್ ಮುಂದೆ ಡಿಎಂಕೆ ಇಟ್ಟಿದೆ. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 5 ಕೊನೆಯ ದಿನವಾಗಿದೆ. ಆದ್ದರಿಂದ ತಕ್ಷಣ ನಿಲುವು ತಿಳಿಸಬೇಕು ಎಂದು ಡಿಎಂಕೆ ಸೂಚನೆ ನೀಡಿದೆ.

ಆದ್ದರಿಂದ ಪಕ್ಷದ ಹೈಕಮಾಂಡ್ ನಾಯಕರು ಪಿ. ಚಿದಂಬರಂ ಬಳಿ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಜೊತೆ ಚರ್ಚಿಸುವಂತೆ ಸೂಚನೆ ನೀಡಿದೆ. ಇಂದು ಸಂಜೆ ಪಿ. ಚಿದಂಬರಂ ಸ್ಟಾಲಿನ್ ಭೇಟಿ ಮಾಡಲು ಸಮಯವನ್ನು ಪಡೆದಿದ್ದಾರೆ.

2 ರಾಜ್ಯಸಭೆ ಸೀಟು, 32ಕ್ಕೂ ಅಧಿಕ ವಿಧಾನಸಭೆ ಸೀಟುಗಳನ್ನು ನೀಡಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡಬೇಕು ಎಂದು ತಮಿಳುನಾಡಿನ ಕಾಂಗ್ರೆಸ್ ನಾಯಕರು ಡಿಎಂಕೆ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ ಇದನ್ನು ಡಿಎಂಕೆ ತಳ್ಳಿ ಹಾಕಿತ್ತು.

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ಹಾಲಿ ಆಡಳಿತ ಪಕ್ಷ ಡಿಎಂಕೆ. ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿಗಳು.

ದ್ರಾವಿಡ ಮುನ್ನೇಟ್ರಾ ಕಳಗಂ (ಡಿಎಂಕೆ) ಹೊರತುಪಡಿಸಿ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ)ದಲ್ಲಿ ಕಾಂಗ್ರೆಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ (CPI-M) ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಮತ್ತು ವಿಡುದಲೈ ಚಿರುತ್ತೈಗಳ್ ಕಚ್ಚಿ (VCK) ಪಕ್ಷಗಳಿವೆ.

ಮೈತ್ರಿಕೂಟದಲ್ಲಿ ಹೆಚ್ಚಿನ ಪಕ್ಷಗಳಿರುವ ಕಾರಣ ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಪೈಪೋಟಿ ಭಾರೀ ಇರುವ ಕಾರಣ ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ನೀಡಲು ಸಾಧ್ಯವಿಲ್ಲ. ಹೆಚ್ಚು ಎಂದರೆ 28 ಸೀಟು ನೀಡಬಹುದು ಎಂದು ಡಿಎಂಕೆ ಹೇಳುತ್ತಿದೆ. ಆದರೆ ಕಾಂಗ್ರೆಸ್ 32ಕ್ಕೂ ಅಧಿಕ ಸೀಟುಗಳು ಬೇಕು ಎಂದು ಪಟ್ಟು ಹಿಡಿದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular