HomeIndiaಕೇರಳ ಚುನಾವಣೆ: ಬಿಜೆಪಿಗೆ 10 ಕ್ಷೇತ್ರದಲ್ಲಿ ಗೆಲುವು ಎಂದ ಸಮೀಕ್ಷೆ

ಕೇರಳ ಚುನಾವಣೆ: ಬಿಜೆಪಿಗೆ 10 ಕ್ಷೇತ್ರದಲ್ಲಿ ಗೆಲುವು ಎಂದ ಸಮೀಕ್ಷೆ

ಕೇರಳ ರಾಜ್ಯದ 140 ಸದಸ್ಯ ಬಲದ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗ ಮಾರ್ಚ್ ಅಂತ್ಯದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. ಸತತ ಎರಡು ಬಾರಿ ಗೆಲ್ಲುವ ಮೂಲಕ ಎಡಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ರಾಜ್ಯದಲ್ಲಿ ಅಧಿಕಾರದಲ್ಲಿದೆ.

ಈ ಬಾರಿಯ ಚುನಾವಣೆಯಲ್ಲಿ ಎಲ್‌ಡಿಎಫ್, ಯುಡಿಎಫ್‌ ನಡುವೆ ಬಿಜೆಪಿಯ ಹೆಸರು ಕೇಳಿ ಬರುತ್ತಿದೆ. ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಮೇಯರ್ ಪಟ್ಟವನ್ನು ಪಡೆದಿರುವ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲಲಿದೆ? ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

ಕೇರಳ ಚುನಾವಣೆ ಕುರಿತು Onmanorama ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಇದರಲ್ಲಿ ಬಿಜೆಪಿ ರಾಜ್ಯದಲ್ಲಿ 3ನೇ ಸ್ಥಾನ ಪಡೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, 10ಕ್ಕೂ ಅಧಿಕ ಸೀಟುಗಳು ಬರಲಿವೆ ಎಂದು ಶೇ 33.25ರಷ್ಟು ಜನರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮೀಕ್ಷೆಯ ವರದಿ: ಈ ಸಮೀಕ್ಷೆಗಾಗಿ 7,465 ಜನರಿಂದ ಮಾಹಿತಿ ಸಂಗ್ರಹ ಮಾಡಲಾಗಿದೆ. ಶೇ 66.4ರಷ್ಟು ಜನರು ಬಿಜೆಪಿ ಈ ಬಾರಿ 10ಕ್ಕಿಂತ ಹೆಚ್ಚು ಸೀಟು ಪಡೆಯಲಿದೆ ಎಂದು ಅಂದಾಜಿಸಿದ್ದಾರೆ. ಆದರೆ ಬಿಜೆಪಿಗೆ 1 ಸೀಟು ಸಹ ಬರುವುದಿಲ್ಲ ಎಂದು ಶೇ 33.59ರಷ್ಟು ಜನರು ಹೇಳಿದ್ದಾರೆ.

  • ಬಿಜೆಪಿ 0 ಸೀಟು – ಶೇ33.59ರಷ್ಟು
  • 1-5 ಸೀಟು – ಶೇ 23.67ರಷ್ಟು
  • 6-10 ಸೀಟು – ಶೇ 9.5ರಷ್ಟು
  • 10ಕ್ಕೂ ಹೆಚ್ಚು ಸೀಟು – ಶೇ 33.25ರಷ್ಟು

ಬಿಜೆಪಿ 2016ರಲ್ಲಿ ರಾಜ್ಯದಲ್ಲಿ ಕೇವಲ ಒಂದು ಸೀಟು ಗೆದ್ದಿತ್ತು. ಒ.ರಾಜಗೋಪಾಲ್ ಸಿಪಿಎಂನ ವಿ.ಶಿವಕುಟ್ಟಿ ಅವರನ್ನು 8671 ಮತಗಳ ಅಂತರದಲ್ಲಿ ಸೋಲಿಸಿದ್ದರು. ಆದರೆ 2021ರಲ್ಲಿ ಆ ಸೀಟು ಸಹ ಬಿಜೆಪಿ ಕೈತಪ್ಪಿ ಹೋಗಿತ್ತು.

2024ರ ಲೋಕಸಭೆ ಚುನಾವಣೆ ಬಳಿಕ ಕೇರಳದ ರಾಜಕೀಯ ಚಿತ್ರಣ ಬದಲಾಗಿದೆ. ಆದ್ದರಿಂದ ಬಿಜೆಪಿ ಗೆಲ್ಲಬಹುದು ಎಂಬುದು ಜನರ ಅಭಿಪ್ರಾಯ. ಚುನಾವಣೆಯಲ್ಲಿ ಬಿಜೆಪಿ ತ್ರಿಶೂರ್‌ ಕ್ಷೇತ್ರದಲ್ಲಿ 74,686 ಮತಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು.

11 ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ಬಿಜೆಪಿ ತೋರಿಸಿತ್ತು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಪಕ್ಷ 10 + ಸೀಟು ಗೆಲ್ಲಬಹುದು ಎಂಬುದು ಫೆಬ್ರವರಿ 19 ರಿಂದ 25ರ ತನಕ ನಡೆದ ಸಮೀಕ್ಷೆಯ ಅಭಿಪ್ರಾಯವಾಗಿದೆ.

ಈಗ ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ಸತತ 2 ಬಾರಿ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಸರ್ಕಾರ ರಚನೆ ಮಾಡಿದ್ದು, 3ನೇ ಬಾರಿಯೂ ಅಧಿಕಾರ ಹಿಡಿಯುವ ಭರವಸೆಯಲ್ಲಿದೆ.

ಈ ಬಾರಿಯ ಚುನಾವಣೆ ಗೆಲ್ಲಬೇಕು ಎಂದು ಕಾಂಗ್ರೆಸ್‌ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮಾತ್ರವಲ್ಲದೆ ಬಿಜೆಪಿಯು ಕಾರ್ಯತಂತ್ರ ರೂಪಿಸುತ್ತಿದೆ. ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುಡಿಎಫ್‌ ಹೆಚ್ಚಿನ ಸೀಟುಗಳನ್ನು ಪಡೆದಿದ್ದು, ಚುನಾವಣೆ ಗೆಲ್ಲುವ ಉತ್ಸಾಹ ಇಮ್ಮಡಿಯಾಗಿದೆ.

ಯುಡಿಎಫ್ ಶಬರಿಮಲೆ ದೇವಾಲಯ ಚಿನ್ನದ ಕಳ್ಳತನ ಪ್ರಕರಣವನ್ನು ಚುನಾವಣಾ ಪ್ರಚಾರದ ಭಾಗವಾಗಿ ಮಾಡಿಕೊಂಡು ಎಲ್‌ಡಿಎಫ್ ಸರ್ಕಾರದ ಆಡಳಿತದ ಮೇಲೆ ಟೀಕೆಗಳನ್ನು ಮಾಡಲು ಮುಂದಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular