HomeAstroಬಾಬಾ ವಂಗಾ ಭವಿಷ್ಯ ನಿಜವಾಗುತ್ತಿದೆಯೇ? ಇರಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಶುರುವಾಯಿತೇ ಮಹಾಯುದ್ಧದ ಭೀತಿ!

ಬಾಬಾ ವಂಗಾ ಭವಿಷ್ಯ ನಿಜವಾಗುತ್ತಿದೆಯೇ? ಇರಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಶುರುವಾಯಿತೇ ಮಹಾಯುದ್ಧದ ಭೀತಿ!

ಫೆಬ್ರವರಿ 28ರ ಶನಿವಾರದಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಭೀಕರ ದಾಳಿಯು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಕಚೇರಿಯ ಸಮೀಪವೇ ಮೊದಲ ಬಾಂಬ್ ದಾಳಿ ನಡೆದಿದ್ದು, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ 1996ರಲ್ಲಿ ನಿಧನರಾದ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.

2026ರ ‘ಮಹಾಯುದ್ಧ’ದ ಮುನ್ಸೂಚನೆ ಬಾಬಾ ವಂಗಾ ಅವರ ಅನುಯಾಯಿಗಳ ಪ್ರಕಾರ, ಅವರು 2026ರ ಆರಂಭದಲ್ಲಿ ಪೂರ್ವ ರಾಷ್ಟ್ರಗಳಿಂದ (East) ಒಂದು ದೊಡ್ಡ ಯುದ್ಧ ಆರಂಭವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಈಗ ಇರಾನ್ ಮೇಲೆ ನಡೆದಿರುವ ದಾಳಿ ಮತ್ತು ಇರಾನ್ ನಡೆಸುತ್ತಿರುವ ಪ್ರತಿದಾಳಿಗಳು ಈ ‘ಮಹಾಯುದ್ಧ’ದ ಆರಂಭವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಸಂಘರ್ಷವು ಕ್ರಮೇಣ ಇಡೀ ವಿಶ್ವಕ್ಕೆ ಹರಡಬಹುದು ಎಂಬುದು ಅವರ ಭವಿಷ್ಯದ ಸಾರಾಂಶವಾಗಿತ್ತು.

ಯುರೋಪ್ ಮೇಲೆ ಭೀಕರ ಪರಿಣಾಮ? ಬಾಬಾ ವಂಗಾ ಅವರ ಪ್ರನ್ಬಾ ಭವಿಷ್ಯವಾಣಿಯ ಪ್ರಕಾರ, ಈ ಯುದ್ಧದಿಂದ ಪಶ್ಚಿಮ ರಾಷ್ಟ್ರಗಳು ಅದರಲ್ಲೂ ವಿಶೇಷವಾಗಿ ಯುರೋಪ್ ತೀವ್ರವಾಗಿ ಹಾನಿಗೊಳಗಾಗಲಿದೆ. ಯುರೋಪಿನ ಭೂಮಿ ಬಂಜರಾಗಬಹುದು ಮತ್ತು ಅಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯಬಹುದು ಎಂದು ಅವರು ಎಚ್ಚರಿಸಿದ್ದರು. ಇದೇ ಸಮಯದಲ್ಲಿ ರಷ್ಯಾ ಒಂದು ಪ್ರಬಲ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದು ಅವರ ಮತ್ತೊಂದು ಪ್ರಮುಖ ನುಡಿಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ರಂಪ್ ಮತ್ತು ನೆತನ್ಯಾಹು ಜಂಟಿ ಕಾರ್ಯಾಚರಣೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಸಹಯೋಗದೊಂದಿಗೆ ಇರಾನ್‌ನ ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ಆರಂಭಿಸಿರುವುದಾಗಿ ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಇರಾನ್ ಜನತೆಗೆ ಸಂದೇಶ ರವಾನಿಸಿದ್ದು, “ನಿಮ್ಮ ಸರ್ಕಾರವನ್ನು ಕಿತ್ತೊಗೆಯಲು ಇದೇ ನಿಮಗೆ ಸಿಕ್ಕಿರುವ ಏಕೈಕ ಅವಕಾಶ” ಎಂದು ಕರೆ ನೀಡಿದ್ದಾರೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಶಸ್ತ್ರತ್ಯಾಗ ಮಾಡಿದರೆ ಅವರಿಗೆ ರಕ್ಷಣೆ ನೀಡುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ.

ವಾಯುಪ್ರದೇಶ ಬಂದ್ ಯುದ್ಧದ ತೀವ್ರತೆಯಿಂದಾಗಿ ಇರಾನ್ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದೆ. ಇಸ್ರೇಲ್ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ವಿಮಾನ ನಿಲ್ದಾಣಗಳಲ್ಲಿ ಹಾರಾಟವನ್ನು ಸ್ಥಗಿತಗೊಳಿಸಿದೆ. ಮಿಸೈಲ್ ಮತ್ತು ಡ್ರೋನ್ ದಾಳಿಗಳ ಭೀತಿಯಿಂದಾಗಿ ಇಡೀ ಮಧ್ಯಪ್ರಾಚ್ಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular