ಚೆನ್ನೈ: ತಮಿಳುನಾಡಿನಲ್ಲಿ ಪ್ರಭಾವಿ ಹಾಗೂ ಶ್ರೀಮಂತರ ಮಕ್ಕಳಿಂದ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಕಾರು ಹತ್ತಿಸಿ ಹತ್ಯೆಗೈದಿರುವ ದಾರುಣ ಘಟನೆ ನಡೆದಿದೆ.
ಕಾರ್ಮಿಕ ಇಲಾಖೆಯ ಸಹಾಯಕ ನಿರೀಕ್ಷಕನನ್ನು ಹತ್ಯೆ ಮಾಡಲಾಗಿದೆ. ಹೊಸೂರಿನ ಅಣ್ಣೈ ಅರವಿಂದ್ ನಗರದಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕ ಇಲಾಖೆಯ ಸಹಾಯಕ ಸ್ಜಿವಮೂರ್ತಿ (54) ಮೃತ ದುರ್ದೈವಿ.
ಮನೆಯ ಮುಂದೆ ಬೈಕ್ ನಿಲ್ಲಿಸಿ ಕುಳಿತುದ್ದ ಶಿವಮೂರ್ತಿ ಗೆ ಕಾರಿನಲ್ಲಿ ವೇಗವಾಗಿ ಬಂದವರು ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ನಿಂದ ಕೆಳಗೆ ಬಿದ್ದ ಶಿವಮೂರ್ತಿ ಮೇಲೆಯೇ ಕಾರು ಹರಿದಿದೆ. ಈ ವೇಳೆ ಶಿವಮೂರ್ತಿ ಮಗ, ಸೊಸೆಗೂ ಗಂಭೀರವಾದ ಗಾಯಗಳಾಗಿವೆ.
ಪ್ರಕರಣ ಸಂಬಂಧ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದಿತ್ಯ(20), ರಿತಿಕ್ ಕುಮಾರ್ (19) ಹಾಗೂ ಹರೀಶ್ ಬಂಧಿತರು. ಹೊಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

